Home ಜಿಲ್ಲೆ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಶಾಸಕರು

ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಶಾಸಕರು

ಗುರುಮಠಕಲ್:ಎ.೧: ಗುರುಮಠಕಲ್ ಸಮೀಪದ ಬೋರಬಂಡಾ ಗ್ರಾಮದಿಂದ ಗುರುಮಠಕಲ್ ಪಟ್ಟಣಕ್ಕೆ ಹೋಗುವ ಮನುಷ್ಯರು ನಡೆಯುವ ಕಾಲುದಾರಿ, ಮಧ್ಯ ಭಾಗದಲ್ಲಿರುವ ಶ್ರೀ ಆಂಜನೇಯ ದೇವಸ್ಥಾನವು ಸುಮಾರು ಐದುನೂರೂ ವರ್ಷಗಳ ಹಿಂದಿನ ಹಳೆಯ ದೇವಾಸ್ಥಾನವು ಇದ್ದು, ಗ್ರಾಮದ ಮುಖಂಡರು ಸುದ್ದಿಗಾರರೊಂದಿಗೆ ಮಾತನಾಡುತ್ತ ಈ ಆಂಜನೇಯ ದೇವಸ್ಥಾನವು ಇದು ಬಹಾಳ ಹಳೆಯ ದೇವಸ್ಥಾನ ಹಿಂದಿನ ಕಾಲದಲ್ಲಿ ಬಸಪೂರ ಎಂಬ ಹೆಸರಿನ ಗ್ರಾಮವು ಇದ್ದು ಹಾಗಿನ ಕಾಲದಲ್ಲಿ ೨೫ ರಿಂದ ೩೦ ಮನೆಗಳು ಇದ್ದವು, ಈಗ ಮನೆಗಳು ಎಲ್ಲಾವು ಹೊಗಿ ದೇವಸ್ಥಾನವು ಒಂದೆ ಉಳಿದಿದೆ, ಆ ದೇವಸ್ಥಾನದಲ್ಲಿ ಮೂರ್ತಿ ಸ್ಥಾಪನೆ ಕಾರ್ಯಕ್ರಮ ಜರಗುವ ಈ ಭಕ್ತಿಯ ಕಾರ್ಯಕ್ರಮದಲ್ಲಿ , ಶನಿವಾರದಂದು ಜರುಗಿದ ಮೂರ್ತಿ ಪ್ರತಿಷ್ಠಾಪನೆ ಪೂಜಾ ಕಾರ್ಯಕ್ರಮದಲ್ಲಿ ಶಾಸಕರು ಶ್ರೀ ಶರಣುಗೌಡ ಕಂದಕೂರ ಅವರು ಆಂಜನೇಯ ದೇವಸ್ಥಾನದಲ್ಲಿ ದೇವರ ಮೂರ್ತಿ ಪ್ರತಿಷ್ಠಾಪನಾ ಭಕ್ತಿಯ ಪೂಜಾ ಕಾರ್ಯಕ್ರಮದಲ್ಲಿ

ಭಾಗಿಯಾಗಿದ್ದರು, ಬೋಡಬಂಡಾ ಗ್ರಾಮದಿಂದ ಸುಮಾರು ಒಂದು ಕಿಲೋಮೀಟರ್ ದೂರವಿರುವ ಈದೇವಸ್ಥಾನವು ಭಕ್ತರು ನಡೆದು ಕೊಂಡು ಹೊಗುವಾಗ ಮತ್ತು ವಾಹನಗಳ ಮೂಖಾಂತರ ಭಕ್ತರು ದೇವಸ್ಥಾನಕ್ಕೆ ಬಂದರು . ಈ ವೇಳೆ ರಾಮೇಶ್ ಪವರ್, ಬಂಜಾರ ಸಮಾಜದ ತಾಲೂಕು ಅಧ್ಯಕ್ಷರು ಕಾಶಿನಾಥ ರಾಠೋಡ್, ಶಂಕರ್ ಪವರ್, ಲಕ್ಷ್ಮಣ ನಾಯಕ್, ತುಳಜರಾಮ್ ರಾಠೋಡ್, ತೋಜ ನಾಯಕ್, ಸೂರ್ಯ ನಾಯಕ್, ವಾಸುರಾಮ್ ನಾಯಕ್, ನಾರಾಯಣ ಪವರ್, ಹಿರ್ಯನಾಯಕ್, ಊಷ ನಾಯಕ್, ಹಿರಮನ್ ಪವರ್, ದೇವು ಪವರ್ ಹಾಗೂ ಬೋರಬಂಡಾ ಗ್ರಾಮದ ಸದ್ಭಕ್ತರು, ಮತ್ತು ಮುಖಂಡರು ಈ ವೇಳೆ ಇದ್ದರು.