Home ಜಿಲ್ಲೆ ನಾಳೆ ಪಿಂಚಣಿದಾರರಿAದ ನಿರಶನ

ನಾಳೆ ಪಿಂಚಣಿದಾರರಿAದ ನಿರಶನ

ಸಂಜೆವಾಣಿ ವಾರ್ತೆ,
ವಿಜಯಪುರ, ಏ. ೧೪:ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಏ. ೧೫ರಂದು ಪಿಂಚಣಿದಾರರು ಉಪವಾಸ ಸತ್ಯಾಗ್ರಹ ನಡೆಸಲು ನಿರ್ಧರಿಸಿದ್ದಾರೆ.
ಪಿಂಚಣಿದಾರರ ಕಚೇರಿಯಲ್ಲಿ ಈಚೆಗೆ ನಡೆದ ಪೂರ್ವಭಾವಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ರಾಷ್ಟ್ರೀಯ ಅಧ್ಯಕ್ಷ ಕಮಾಂಡರ್ ಅಶೋಕ ರಾವುತ್ ಅವರು ಮಾತನಾಡಿ, ಏ. ೧೫ರಂದು ಬೆಳಿಗ್ಗೆ ೧೦-೩೦ ರಿಂದ ಮಧ್ಯಾಹ್ನ ೧ ಗಂಟೆವರೆಗೆ ವಿಜಯಪುರದ ಅಂಬೇಡ್ಕರ್ ವೃತ್ತದಲ್ಲಿ ಸಾಂಕೇತಿಕವಾಗಿ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಲು ತೀರ್ಮಾನಿಸಲಾಗಿದೆ ಎಂದರು.
ಬೃಹತ್ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಕಾರ್ಮಿಕ ಮಂತ್ರಿ ಮನ್ಸೂಕ್ ಮಾಂಡೇವಿಯ ಅವರಿಗೆ ಮನವಿ ಸಲ್ಲಿಸಲಾಗುವದು ಎಂದು ಹೇಳಿದರು.
ಈಗಾಗಲೇ ತಿಳಿದಿರುವಂತೆ ಮಾ. ೩೦ ರಂದು ಲೋಕಸಭೆಯಲ್ಲಿ ನಡೆದ ಪ್ರಶ್ನೋತ್ತರ ವೇಳೆಯಲ್ಲಿ ಕೇಂದ್ರ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಅವರು ಸದನಕ್ಕೆ ಉತ್ತರಿಸಿದಂತೆ ಇಪಿಎಸ್-೯೫ ಪಿಂಚಣಿದಾರರ ಬೇಡಿಕೆಯನ್ನು ಈಡೇರಿಸಲು ಸರಕಾರ ವಿವಿಧ ಇಲಾಖೆಗಳ ಜೊತೆ ಮಾತುಕತೆ ನಡೆದಿದ್ದು,
ಪರಿಶೀಲಿಸಲಾಗುತ್ತಿದೆ. ಶೀಘ್ರದಲ್ಲೇ ಇತ್ಯರ್ಥ ಪಡಿಸುತ್ತೇವೆ ಎಂದು ತಿಳಿಸಿದ್ದಾರೆ. ಹಾಗಾಗಿ ಇದೇ ಲೋಕಸಭಾ ಅಧಿವೇಶನದಲ್ಲಿ ನಮ್ಮ ಬೇಡಿಕೆ ಈಡೇರಿಸಲೇಬೇಕೆಂಬ ಒತ್ತಾಯ ಮಾಡಲು ಈ ಸಾಂಕೇತಿಕ ಉಪವಾಸ ಮಾಡಲು ನಿರ್ಧಾರಿಸಲಾಗಿದೆ ಎದವರು ಸಭೆಗೆ ತಿಳಿಸಿದ್ದಾರೆ.
ಈ ಅರ್ಹ ಪಿಂಚಣಿ ಪಡೆಯಲು ಎಲ್ಲಾ ವಿಜಯಪುರ, ಬಾಗಲಕೋಟೆ ಹಾಗೂ ಬೆಳಗಾವಿ ಪಿಂಚಣಿದಾರರು ಈ ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸಲು ಸಭೆಯಲ್ಲಿ ಕೋರಲಾಗಿದೆ ಎಂದು ತಿಳಿಸಿದರು.
ಯಾರು ದಿಲ್ಲಿ ಹಾಗೂ ಬೆಂಗಳೂರಿನಲ್ಲಿ ನಡೆದಿದ್ದ ಪ್ರತಿಭಟನೆಗೆ ಭಾಗವಹಿಸಲು ಸಾಧ್ಯವಾಗಿಲ್ಲವೋ ಅವರೆಲ್ಲರೂ ಸಹ ಈ ಪ್ರತಿಭಟನೆಯಲ್ಲಿ ಭಾಗವಹಿಸಿ ಬಡ ಪಿಂಚಣಿದಾರರಿಗೆ ನ್ಯಾಯ ದೊರಕಿಸಿ ಕೊಡುತ್ತೀರೆಂದು ಮನವಿ ಮಾಡಿದರು. ಈ ಪುಣ್ಯ ಕಾರ್ಯದಲ್ಲಿ ಭಾಗಿಯಾಗುವವರೇ ನಿಜವಾದ ಹೋರಾಟಗಾರರು ಕಾರಣ. ನೀವು ನಿಮ್ಮ ಸ್ನೇಹಿತ ಪಿಂಚಣಿದಾರರನ್ನು ಕರೆದುಕೊಂಡು ಬನ್ನಿರಿ ಎಂದರು.
ಈ ಪ್ರತಿಭಟನೆಯಲ್ಲಿ ಅಖಿಲ ಕರ್ನಾಟಕದ ರಾಜ್ಯ ಕಾರ್ಯಾಧ್ಯಕ್ಷ ವೀರಕುಮಾರ ಗಡಾದ, ರಾಜ್ಯ ಉಪಾಧ್ಯಕ್ಷ ಚನ್ನಬಸಯ್ಯ, ಅನಿಲ್ ಇನಾಮದಾರ್ ಹಾಗೂ ರಾಷ್ಟ್ರ ಹಾಗೂ ರಾಜ್ಯ ನಾಯಕರು ಭಾಗವಹಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಶಾಂತಿನಾಥ ಪಾಟೀಲ್, ಗೋಪಾಲ ಬಿರಾದಾರ, ಬಿ. ಆರ್. ರಜಪೂತ, ಗುಂಡು ಸಂತನಾಳ, ಐ. ಎ. ಮುಶ್ರೀಫ ಮತ್ತಿತರರು ಉಪಸ್ಥಿತರಿದ್ದರು.