
ಚನ್ನಮ್ಮನ ಕಿತ್ತೂರು-೨೭ ಪೋಲಿಸರು ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೇ ಕಾನುನೂ ಅಡಿಯಲ್ಲಿ ಸಮಾಜಮುಖಿಯಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಸಿಪಿಐ ಶಿವಾನಂದ ಗುಡಗನಟ್ಟಿ ಹೇಳಿದರು.
ಸ್ಥಳೀಯ ಕಲ್ಮಠ ಆವರಣ ಶಂಕರ ಚಂದರಗಿ ಸಭಾಭವನದಲ್ಲಿ ಏರ್ಪಡಿಸಿದ್ದ ಪಿಎಸ್‌ಐ ಪ್ರವೀಣ ಗಂಗೋಳ ವರ್ಗಾವಣೆ ಹಾಗೂ ನೂತನ ಪಿಎಸ್‌ಐ ಭರತ ಎಸ್ ಅವರ ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಾರ್ವಜನಿಕರೊಂದಿಗೆ ವರ್ತಿಸುವ ಸಂದರ್ಭದಲ್ಲಿ ಜನಸಾಮಾನ್ಯರಂತೆ ವರ್ತಿಸಬೇಕು. ಮತ್ತು ನಾವು ಮಾತನಾಡುವ ಭಾಷೆ ಜನಸ್ನೇಹಿಯಾಗಿರಬೇಕು. ಅಂದಾಗ ನಾವು ಮಾಡುವ ಕೆಲಸಕ್ಕೆ ತೃಪ್ತಿ ಸಿಗುತ್ತದೆ ಎಂದರು.
ರಾಜಗುರು ಸಂಸ್ಥಾನ ಕಲ್ಮಠ ಮಡಿವಾಳ ರಾಜಯೋಗಿಂದ್ರ ಸ್ವಾಮಿಜಿ ಸಾನಿಧ್ಯವಹಿಸಿ ಆರ್ಶೀವಚನದೊಂದಿಗೆ ಮಾತನಾಡಿ ಪೋಲಿಸರ ಮತ್ತು ಸಾರ್ವಜನಿಕರ ಒಡನಾಟ ಸಂಬAಧ ಒಳ್ಳೆಯದಿರಬೇಕು ಅಂದಾಗ ಇಂತಹ ಕಾರ್ಯಗಳು ನೇರವೇರಲು ಸಾಧ್ಯ. ಸಂಬAಧ ಗಟ್ಟಿ ಇಲ್ಲದಿದ್ದರೆ ಇಂತಹ ಕಾರ್ಯ ನೇರವೇರಲು ಸಾಧ್ಯವಾಗುವುದಿಲ್ಲ ಎಂದರು.
ಉದ್ಯಮಿ ಹಾಗೂ ಸಮಾಜ ಸೇವಕ ಹಬೀಬ ಶಿಲ್ಲೇದಾರ, ಬಿಜೆಪಿ ಮಂಡಳ ಮಾಜಿ ಅಧ್ಯಕ್ಷ ಹಾಗೂ ಕೆಎಂಎಫ್ ನಿರ್ದೇಶಕ ಬಸವರಾಜ ಪರವಣ್ಣವರ, ಗ್ರಾಪಂ ಮಾಜಿ ಸದಸ್ಯ ಅನಿಲ್ ಎಮ್ಮಿ, ನಿವೃತ್ತ ಶಿಕ್ಷಕ ಡಿ.ಆರ್. ಪಾಟೀಲ, ಭೀಷ್ಟಪ್ಪ ಶಿಂಧೆ, ಚಂದ್ರಗೌಡ ಪಾಟೀಲ, ವಿವೇಕ ಕುರಗುಂದ ಮಾತನಾಡಿದರು. ಸಭೆಯಲ್ಲಿ ದೊಡವಾಡ ಠಾಣೆ ಪಿಎಸ್‌ಐ ನಿಂಗನಗೌಡ ಪಾಟೀಲ, ಅಪರಾಧ ವಿಭಾಗ ಪಿಎಸ್‌ಐ ಗಂಗಾಧರ ಹಂಪನ್ನವರ, ಪೇದೆ ಶಾಂತು ಪಾಟೀಲ ಸ್ವಾಗತಿಸಿದರು, ರಮೇಶ ಗೆಜೇರಿ, ಲಿಂಗರಾಜ ಗಳಗಿ, ಸುನೀಲ್ ಮುರಗೊಡ, ಪೇದೆ ಶರೀಪ್ ವಿವಿಧ ಗ್ರಾಮಗಳಿಂದ ಆಗಮಿಸಿದ ಗಣ್ಯರು ಸಾರ್ವಜನಿಕರು ಠಾಣಾ ಸಿಬ್ಬಂದಿಗಳಿದ್ದರು. ನೂತನ ಪಿಎಸ್‌ಐ ಅವರನ್ನು ಸತ್ಕರಿಸಿ ಸ್ವಾಗತಿಸಲಾಯಿತು.

























