
ಬಾದಾಮಿ,ಏ6: ತಾಲೂಕಿನ ಕೆಂದೂರ ಗ್ರಾಮದಲ್ಲಿ ಎಸ್.ಬಿ.ಎಂ.ಪದವಿ ಕಾಲೇಜಿನ ವತಿಯಿಂದ ಹಮ್ಮಿಕೊಂಡಿದ್ದ ಎನ್ಎಸ್ಎಸ್ ಶಿಬಿರದ 5 ನೇ ದಿನದ ರವಿವಾರ ಬೆಳಿಗ್ಗೆ ಕೆಂದೂರು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಎನ್ಎಸ್ಎಸ್ ವಾರ್ಷಿಕ ವಿಶೇಷ ಶಿಬಿರದಲ್ಲಿ ಕೆಂದೂರು ಗ್ರಾಮದ ಹಿರಿಯರ ಮಲ್ಲಿಕಾರ್ಜುನ ಕಮತಗಿಯವರಿಂದ ಎನ್ಎಸ್ಎಸ್ ಧ್ವಜಾರೋಹಣ ನೆರವೇರಿಸಲಾಯಿತು. ಸ್ವಾಮಿ ವಿವೇಕಾನಂದ ತಂಡವು ಧ್ವಜಾರೋಹಣ ಕಾರ್ಯಕ್ರಮವನ್ನು ನಿರ್ವಹಿಸಿತು.
ಮುಂಜಾನೆ ಪ್ರಜಾಪ್ರಭುತ್ವದಲ್ಲಿ ಮತದಾನದ ಮಹತ್ವದ ಕುರಿತು ಕೆಂದೂರು ಗ್ರಾಮದ ಬೀದಿ ಬೀದಿಗಳಲ್ಲಿ ಜಾತಾದ ಮೂಲಕ ಅರಿವು ಮೂಡಿಸಲಾಯಿತು.






















