
ನವಲಗುಂದ,ಏ7 : ಪ್ರಧಾನಿ ನರೇಂದ್ರ ಮೋದಿ ಹಾಗೂ ಸಂಸದರಾದ ಪ್ರಲಾದ ಜೋಶಿ ರವರು ಗ್ರಾಮಾಂತರ ಯುವಕರಿಗಾಗಿ ಸಂಸದರ ಕ್ರೀಡಾ ಮಹೋತ್ಸವ ಮಾಡಿ ಯಶಸ್ವಿಯಾಗಿರುವುದು ಸ್ಮರಣೀಯ ಎಂದು ಬಿಜೆಪಿ ಮುಖಂಡ ದೇವರಾಜ ದಾಡಿಭಾವಿ ಹೇಳಿದರು.
ಅವರು ತಾಲ್ಲೂಕಿನ ಮೊರಬ ಗ್ರಾಮದಲ್ಲಿ ದೇವರಾಜ ದಾಡಿಭಾವಿ ಅರ್ಪಿಸಿರುವ ಮೊರಬ ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿನ ಹಳ್ಳಿಗಳ ಯುವಕರಿಗಾಗಿ ಆಯೋಜಿಸಲಾದ ನಮೋ ಕ್ರಿಕೆಟ್ ಕಪ್ ಕಾರ್ಯಕ್ರಮದಲ್ಲಿ ಮಾತನಾಡಿದರು.
ತಾಲ್ಲೂಕಿನ ಎಲ್ಲ ಹಳ್ಳಿಗಳ ಯುವ ಪ್ರತಿಭೆಗಳಿಗಾಗಿ ನಮೋ ಕ್ರಿಕೆಟ್ ಕಪ್ ಆಯೋಜನೆ ಮಾಡಿದ್ದು ಯುವಕರು ಪಡೆದುಕೊಳ್ಳಬೇಕೊಳ್ಳವಂತೆ ಕರೆ ನೀಡಿದರು.
ಸಾನಿಧ್ಯವನ್ನು ಗ್ರಾಮದ ವೇ.ಮೂ, ಆನಂದ ಸ್ವಾಮಿ ಹಿರೇಮಠ ವಹಿಸಿದ್ದರು. ನವಲಗುಂದ ಮಂಡಲ ಬಿಜೆಪಿ ಅಧ್ಯಕ್ಷ ಗಂಗಪ್ಪ ಮನಮಿ ಕಾರ್ಯಕ್ರಮ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಹಿರಿಯರಾದ ಶಿವರಾಯಪ್ಪ ಆಯಟ್ಟಿ,ಮಂಜುನಾಥ ಕಾಲಾವಾಡ, ವೀರಭದ್ರಪ್ಪ ಜಾಕುಜಿ, ಮುತ್ತಣ್ಣ ಚುಳಕಿ, ಮಹೇಶ ರೋಣದ, ಈಶ್ವರ ಜಾಲಿಹಾಳ, ಶ್ರೀಧರ ಪಟ್ಟಣಶೆಟ್ಟಿ, ಸುಭಾಸ ಕಲ್ಲಿ, ಬಸಣ್ಣ ಡಿಟಿಗಿ, ಪ್ರತೀಕ ಕುಂದಗೋಳ ಸೇರಿ ಕ್ರೀಡಾಭಿಮಾನಿಗಳು ಸ್ಪರ್ದಾಳುಗಳು ಇದ್ದರು






















