Home ಜಿಲ್ಲೆ ಕಲಬುರಗಿ ಛಲವಾದಿ ಸಮಾಜದಿಂದ ಡಾ.ಅಂಬೇಡ್ಕರರ ೧೩೫ನೇ ಜಯಂತಿ ವಿಜೃಂಭಣೆಯಿAದ ಆಚರಣೆ

ಛಲವಾದಿ ಸಮಾಜದಿಂದ ಡಾ.ಅಂಬೇಡ್ಕರರ ೧೩೫ನೇ ಜಯಂತಿ ವಿಜೃಂಭಣೆಯಿAದ ಆಚರಣೆ

ಸೇಡಂ, ಏ ,೨೯: ತಾಲೂಕಾ ಛಲವಾದಿ ಸಮಾಜದ ವತಿಯಿಂದ ವಿಶ್ವರತ್ನ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ೧೩೫ನೇ ಜಯಂತ್ಯೋತ್ಸವ ಪಟ್ಟಣದಲ್ಲಿ ಬಹು ವಿಜೃಂಭಣೆಯಿAದ ಆಚರಿಸಲಾಯಿತು. ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಶರಣಪ್ರಕಾಶ ಪಾಟೀಲ್ ಊಡಗಿ, ಮಾಜಿ ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ್ ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಈ ವೇಳೆಯಲ್ಲಿ ಜ್ಞಾನಪ್ರಕಾಶ ಸ್ವಾಮೀಜಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದರು, ಕೃಷಿಕ ಸಮಾಜದ ರಾಜ್ಯ ಪ್ರತಿನಿಧಿ ಬಸವರಾಜ ಪಾಟೀಲ ಊಡಗಿ,ಮಾಜಿ ಕಾಡಾ ಅಧ್ಯಕ್ಷರು ಮಹಾಂತಪ್ಪ ಸಂಗಾವಿ,ಶಿವಕುಮಾರ್ ಪಾಟೀಲ್ ತೇಲ್ಕೂರ್, ಜೈ ಭೀಮ್ ಊಡಗಿ, ಶ್ರೀನಿವಾಸ್ ಸಂಗಾವಿ, ಬಿಜೆಪಿಯ ಎಸ್ಸಿ ಘಟಕದ ಜಿಲ್ಲಾ ಉಪಾಧ್ಯಕ್ಷ ಶಿವಕುಮಾರ್ ತೋಟ್ನಳ್ಳಿ, ಸಾಗರ ಕಲಂಕAಬ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು