Home ಜಿಲ್ಲೆ ಭಾರಿ ಗಾಳಿ, ಮಳೆ: ನೆರ‍್ಕುರುಳಿದ ಮರಗಳು

ಭಾರಿ ಗಾಳಿ, ಮಳೆ: ನೆರ‍್ಕುರುಳಿದ ಮರಗಳು


ನವಲಗುಂದ,ಏ.೨೦:ಪಟ್ಟಣವೂ ಸೇರಿದಂತೆ ತಾಲೂಕಿನ ಹಲವಾರು ಗ್ರಾಮಗಳಲ್ಲಿ ಗುಡುಗು.ಸಿಡಿಲು ಸಹಿತ ಭಾರಿ ಗಾಳಿಯಿಂದ ಕೂಡಿದ ಮಳೆ ಸುರಿದು ಹಲವಾರು ಮರಗಳು ನೆಲಕ್ಕುರುಳಿದ ಘಟನೆ ಭಾನುವಾರ ಸಂಜೆ ೩.೩೦ ಕ್ಕೆ ಜರುಗಿದೆ.
ತಾಲ್ಲೂಕಿನ ಬೆಳಹಾರ ಗ್ರಾಮದಲ್ಲಿನ ಹೊಟ್ಟಿನ ಗೋದಾಮಿಗೆ ಸಿಡಿಲು ಬಡಿದು ಬೆಂಕಿ ಅವಘಡ ಸಂಭವಿಸಿದ್ದು ಅಣ್ಣಿಗೇರಿಯಿಂದ ಆಗಮಿಸಿದ್ದ ಅಗ್ನಿ ಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಶಯಶ್ವಿಯಾಗಿದ್ದು ಅದೃಷ್ಟವಶಾತ ಯಾವುದೇ ಜೀವ ಆನಿಯಾದ ಬಗ್ಗೆ ವರದಿಯಾಗಿಲ್ಲ.


ಭಾರೀ ಗಾಳಿಯಿಂದ ಕೂಡಿದ ಮಳೆಯಿಂದಾಗಿ ಗ್ರಾಮಾಂತರ ಪ್ರದೇಶಗಳಿಗೆ ಸರಬರಾಜಾಗುತ್ತಿರುವ ವಿದ್ಯುತ್ ಕಂಬಳು ನೆಲಕಚ್ಚಿದ್ದು ತಾಲೂಕಿನಾದ್ಯಂತ ಸತತ ೪ ಗಂಟೆಗಳಿAದ ವಿದ್ಯುತ್ ವ್ಯತ್ಯಯವಾಗಿದೆ.
ಪಟ್ಟಣದ ಹೊರವಲಯದಲ್ಲಿನ ಅಂಬಲಿ ಹಳ್ಳದ ಕೆಳ ಮಟ್ಟದ ಸೇತುವೆ ಮುಳುಗಿದ್ದರಿಂದ ಇಬ್ರಾಹಿಂಪೂರ ಗ್ರಾಮಕ್ಕೆ ತೆರಳುತ್ತಿದ್ದ ಬಸ್ ಹಳ್ಳದ ಹತ್ತಿರ ನಿಂತು ಮಳೆ ನೀರು ಹರಿವು ಕಡಿಮೆಯಾದ ಮೇಲೆ ಗ್ರಾಮಕ್ಕೆ ತೆರಳಿದ ಘಟನೆ ಜರುಗಿತು.


ಪಟ್ಟಣ ತಹಶೀಲ್ದಾರ ಕಚೇರಿ ಆವರಣದಲ್ಲಿಯ ದೇವಸ್ಥಾನ ಪಕ್ಕದಲ್ಲಿನ ಮರ ಬಿದ್ದಿದೆ. ರಬಸದ ಗಾಳಿಗೆ ಶೆಟ್ಟರ ಕೆರೆಯ ಹತ್ತಿರ ಇರುವ ಅಂಗಡಿಗಳ ಮೇಲಿನ ತಗಡುಗಳು ಹಾರಿ ಬಿದ್ದು ರಸ್ತೆಯಲ್ಲಿ ಚಲಿಸುತ್ತಿದ್ದ ಕುಮಾರಗೊಪ್ಪ ಗ್ರಾಮದ ದ್ವಿಚಕ್ರವಾಹನ ಸವಾರ ತಲೆ ಪೆಟ್ಟಾಗಿದೆ.


ಅಕಾಲಿಕ ಮಳೆಯಿಂದಾಗಿ ಪಟ್ಟಣವೂ ಸೇರಿದಂತೆ ತಾಲ್ಲೂಕಿನ ಬೇರೆ,ಬೇರೆ ಗ್ರಾಮಗಳಲ್ಲಿ ಬಸವಜಯಂತಿ ಹಾಗೂ ಇತರೆ ಸಂದರ್ಭಗಳಲ್ಲಿ ನಡೆಸಲಿರುವ ಹಾಗೂ ನಡೆಯುತ್ತಿರುವ ಗ್ರಾಮದೇವಿ ಹಾಗೂ ನಾನಾ ಜಾತ್ರ ಮಹೋತ್ಸವಕ್ಕೆ ಅಡ್ಡಿಯುಂಟು ಮಾಡಿದ್ದಲ್ಲದೆ ಮದುವೆ ಹಾಗೂ ಗ್ರಹಪ್ರವೇಶ ಮನೆ ಮುಂದಿನ ಶ್ಯಾಮಿಯಾನ ಹಾರಿದ ಪ್ರಸಂಗ ಜರುಗಿದೆ.