Home ಜಿಲ್ಲೆ ಕಲಬುರಗಿ ವೈದ್ಯ ವೃತ್ತಿ ಕೇವಲ ಉದ್ಯೋಗವಲ್ಲ, ಪವಿತ್ರ ಸಾಮಾಜಿಕ ಜವಾಬ್ದಾರಿ : ಡಾ. ವಿಜಯಲಕ್ಷ್ಮಿ ದೇಶಮಾನೆ

ವೈದ್ಯ ವೃತ್ತಿ ಕೇವಲ ಉದ್ಯೋಗವಲ್ಲ, ಪವಿತ್ರ ಸಾಮಾಜಿಕ ಜವಾಬ್ದಾರಿ : ಡಾ. ವಿಜಯಲಕ್ಷ್ಮಿ ದೇಶಮಾನೆ

ಕಲಬುರಗಿ,ಜೂ.21: ವೈದ್ಯಕೀಯ ವೃತ್ತಿ ಎಂಬುದು ಕೇವಲ ಜೀವನೋಪಾಯದ ಉದ್ಯೋಗವಲ್ಲ, ಅದೊಂದು ಅತ್ಯಂತ ಪವಿತ್ರವಾದ ಸಾಮಾಜಿಕ ಜವಾಬ್ದಾರಿ. ಹೊಸದಾಗಿ ವೃತ್ತಿಗೆ ಕಾಲಿಡುತ್ತಿರುವ ನವ ವೈದ್ಯರು ಸಮಾಜದ ಜವಾಬ್ದಾರಿಯುತ ನಾಗರಿಕರಾಗಿ ಸೇವೆ ಸಲ್ಲಿಸಬೇಕು ಎಂದು ಬೆಂಗಳೂರು ಕಿದ್ವಾಯಿ ಸ್ಮಾರಕ ಗ್ರಂಥಿ ರೋಗಗಳ ಸಂಸ್ಥೆ ಮಾಜಿ ನಿರ್ದೇಶಕಿ, ಪದ್ಮಶ್ರೀ ಪುರಸ್ಕøತ ಡಾ. ವಿಜಯಲಕ್ಷ್ಮಿ ದೇಶಮಾನೆ ಹೇಳಿದರು.
ನಗರದ ಸೇಡಂ ರಸ್ತೆಯ ಇಎಸ್‍ಐಸಿ ವೈದ್ಯಕೀಯ ಕಾಲೇಜಿನಲ್ಲಿ 8ನೇ ವರ್ಷದ ಪದವಿ ಪ್ರದಾನ ಸಮಾರಂಭದಲ್ಲಿ ಶನಿವಾರ ಎಂಬಿಬಿಎಸ್ ಪದವಿ ಪೂರೈಸಿದ ವಿದ್ಯಾರ್ಥಿಗಳನ್ನುದ್ದೇಶಿಸಿ ಅವರು ಮಾತನಾಡಿದರು.
ವೈದ್ಯರಿಗೆ ಆಸ್ಪತ್ರೆಯೇ ದೇಗುಲ ಮತ್ತು ರೋಗಿಯೇ ದೇವರು. ನಾವು ಕೇವಲ ಆ ದೇವರ ಸೇವೆ ಮಾಡುವ ಪೂಜಾರಿಗಳμÉ್ಟೀ. ಹೀಗಾಗಿ ಆಸ್ಪತ್ರೆಗೆ ಬರುವ ರೋಗಿಗಳ ನೋವನ್ನು ನಿವಾರಿಸುವುದೇ ನಮ್ಮ ಮೊದಲ ಆದ್ಯತೆಯಾಗಬೇಕು. ವೈದ್ಯರು ಸಮಾಜದಲ್ಲಿ ಅಹಂಕಾರವನ್ನು ತೊರೆದು, ಕೋಪವನ್ನು ಸಂಪೂರ್ಣ ನಿಯಂತ್ರಣದಲ್ಲಿಟ್ಟುಕೊಂಡು, ಸದಾ ಸತ್ಯದ ಹಾದಿಯಲ್ಲಿ ನಡೆಯಬೇಕು. ಯಾವುದೇ ಫಲಾಪೇಕ್ಷೆಯಿಲ್ಲದೆ ಕರುಣೆಯಿಂದ ಜನರ ಸೇವೆ ಮಾಡಬೇಕು ಹಾಗೂ ಸದಾ ಜಾಗರೂಕರಾಗಿ ಸಾಮಾನ್ಯ ಜ್ಞಾನದಿಂದ ವೃತ್ತಿ ನಿರ್ವಹಿಸಬೇಕು ಎಂದರು.
ಗೌರವ ಅತಿಥಿಯಾಗಿ ಭಾಗವಹಿಸಿದ್ದ ಐಆರ್‍ಎಸ್ ಅಧಿಕಾರಿ ಡಾ.ಸಂತೋμï ಮಂಕೋಸ್ಕರ್ ಮಾತನಾಡಿ, ವೈದ್ಯಕೀಯ ಶಿಕ್ಷಣದಲ್ಲಿ ಎಂಬಿಬಿಎಸ್ ಪದವಿ ಪಡೆಯುವುದು ಸುದೀರ್ಘ ಪರಿಶ್ರಮದ ಅಂತ್ಯವಲ್ಲ, ಬದಲಿಗೆ ಸಮಾಜದ ಸೇವೆಗೆ ಇಡುವ ಹೊಸ ಭರವಸೆಯ ಹೆಜ್ಜೆ. ನಾಳೆಯಿಂದ ರೋಗಿಗಳು ತಮ್ಮ ಆರೋಗ್ಯ, ಆಸೆ ಹಾಗೂ ಜೀವವನ್ನೇ ನಿಮ್ಮ ಕೈಯಲ್ಲಿ ನಂಬಿ ಒಪ್ಪಿಸುತ್ತಾರೆ. ಇಂತಹ ಗೌರವದ ವೃತ್ತಿಯಲ್ಲಿ ಸದಾ ದೊಡ್ಡ ಗುರಿಯನ್ನು ಹೊಂದಿರಿ. ತಮ್ಮ ವೈಯಕ್ತಿಕ ಜೀವನದ ಸವಾಲುಗಳನ್ನು ನೆನಪಿಸಿಕೊಂಡ ಅವರು, ಯಾವುದೇ ಹಿನ್ನಡೆಗೆ ಧೃತಿಗೆಡದೆ, ಕಳೆದುಹೋಗುವ ಅಮೂಲ್ಯ ಸಮಯವನ್ನು ಸದುಪಯೋಗಪಡಿಸಿಕೊಂಡು ಪರಿಶ್ರಮ ಮತ್ತು ಸ್ಥಿರತೆಯಿಂದ ಮುನ್ನಡೆಯಿರಿ ಎಂದು ತಿಳಿಸಿದರು.
ಇಎಸ್‍ಐಸಿ ವೈದ್ಯಕೀಯ ಕಾಲೇಜಿನ ಡೀನ್ ಡಾ.ಸಂತೋಷ ಕ್ಷೀರಸಾಗರ ಮಾತನಾಡಿ, ಐದು ವರ್ಷಗಳ ಹಿಂದೆ ಪೆÇೀಷಕರು ನಮ್ಮ ಸಂಸ್ಥೆಯ ಮೇಲಿಟ್ಟಿದ್ದ ನಂಬಿಕೆಯನ್ನು ನಾವು ಯಶಸ್ವಿಯಾಗಿ ಉಳಿಸಿಕೊಂಡಿದ್ದೇವೆ. ವಿದ್ಯಾರ್ಥಿಗಳನ್ನು ಅತ್ಯಂತ ಸಮರ್ಥ ಹಾಗೂ ಆತ್ಮವಿಶ್ವಾಸವುಳ್ಳ ವೈದ್ಯರನ್ನಾಗಿ ರೂಪಿಸಿ, ಇಂದು ಬಡ್ಡಿ ಸಮೇತ ಹೆತ್ತವರಿಗೆ ಮರಳಿ ನೀಡುತ್ತಿದ್ದೇವೆ ಎಂದು ಹೇಳಿದರು.
ಪದವಿ ಪಡೆದ ವೈದ್ಯರು ಜೀವನದಲ್ಲಿ ಎμÉ್ಟೀ ಎತ್ತರಕ್ಕೆ ಬೆಳೆದರೂ ಹೆತ್ತವರನ್ನು ಮತ್ತು ಹುಟ್ಟೂರನ್ನು ಎಂದಿಗೂ ಮರೆಯಬಾರದು. ಸದಾ ‘ದೇಶವೇ ಮೊದಲು’ ಎಂಬ ದೇಶಪ್ರೇಮದ ಭಾವನೆಯನ್ನು ಹೊಂದಿರಬೇಕು ಮತ್ತು ತಮಗೆ ಶಿಕ್ಷಣ ನೀಡಿದ ಮಾತೃ ಸಂಸ್ಥೆಯನ್ನು ನೆನೆಯುತ್ತಾ, ರೋಗಿಗಳಿಗೆ ವಿನಮ್ರತೆಯಿಂದ ಸೇವೆ ಸಲ್ಲಿಸಬೇಕು ಎಂದರು.

17 ಸಾಧಕರಿಗೆ ಚಿನ್ನದ ಪದಕ :
ಇಲ್ಲಿನ ವೈದ್ಯಕೀಯ ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ 126 ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ವೈದ್ಯಕೀಯ ಪದವಿ ಪ್ರದಾನ ಮಾಡಲಾಯಿತು. ಕಾಲೇಜಿಗೆ ರ್ಯಾಂಕ್ ತಂದ ಹಾಗೂ ವಿವಿಧ ವಿಷಯಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ 17 ವಿದ್ಯಾರ್ಥಿಗಳಿಗೆ ಚಿನ್ನದ ಪದಕ (ಗೋಲ್ಡ್ ಮೆಡಲ್) ನೀಡಿ ಗೌರವಿಸಲಾಯಿತು.

ಇಎಸ್‍ಐಸಿ ಪ್ರಾಧ್ಯಾಪಕಿ ಡಾ.ಜ್ಯೋತಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ಡಾ. ಪ್ರಶಾಂತ ಪಾಟೀಲ, ಡಾ. ಅನೀಸ್ ಐಶಾ ವೇದಿಕೆಯಲ್ಲಿದ್ದರು. ಪದವಿ ಪಡೆಯಲಿರುವ ವಿದ್ಯಾರ್ಥಿಗಳ ಜೊತೆಗೆ ಅವರ ಪೆÇೀಷಕರನ್ನೂ ವೇದಿಕೆಯಲ್ಲಿ ಕರೆದಿದ್ದು ವಿಶೇಷವಾಗಿತ್ತು. ಕರ್ನಾಟಕ, ಕೇರಳ, ಪುದುಚೇರಿ, ತಮಿಳುನಾಡು, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಿಂದ ಬಂದು ಅಧ್ಯಯನ ನಡೆಸಿದ್ದ ವಿದ್ಯಾರ್ಥಿಗಳ ಪೆÇೀಷಕರು ಸಮಾರಂಭದಲ್ಲಿ ಭಾಗವಹಿಸಿದ್ದರು.