
ಕಲಬುರಗಿ,ಜು.7: ರಸಗೊಬ್ಬರ ಖರೀದಿಸಲು ಕಲಬುರಗಿ ನಗರಕ್ಕೆ ತೆರಳಿದ್ದ ವ್ಯಕ್ತಿಯೊಬ್ಬರು ಬಳಿಕ ಶವವಾಗಿ ಪತ್ತೆಯಾಗಿದ್ದ ಪ್ರಕರಣವು ಇದೀಗ ಕೊಲೆ ಪ್ರಕರಣವೆಂದು ಬಹಿರಂಗವಾಗಿದ್ದು, ಘಟನೆಗೆ ಸಂಬಂಧಿಸಿದಂತೆ ನಾಲ್ವರನ್ನು ಪೆÇಲೀಸರು ಬಂಧಿಸಿದ್ದಾರೆ.
ಅಫಜಲಪುರ ತಾಲೂಕಿನ ಹಾವನೂರು ಗ್ರಾಮದ ಶಿವಕುಮಾರ್ ಹೊಸಮನಿ (35) ಕೊಲೆಯಾದ ವ್ಯಕ್ತಿ. ಪ್ರಕರಣದ ತನಿಖೆ ನಡೆಸಿದ ಪೆÇಲೀಸರು ಬಿದ್ದಾಪುರ ಕಾಲೋನಿಯ ಸಚಿನ್ ಅಲಿಯಾಸ್ ಪ್ರವೀಣಕುಮಾರ್ ಹೂಗಾರ, ಚನ್ನಪ್ಪ ಸೈದಪ್ಪ ಬಬಲಾದ, ಸಚಿನ್ ನಾಗಣ್ಣ ಸುಲ್ತಾನಪುರ ಹಾಗೂ ಶರಣಸಿರಸಗಿ ಗ್ರಾಮದ ಶಿವಕುಮಾರ್ ಹೊಳೆ ಎಂಬಾತರನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನೊಬ್ಬ ಆರೋಪಿಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ಪೆÇಲೀಸರು ತಿಳಿಸಿದ್ದಾರೆ.
ಬ್ಯಾನರ್ ಹರಿದಿದ್ದೇ ಕೊಲೆಗೆ ಕಾರಣ
ಶಿವಕುಮಾರ್ ಹೊಸಮನಿ ಅವರು ರಸಗೊಬ್ಬರ ತರಲು ಕಲಬುರಗಿಗೆ ತೆರಳಿದ್ದ ವೇಳೆ ನಾಪತ್ತೆಯಾಗಿದ್ದರು. ಬಳಿಕ ಅವರ ಶವ ಹಾವನೂರು ಗ್ರಾಮದ ಸಮೀಪ ಪತ್ತೆಯಾಗಿದ್ದು, ಪ್ರಕರಣ ಅನುಮಾನಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಕುಟುಂಬಸ್ಥರು ಇದು ಕೊಲೆ ಎಂದು ಶಂಕಿಸಿ, ಸಮಗ್ರ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿದ್ದರು.
ಶಿವಕುಮಾರ್ ಕಾಣೆಯಾಗಿದ್ದ ವೇಳೆ ಅಶೋಕನಗರ ಪೆÇಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣವೂ ದಾಖಲಾಗಿತ್ತು. ನಂತರ ತನಿಖೆಯನ್ನು ಚುರುಕುಗೊಳಿಸಿದ ಪೆÇಲೀಸರು ಹಲವು ಸುಳಿವುಗಳ ಆಧಾರದ ಮೇಲೆ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.ವಿಚಾರಣೆ ವೇಳೆ, ಬ್ಯಾನರ್ ಹರಿದಿದ್ದ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಶಿವಕುಮಾರ್ ಅವರನ್ನು ಹತ್ಯೆ ಮಾಡಿರುವುದಾಗಿ ಆರೋಪಿಗಳು ತಪೆÇ್ಪಪ್ಪಿಕೊಂಡಿದ್ದಾರೆ ಎಂದು ಪೆÇಲೀಸ್ ಮೂಲಗಳು ತಿಳಿಸಿವೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೊಬ್ಬ ಆರೋಪಿಯ ಬಂಧನಕ್ಕಾಗಿ ಪೆÇಲೀಸರು ಬಲೆ ಬೀಸಿದ್ದು, ತನಿಖೆ ಮುಂದುವರಿದಿದೆ.



























