Home ಜಿಲ್ಲೆ ಕಲಬುರಗಿ ಜೂ 28ರಂದು ಹುಬ್ಬಳ್ಳಿಯಲ್ಲಿ ಯೋಗೀಶ್ವರ ಯಾಜ್ಞವಲ್ಕ್ಯ ಬ್ರಹ್ಮರ್ಷಿ ಅನುಯಾಯಿಗಳ ಸಮ್ಮೇಳನ

ಜೂ 28ರಂದು ಹುಬ್ಬಳ್ಳಿಯಲ್ಲಿ ಯೋಗೀಶ್ವರ ಯಾಜ್ಞವಲ್ಕ್ಯ ಬ್ರಹ್ಮರ್ಷಿ ಅನುಯಾಯಿಗಳ ಸಮ್ಮೇಳನ

ಕಲಬುರಗಿ, ಜೂ 21: ವೈದಿಕ ಸಂಸ್ಕøತಿಯ ಮಹಾನ್ ದಾರ್ಶನಿಕ, ಶುಕ್ಲ ಯಜುರ್ವೇದದ ದೃಷ್ಟಾರ ಹಾಗೂ ಉಪನಿಷತ್‍ಗಳ ಮಹಾಗುರುಗಳಾದ ಭಗವಾನ್ ಶ್ರೀ ಯೋಗೀಶ್ವರ ಯಾಜ್ಞವಲ್ಕ್ಯ ಬ್ರಹ್ಮರ್ಷಿಗಳ ದಿವ್ಯ ಜೀವನ, ತತ್ವಚಿಂತನೆ ಹಾಗೂ ಸನಾತನ ಧರ್ಮಕ್ಕೆ ಅವರು ನೀಡಿದ ಅಮೂಲ್ಯ ಕೊಡುಗೆಗಳನ್ನು ಜನಮಾನಸಕ್ಕೆ ಪರಿಚಯಿಸುವ ಉದ್ದೇಶದಿಂದ, ಶ್ರೀ ಯೋಗೀಶ್ವರ ಯಾಜ್ಞವಲ್ಕ್ಯ ಸೇವಾ ಟ್ರಸ್ಟ್ (ರಿ), ಹುಬ್ಬಳ್ಳಿ ಇವರ ಆಶ್ರಯದಲ್ಲಿ ಜೂನ್ 28, 2026ರ ಭಾನುವಾರ ‘ಶ್ರೀ ಯೋಗೀಶ್ವರ ಯಾಜ್ಞವಲ್ಕ್ಯ ಬ್ರಹ್ಮರ್ಷಿ ಅನುಯಾಯಿಗಳ ತಾಲೂಕಾ ಸಮ್ಮೇಳನ’ವನ್ನು ಹಳೇ ಹುಬ್ಬಳ್ಳಿಯ ಕಿಲ್ಲೆ ಪ್ರದೇಶದಲ್ಲಿರುವ ಶ್ರೀ ಕೃಷ್ಣೇಂದ್ರ ಸ್ವಾಮಿಗಳ ಮಠದಲ್ಲಿ ನಡೆಯಲಿರುವ ಈ ಸಮ್ಮೇಳನದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುವ ವಿಪ್ರಬಂಧುಗಳು, ಅನುಯಾಯಿಗಳು ಹಾಗೂ ಸಾರ್ವಜನಿಕರು ಭಾಗವಹಿಸಲಿದ್ದಾರೆ ಎಂದು ಟ್ರಸ್ಟಿನ ಅಧ್ಯಕ್ಷರಾದ ಶ್ರೀಯುತ ಸತ್ಯನಾರಾಯಣ ಮರಟಗೇರಿ ತಿಳಿಸಿದ್ದಾರೆ.

ಸಮ್ಮೇಳನವು ಬೆಳಿಗ್ಗೆ 9.00 ಗಂಟೆಗೆ ಶ್ರೀ ಯೋಗೀಶ್ವರ ಯಾಜ್ಞವಲ್ಕ್ಯ ಬ್ರಹ್ಮರ್ಷಿಗಳಿಗೆ ವಿಶೇಷ ಪೂಜೆ ನೆರವೇರಲಿದೆ. ನಂತರ ಬೆಳಿಗ್ಗೆ 10.00 ಗಂಟೆಗೆ ಸಮ್ಮೇಳನದ ಉದ್ಘಾಟನಾ ಸಮಾರಂಭ ಜರುಗಲಿದ್ದು, ಮಧ್ಯಾಹ್ನ 2.00 ಗಂಟೆಗೆ ಮಹಾಪ್ರಸಾದ ವಿತರಣೆ ನಡೆಯಲಿದೆ.

ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಆನಂದವನ ಅಗಡಿಯ ಪರಮ ಪೂಜ್ಯ ಶ್ರೀ ವಿಶ್ವನಾಥ ಚಕ್ರವರ್ತಿಗಳು ವಹಿಸಲಿದ್ದು, ಆಶೀರ್ವಚನ ನೀಡಲಿದ್ದಾರೆ. ಮುಖ್ಯ ಅತಿಥಿಗಳು ಹಾಗೂ ಉಪನ್ಯಾಸಕರಾಗಿ ಶ್ರೀ ಸತ್ಯನಾರಾಯಣ ಮುಜುಮದಾರ (ರಾಯಚೂರು), ಶ್ರೀಮತಿ ಸುರೇಖಾ ಕುಲಕರ್ಣಿ (ಹಾನಗಲ್), ಶ್ರೀ ಚಿದಂಬರ ದೇಶಪಾಂಡೆ (ಇಲಕಲ್) ಹಾಗೂ ಕಲಬುರಗಿಯ ಶ್ರೀ ವಿನುತ ಜೋಶಿ ಭಾಗವಹಿಸಿ ಯಾಜ್ಞವಲ್ಕ್ಯ ಬ್ರಹ್ಮರ್ಷಿಗಳ ಜೀವನ, ವೈದಿಕ ತತ್ವಗಳು, ಯೋಗಶಾಸ್ತ್ರ, ಉಪನಿಷತ್ ಚಿಂತನೆ ಮತ್ತು ಯಾಜ್ಞವಲ್ಕ್ಯ ಸ್ಮೃತಿಯ ಮಹತ್ವದ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ.

ಹುಬ್ಬಳ್ಳಿ-ಧಾರವಾಡ ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಸಾವಿರಾರು ಅನುಯಾಯಿಗಳು, ವಿಪ್ರಬಂಧುಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಶ್ರೀ ಯೋಗೀಶ್ವರ ಯಾಜ್ಞವಲ್ಕ್ಯ ಸೇವಾ ಟ್ರಸ್ಟ್ (ರಿ), ಹುಬ್ಬಳ್ಳಿ ಪ್ರಕಟಣೆಯಲ್ಲಿ ತಿಳಿಸಿದೆ.