Home ಜಿಲ್ಲೆ ಕಲಬುರಗಿ ಹಸಿರು ಅಫಜಲಪುರ ತಾಲೂಕು ಮಾಡುವುದೇ ನಮ್ಮ ಗುರಿ ; ಶಾಸಕ ಎಂ.ವೈ.ಪಾಟೀಲ

ಹಸಿರು ಅಫಜಲಪುರ ತಾಲೂಕು ಮಾಡುವುದೇ ನಮ್ಮ ಗುರಿ ; ಶಾಸಕ ಎಂ.ವೈ.ಪಾಟೀಲ

ಅಫಜಲಪೂರ ; ಜು.7:ತಾಲೂಕು ಸಂಪೂರ್ಣ ಪರಿಸರಮಯವಾಗುವುದರಿಂದ ಮುಂದಿನ ಪೀಳಿಗೆಗೆ ಉತ್ತಮ ವಾತವರಣದಲ್ಲಿ ಬೆಳೆಯಲು ಸಹಕಾರಿಯಾಗಲಿದೆ
ಶಾಸಕ ಎಂ.ವೈ.ಪಾಟೀಲ ಹೇಳಿದರು.

ಅಫಜಲಪೂರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಂ.ವೈ. ಪಾಟೀಲ ಅವರ ಅಧ್ಯಕ್ಷತೆಯಲ್ಲಿ ?.1 ಕೋಟಿ ವೆಚ್ಚದ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನಕ್ಕೆ ಶಂಕುಸ್ಥಾಪನೆ ಮತ್ತು ?. 50 ಲಕ್ಷದಲ್ಲಿ ಸಾಮಾಜಿಕ ಅರಣ್ಯ ವಲಯದ ನೂತನ ವಲಯ ಅರಣ್ಯಾಧಿಕಾರಿಗಳ ಕಚೇರಿ ಕಟ್ಟಡ ಉದ್ಘಾಟಿಸಿ ಮಾತನಾಡಿ, ವೃಕ್ಷೋದ್ಯಾನ ನಿರ್ಮಾಣದಿಂದ ಪರಿಸರ ಸಂರಕ್ಷಣೆ, ಹಸಿರು ವಾತಾವರಣ ನಿರ್ಮಾಣ ಹಾಗೂ ಮುಂದಿನ ಪೀಳಿಗೆಗೆ ಪ್ರಕೃತಿ ಸಂಪತ್ತನ್ನು ಉಳಿಸುವ ಗುರಿ ಸಾಕಾರಗೊಳ್ಳಲಿದೆ ಎಂದು ಪಾಟೀಲ ತಿಳಿಸಿದರು.

ನೂತನ ಕಚೇರಿ ಕಟ್ಟಡದಿಂದ ಅರಣ್ಯ ಇಲಾಖೆಯ ಆಡಳಿತ ಕಾರ್ಯಗಳು ಇನ್ನಷ್ಟು ಪರಿಣಾಮಕಾರಿಯಾಗಿ ಹಾಗೂ ಜನಸ್ನೇಹಿಯಾಗಿ ನಡೆಯಲಿವೆ. ಹಸಿರು ಅಫಜಲಪೂರ, ಸುಂದರ ಅಫಜಲಪೂರ ಹಾಗೂ ಅಭಿವೃದ್ಧಿ ಹೊಂದಿದ ಅಫಜಲಪೂರ” ಎಂಬ ಸಂಕಲ್ಪದೊಂದಿಗೆ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ನಿರಂತರವಾಗಿ ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ಮಂಜುನಾಥ ಅಂಜುಟಗಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಚಂದ್ರಶೇಖರ ಕರಜಗಿ, ಗ್ಯಾರಂಟಿ ಸಮಿತಿ ಅಧ್ಯಕ್ಷ ಪ್ರಕಾಶ ಜಮಾದಾರ, ಮಾಜಿ ಜಿ.ಪಂ.ಸದಸ್ಯ ಸಿದ್ಧಾರ್ಥ್ ಬಸರಿಗಿಡ, ಕಾಂಗ್ರೆಸ್ ಹಿರಿಯ ಮುಖಂಡರಾದ ಸಿದ್ದು ಸಿರಸಗಿ, ಶರಣು, ಕುಂಬಾರ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸಾಗರ ಎಸ್. ತಾವಡೆ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಬಸವರಾಜ ಎಸ್. ಡಾಂಗೆ ಹಾಗೂ ಮಂಜುಳಾ, ವಲಯ ಅರಣ್ಯಾಧಿಕಾರಿಗಳಾದ ಜಗನ್ನಾಥ ಕೊರಳ್ಳಿ ಮತ್ತು ರೇವಣಸಿದ್ದಪ್ಪ ತಾವರಖೇಡ, ತಾಲೂಕು ದಂಡಾಧಿಕಾರಿ ಸಂಜೀವಕುಮಾರ ದಾಸರ, ಆರಕ್ಷಕ ನಿರೀಕ್ಷಕ ಲಖನ್ ಮಸಗುಪ್ಪಿ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಶಂಕರ ರಾಥೋಡ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಪಕ್ಷದ ಮುಖಂಡರು, ಪರಿಸರ ಪ್ರೇಮಿಗಳು, ಮಹಿಳಾ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.