
ಶಿರಹಟ್ಟಿ, ಮೇ೨೮: ತಾಲೂಕಿನ ಮೊದಲ ಗ್ರಾಮವಾದ ಮಾಗಡಿ ಯಿಂದ ತಾಲೂಕ ಕೇಂದ್ರ ಸ್ಥಳಕ್ಕೆ ಸಂಪರ್ಕಿಸುವ ಲೋಕೋಪಿಯೋಗಿ ಇಲಾಖೆಯ ಜಿಲ್ಲಾ ಮುಖ್ಯ ರಸ್ತೆ ಯ ಸುಮಾರು ೪೦೦ ಮೀಟರ್ ರಸ್ತೆಕೆಸರು ಗದ್ದೆಓಟಕ್ಕೆ ಹೇಳಿ ಮಾಡಿಸಿದಂತಿದೆ.
ಮಾಗಡಿ ಗ್ರಾಮದ ಸಿಸಿ ರಸ್ತೆಯಿಂದ ಸುಮಾರು ೪೦೦ ಮೀಟರ್ ರಸ್ತೆ ಈ ಮಳೆಗಾಲದಲ್ಲಿ ವಾಹನಗಳ ಸಂಚರಿಸುವುದೇ ದುಸ್ತರ ಎನ್ನುವಂತಾಗಿದೆ ಎಲ್ಲೆಂದರಲ್ಲಿ ಗುಂಡಿಗಳು ಬಿದ್ದು ಇಡೀ ರಸ್ತೆ ಅಸ್ತಿಪಂಜರದAತಾಗಿದೆ.
ಬೇಸಿಗೆಯಲ್ಲಿ ಲೋಕೋಪಯೋಗಿ ಇಲಾಖೆಯವರು ಕೊನೆಯ ಪಕ್ಷ ಗುಂಡಿಗಳ್ಳನ್ನಾದರೂ ತುಂಬಿ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕಾಗಿತ್ತು .
ಈ ಜಿಲ್ಲಾ ಮುಖ್ಯ ರಸ್ತೆಯ ೪೦೦ ಮೀಟರ್ ದಾಟುವುದೇ ಹರಸಾಹಸವಾಗಿದೆ.

























