ಹುಬ್ಬಳ್ಳಿ ತಾಲೂಕಿನ ಕುಸುಗಲ್ ಗ್ರಾಮದ ಶ್ರೀ ರಾಯಬಸವೇಶ್ವರ ಗುಡಿ ಓಣಿಯಲ್ಲಿ ಶ್ರೀ ಬಸವಣ್ಣನವರ ಭಾವಚಿತ್ರ ಹಾಗೂ ಎತ್ತುಗಳ ಮೆರವಣಿಗೆಗೆ ಚಾಲನೆ ನೀಡುವ ಮೂಲಕ ಶ್ರೀ ಬಸವ ಜಯಂತಿ ಕಾರ್ಯಕ್ರಮವನ್ನು ಸಂಭ್ರಮದಿAದ ಆಚರಿಸಲಾಯಿತು. ಈ ವೇಳೆ ಹಿರಿಯರಾದ ಯಲ್ಲಪ್ಪ ಬಾಲೇಹೊಸೂರ, ಸಿದ್ರಾಮಪ್ಪ ತುಕ್ಕಣ್ಣವರ, ಯಲ್ಲಪ್ಪ ಲದ್ದಿಯವರ, ನಿಂಗಪ್ಪ ಹುಡೇದ್, ಬಸಪ್ಪ ಮೆಣಸಿನಕಾಯಿ, ತಿರಕಪ್ಪ ಅಳಗವಾಡಿ, ದಾನಪ್ಪ ಕೊಪ್ಪದ, ಜಗದೀಶ್ ಅಳ್ಳೂರ, ಗುರಸಿದ್ದಪ್ಪ ಬರದ್ವಾಡ, ಬಸವರಾಜ ತುಕ್ಕಣ್ಣವರ ಗ್ರಾಮದ ಯುವಕರು ಇನ್ನಿತರರು ಇದ್ದರು.