
ಕೊಲ್ಹಾರ:ಜೂ.21: ಮೇ 8ರಂದು ಪಟ್ಟಣದ ಹೊರವಲಯದ ರಾಷ್ಟೀಯ ಹೆದ್ದಾರಿ 218ರ ಬಳಿಯಿರುವ ಗಾಣಾದೇವಿ ಸರ್ಕಲ್ ನಲ್ಲಿ ಪೆÇಲೀಸ್ ಠಾಣಾ ಪಿ.ಎಸ್.ಐ ಶ್ರೀ ಅಶೋಕ ನಾಯಕ ಮತ್ತು ಸಿಬ್ಬಂದಿಗಳು ವಾಹನ ತಪಾಸಣೆ ಮಾಡುವಾಗ ಅಪ್ರಾಪ್ತ ವಯಸ್ಸಿನ ಹುಡುಗನೊಬ್ಬ ದ್ವಿ -ಚಕ್ರ ವಾಹನವನ್ನು ಚಾಲನೆ ಮಾಡಿಕೊಂಡು ಬರುತ್ತಿದ್ದು, ವಾಹನವನ್ನು ನಿಲ್ಲಿಸಿ ಬಾಲಕನ ತಂದೆಯ ಹೆಸರು ವಿಳಾಸ ಕೇಳಲಾಗಿ ಅಲ್ಲಾಭಕ್ಷ ಗುಡುಸಾಬ್ ಮುಳವಾಡ, ಸಾ-ಕಾರಜೋಳ, ತಾ-ಬಬಲೇಶ್ವರ ಎಂದು ತಿಳಿಸಿದ್ದು, ದ್ವಿ ಚಕ್ರ ವಾಹನವನ್ನು ವಶಕ್ಕೆ ಪಡೆದುಕೊಂಡು ಅಲ್ಲಾಭಕ್ಷ ರವರ ಮೇಲೆ ಕಲಂ-199(ಎ) ಐ.ಎಂ.ವಿ ಆಕ್ಟ್ ಅಡಿಯಲ್ಲಿ ದಿನಾಂಕ -20/06/2026 ರಂದು ಮಾನ್ಯ ಸಿ.ಜೆ & ಜೆ.ಎಂ.ಎಪ್.ಸಿ ನ್ಯಾಯಾಲಯ, ಬ.ಬಾಗೇವಾಡಿ ರವರು ಅಪ್ರಾಪ್ತ ಬಾಲಕನಿಗೆ ವಾಹನ ಚಲಾವಣೆ ಮಾಡಲು ಕೊಟ್ಟಿದ್ದ ಅಪ್ರಾಪ್ತ ಬಾಲಕನ ತಂದೆಗೆ 25000/- ರೂ ಗಳ ದಂಡ ಹಾಗೂ ವಾಹನದ ನೋಂದಣಿಯನ್ನು 6 ತಿಂಗಳ ಅವಧಿಗೆ ರದ್ದುಪಡಿಸಲು ವಿಜಯಪುರ ಅರ್.ಟಿ.ಓ ರವರಿಗೆ ಆದೇಶಿಸಿದ್ದು ಇರುತ್ತದೆ.


























