Home ಜಿಲ್ಲೆ ಕಲಬುರಗಿ ಬಸವ ಜಯಂತಿ ಆಚರಣೆ

ಬಸವ ಜಯಂತಿ ಆಚರಣೆ

ಕಲ್ಬುರ್ಗಿ :ಏ.20: ಸರ್ಕಾರಿ ಪಾಲಿಟೆಕ್ನಿಕ್ ಆಫ್ಜಲ್ಪುರ ಸಂಸ್ಥೆಯಲ್ಲಿ ಸಾಂಸ್ಕøತಿಕ ನಾಯಕ ವಿಶ್ವಗುರು ಬಸವಣ್ಣನವರ ರವರ ಜಯಂತೋತ್ಸವ ಕಾರ್ಯಕ್ರಮವನ್ನು ಬಸವಣ್ಣರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಸಸಿ ನೆಡುವ ಮೂಲಕ ಆಚರಣೆ ಮಾಡಲಾಯಿತು.
ಸಂಸ್ಥೆಯ ವಿದ್ಯಾರ್ಥಿ ಸಂಘದ ಪದಾಧಿಕಾರಿ ರಾಹುಲ್, ಬಸವಣ್ಣರವರ ಕುರಿತು ಭಾಷಣ ಮಾಡಿದರು. ಪ್ರಾಚಾರ್ಯರಾದ ಡಾ. ಪ್ರಭುದೇವ್ ಎಂ. ಎಸ್, ಮಾತನಾಡಿ ವಿಶ್ವಗುರು ಬಸವಣ್ಣನವರ ತತ್ವದರ್ಶಗಳನ್ನು ಅಳವಡಿಸಿಕೊಳ್ಳುವುದಲ್ಲದೆ, ಕಾಯಕ ಸಂಸ್ಕೃತಿ ಬೆಳೆಸಿಕೊಳ್ಳಬೇಕೆಂದು ಅಂದಾಗ ಮಾತ್ರ ಕಾಯಕವೇ ಕೈಲಾಸ ಎಂಬ ಬಸಣ್ಣನವರ ತತ್ವ ಅನುಷ್ಠಾನಗೊಳ್ಳವುದು ಎಂದು ಹೇಳಿದರು. ಸರ್ವ ಪ್ರಯತ್ನ ಮಾಡಬೇಕೆಂದು ಹಿರಿಯ ಉಪನ್ಯಾಸಕರಾದ ಶ್ರೀ ಸುರೇಶ್ ಶೆಟ್ಟಿಗಾರ್, ವಿದ್ಯಾರ್ಥಿ ಸಂಘದ ಕ್ಷೇಮಾಭಿವೃದ್ಧಿ ಅಧಿಕಾರಿ ಶ್ರೀ ಚನ್ನವೀರಯ್ಯ, ವಿಜಯಕುಮಾರ್ ನೀಲಿಕಟ್ಟಿ ಹಾಗೂ ಕುಲಸಚಿವರಾದ ಶ್ರೀ ಶಿವಶರಣಪ್ಪ ಗೌರ್ ಇತರೆ ಸಿಬ್ಬಂದಿಗಳು ವಿದ್ಯಾರ್ಥಿಗಳು ಹಾಜರಾಗಿದ್ದರು