
ನವಲಗುಂದ,ಮಾ.೮: ವ್ಯಕ್ತಿ ಮತ್ತು ಸಮಾಜದ ಆರೋಗ್ಯ ನಿರ್ಧಾರಣೆಯಲ್ಲಿ ಸಂಸ್ಕöÈತಿ, ವರ್ಗ, ಲಿಂಗ, ಮುಂತಾದ ಸಾಮಾಜಿಕ ಅಂಶಗಳ ಪಾತ್ರ ಮಹತ್ವದ್ದಾಗಿದ್ದು, ಇಂತಹ ಸಾಮಾಜಿಕ ಅಂಶಗಳ ಪಾತ್ರದ ಕುರಿತು ಅಧ್ಯಯನ ಸಂಶೋಧನೆ ಕೈಗೊಳ್ಳುವ ಸಮಾಜಶಾಸ್ತçದ ಪಾತ್ರ ಮಹತ್ವದ್ದು ಎಂದು ಧಾರವಾಡ ಶ್ರೀ ಮೃತ್ಯುಂಜಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಧಾರವಾಡದ, ಸಮಾಜಶಾಸ್ತç ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ನಾಗರಾಜ್ ಕೋಟಗಾರ್ ಅಭಿಪ್ರಾಯ ಪಟ್ಟರು.
ಅವರು ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಜರುಗಿದ ಐಕ್ಯೂ ಏಸಿ ಪ್ರಾಯೋಜಿತ ಮತ್ತು ಸಮಾಜಶಾಸ್ತç ವಿಭಾಗದಿಂದ ಆಯೋಜಿತ “ಆರೋಗ್ಯ ಮತ್ತು ಆರೋಗ್ಯ ನಿರ್ಧಾರಕಾಂಶಗಳಲ್ಲಿ ಸಮಾಜ ಶಾಸ್ತçದ ಪ್ರಸ್ತುತತೆ” ಎಂಬ ವಿಷಯದ ಕುರಿತಾದ ಒಂದು ದಿನದ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಕಾರ್ಯಗಾರದ ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯರಾದ ಎಂ ಬಿ ಬಾಗಡಿ ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ಸದೃಢ ದೇಹದಲ್ಲಿ ಸದೃಢ ಮನಸ್ಸು ಇರುತ್ತದೆ. ಎಲ್ಲ ವಿದ್ಯಾರ್ಥಿಗಳು ಒಳ್ಳೆಯ ಆರೋಗ್ಯ ಹೊಂದಲು ಸಲಹೆ ನೀಡಿದರು. ಇದೆ ವೇಳೆ ಸನ್ಮಾನ ಕಾರ್ಯಕ್ರಮ ಜರುಗಿತು.
ಐಕ್ಯೂ ಎಸಿ ಸಂಚಾಲಕರಾದ ಸಂತೋಷ್ ಹುಬ್ಬಳ್ಳಿ ಕಾರ್ಯಗಾರವನ್ನು ಉದ್ದೇಶಿಸಿ ಪ್ರಸ್ತಾವಿಕವಾಗಿ ಮಾತನಾಡಿದರು, ಕುಮಾರಿ ಗೀತಾ ಕುಲಕರ್ಣಿ ಗಣ್ಯರನ್ನು ಸ್ವಾಗತಿಸಿ, ಕುಮಾರಿ ಅಕ್ಷತಾ ಹುಚ್ಚನ ಗೌಡ್ರು ವಂದಿಸಿದಳು, ಕುಮಾರಿ ನಾಗೇಶ್ವರಿಗೆ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಐ ಕ್ಯೂ ಎಸಿ ಸಹ ಸಂಚಾಲಕರಾದ ಪ್ರಸನ್ನ ಪಂಡರಿ, ವಸಂತ ಮುಂದಿನಮನಿ ಮತ್ತು ಇತರ ಪ್ರಾಧ್ಯಾಪಕರು ಭಾಗವಹಿಸಿದ್ದರು.






















