Home ಜಿಲ್ಲೆ ಕಲಬುರಗಿ ಮೇ 16 ರಿಂದ ಮುಂಗಾರು ವಿಶೇಷ ಆಂದೋಲನ: ವಿಶಾಲಕುಮಾರ

ಮೇ 16 ರಿಂದ ಮುಂಗಾರು ವಿಶೇಷ ಆಂದೋಲನ: ವಿಶಾಲಕುಮಾರ

ಸೇಡಂ, ಮೇ,14: ತಾಲೂಕಿನಲ್ಲಿ 2026-27 ನೇ ಸಾಲಿನ ಮುಂಗಾರು ಹಂಗಾಮಿನ ಕುರಿತು ರೈತರಿಗೆ ಅರಿವು ಮೂಡಿಸುವ ಪ್ರಯುಕ್ತ (ದಿನಾಂಕ ಮೇ 16.05.2026 ರಿಂದ 30.05.2026 ರ ವರೆಗೆ) ಗ್ರಾಮ ಪಂಚಾಯತಿವಾರು ವಿಶೇಷ ಆಂದೋಲನ ಏರ್ಪಡಿಸಲಾಗಿದೆ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ವಿಶಾಲಕುಮಾರ್ ಪಾಟೀಲ್ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವ ಅವರು ಈ ಆಂದೋಲನವು ಮೇ 16ರಂದು ನೀಲಹಳ್ಳಿ, ಮಳಖೇಡ,ಕುಕ್ಕುಂದಾ, 18ರಂದು ಯಡಗಾ ತೇಲ್ಕೂರ, ಕುರುಕುಂಟಾ, 19 ರಂದು ಬಟಗೇರ,ಆಡಕಿ ಮದಕಲ್, 20ರಂದು ರಂಜೋಳ ,ಲಿಂಗಂಪಲ್ಲಿ, 21ರಂದು ಊಡಗಿ,ಕೊಡ್ಲಾ, ಬೆನಕನಹಳ್ಳಿ, ಹಂದರಕಿ, 22ರಂದು ಸಿಂಧನಮಡು, ಕೋಲ್ಕುಂದಾ, ದುಗ್ನೂರ್, 25ರಂದು ಮದನಾ, ಜಾಕನ್ಪಲ್ಲಿ, 26ರಂದು ಮುಧೋಳ್, ರಿಬ್ಬನ್ ಪಲ್ಲಿ, ಮೆದಕ್, 27ರಂದು ಮೋತಕಪಲ್ಲಿ, ಕಾನಗಡ್ಡಾ, ಇಟಕಾಲ, ಚಂದಾಪುರ್ ಗ್ರಾಮಗಳಲ್ಲಿ ದಿನಾಂಕವಾರು ಆಂದೋಲನದಲ್ಲಿ ರೈತರಿಗೆ ಮಣ್ಣು ಪರೀಕ್ಷೆ, ಬೀತ್ತನ ಬಿಜಗಳ ಗಟ್ಟಿಗೊಳುಸುವಿಕೆ, ಬೀಜೋಪಚಾರ, ರಾಸಾಯನಿಕ ಗೋಬ್ಬರಗಳ ಸಮತೋಲನ ಬಳಕೆ, ತೋಗರಿ ನಟೆ ಹಾಗೂ ಗೊಡ್ಡು ರೋಗ ನಿರ್ವಹಣೆ, ತಿಪ್ಪೆಗೊಬ್ಬರ ಉಪಚಾರ, ಬಸವನ ಹೂಳು ನಿರ್ವಹಣೆ, ಕಕ್ಕೂಟ ಕಳ ನಿಯಂತ್ರಣ, ಕಬ್ಬು ನಿರ್ವಹಣೆ ಹಾಗೂ ಬರ ನಿರೋಧಕ ಕ್ರಮಗಳ ಬಗ್ಗೆ ಮಾಹಿತಿ ನಿಗದಿ ಪಡಿಸಿರುವ ನೀಡಲಾಗುವುದು ಎಂದು ಹೇಳಿದ್ದಾರೆ. ಪ್ರತಿಯೊಬ್ಬ ರೈತರು ಭಾಗವಹಿಸಲು ವಿನಂತಿಸಿದ್ದಾರೆ