Home ಜಿಲ್ಲೆ ಕಲಬುರಗಿ ಎತ್ತು ಕಳ್ಳರ ಬಂಧಿಸಿ ಮಹಿಂದ್ರಾ ಪಿಕ್ ಆಪ್ ಮತ್ತು 80 ಸಾ ನಗದು ವಶಕ್ಕೆ

ಎತ್ತು ಕಳ್ಳರ ಬಂಧಿಸಿ ಮಹಿಂದ್ರಾ ಪಿಕ್ ಆಪ್ ಮತ್ತು 80 ಸಾ ನಗದು ವಶಕ್ಕೆ

ಅಫಜಲಪುರ:ಮೇ.14:ತಾಲೂಕಿನ ಗೊಬ್ಬೂರ(ಬಿ) ಗ್ರಾಮದ ಈರಣ್ಣ ರೇವೂರ ಎನ್ನುವವರ ಜಮೀನಿನಲ್ಲಿ ಕಟ್ಟಿದ್ದ ಎರಡು ಎತ್ತುಗಳನ್ನು ಕಳ್ಳತನ ನಡೆಸಿದ್ದ ಆರೋಪಿಗಳನ್ನು ದೇವಲ ಗಾಣಗಾಪುರ ಪೆÇಲೀಸರು ಬಂಧಿಸಿ 80 ಸಾವಿರ ರೂ.ನಗದು ಹಾಗೂ ಮಹಿಂದ್ರಾ ಪಿಕ್ ಅಪ್ ವಶಕ್ಕೆ ಪಡೆದುಕೊಂಡಿದ್ದಾರೆ.

ಏಪ್ರಿಲ್ 4ರಂದು ಈರಣ್ಣ ರೇವೂರ ಪೆÇಲೀಸ್ ಠಾಣೆಗೆ ದೂರು ದಾಖಲಿಸಿ ಗೊಬ್ಬುರ(ಬಿ) ಸೀಮಾಂತರದ ಜಮಿನು ಸರ್ವೆ ನಂ.445 ರಲ್ಲಿ ಕಟ್ಟಿದ್ದ 2 ಬಿಳಿಯ ಬಣ್ಣದ ಎತ್ತುಗಳನ್ನು ಮಾರ್ಚ್ 31ರಂದು ರಾತ್ರಿ ಸಮಯದಲ್ಲಿ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದಾರೆಂದು ದೂರಿನಲ್ಲಿ ವಿವರಣೆ ನೀಡಿದ್ದರು.

ಈ ಪ್ರಕರಣದ ತನಿಖೆ ನಡೆಸಲು ಡಿವೈಎಸ್ಪಿ ತಮ್ಮರಾಯ ಪಾಟೀಲ್, ಸಿಪಿಐ ಲಖನ್ ಮಸಗುಪ್ಪಿ, ಪಿಎಸ್‍ಐ ಸಂಗೀತಾ ಸಿಂಧೆ, ಎಎಸ್‍ಐ ರವಿಂದ್ರ, ಪೆÇಲೀಸ್ ಸಿಬ್ಬಂದಿಗಳಾದ ಸಂಗಣ್ಣ, ಗುರುರಾಜ, ಶಿವಾನಂದ, ಮತ್ತೂಮ್ ಪಟೇಲ್, ವಿಠ್ಠಲ್, ಶಿವಯ್ಯಾ, ಹುಲೇಪ್ಪ ರವರನ್ನೊಳಗೊಂಡಂತೆ ತಂಡ ರಚನೆ ಮಾಡಿ ಕಾರ್ಯಪ್ರವೃತ್ತರಾಗಿ ಈ ಪ್ರಕರಣದಲ್ಲಿ ಆರೋಪಿತರಾದ ಆಸೀಪ್ ಖುರೇಷಿ ಸಾ.ಎಮ್.ಎಸ್.ಕೆ ಮಿಲ್ ಕಲಬುರಗಿ, ಸೂಪಿಯಾನ ಖುರೇಷಿ ಸಾ.ಗೊಬ್ಬುರ(ಬಿ), ಅಕ್ಷರ ಬಿಲಾಲ ಶೇಕ್ ಸಾ.ಗೊಬ್ಬುರ(ಬಿ), ಬಾಬು ಭಜಂತ್ರಿ ಸಾ.ಹಾವನೂರ ಮತ್ತು ಎಮ್.ಡಿ.ಇಸ್ಮಾಯಿಲ್ ಖುರೇಷಿ ಸಾ.ನಯಿ ಕಮಾನ ಮಸ್ತಾಕಪೂರ ಬೀದರ ಬಂಧಿಸಿ ಆರೋಪಿತರಿಂದ 80 ಸಾವಿರ ರೂ.ನಗದು ಹಣ ಮತ್ತು ಮಹಿಂದ್ರಾ ಪಿಕ್ ಅಪ್ ವಾಹನ ವಶಪಡಿಸಿಕೊಳ್ಳಲಾಗಿದೆ.

ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಅಧಿಕಾರಿ ಮತ್ತು ಸಿಬ್ಬಂದಿಗಳ ಕಾರ್ಯವನ್ನು ಪೆÇಲೀಸ್ ವರಿಷ್ಠಾಧಿಕಾರಿ ಹಾಗೂ ಹೆಚ್ಚುವರಿ ಪೆÇಲೀಸ್ ವರಿಷ್ಠಾಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.