Home ಜಿಲ್ಲೆ ಜಗಜ್ಯೋತಿ ಬಸವೇಶ್ವರ ಜಯಂತಿ ಆಚರಣೆ

ಜಗಜ್ಯೋತಿ ಬಸವೇಶ್ವರ ಜಯಂತಿ ಆಚರಣೆ


ನವಲಗುಂದ,ಏ.೨೦:ಸ್ಥಳೀಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಜಗಜ್ಯೋತಿ ಬಸವೇಶ್ವರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಜಯಂತಿ ಆಚರಿಸಿದರು.
ಮುಖ್ಯಅತಿಥಿಗಳಾದ ಶ್ರೀಧರ ಲೋನಕರ ಮಾತನಾಡಿ ಗ್ರಂಥಪಾಲಕರು ಹಾಗೂ ಬಸವ ತತ್ವಗಳ ಚಿಂತಕರಾದ ಬಸವೇಶ್ವರರು ೧೨ ನೇ ಶತಮಾನ ತನ್ನದೇ ಆದ ಮಹತ್ವ ಪಡೆದಿದ್ದು ಜಗಜ್ಯೋತಿ ಬಸವೇಶ್ವರವರು ಸರಳ ವಚನಗಳ ಮುಖಾಂತರ ಸಮಾಜದಲ್ಲಿರುವ ಅನಿಷ್ಟಗಳ ನಿರ್ಮೂಲನೆಗೆ ಪ್ರಯತ್ನಿಸಿದರು ಹಾಗೂ ಎಲ್ಲ ವರ್ಗಗಳ ಜನರಲ್ಲಿ ಸಮಾನತೆ ತರಲು ಹಗಳಿರಲು ಶ್ರಮಿಸಿದ ಇವರ ಆದರ್ಶಗಳು ನಮಗೆಲ್ಲ ಅನುಕರಣಿಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾoಶುಪಾಲರಾದ ಡಾ ಎಂ ಬಿ ಬಾಗಡಿ ಮಾತನಾಡುತ್ತ ಬೀದರ ಜಿಲ್ಲೆಯ ಬಸವಕಲ್ಯಾಣದಲ್ಲಿ ಅನುಭವ ಮಂಟಪ ಸ್ಥಾಪಿಸಿ ಜಾತಿ, ಲಿಂಗ ಬೇಧವಿಲ್ಲದೆ ಎಲ್ಲಾ ಶರಣರು, ಕವಿಗಳು ಮತ್ತು ತತ್ವಜ್ಞಾನಿಗಳು ಒಗ್ಗೂಡಿ ವಚನಗಳ ಮೂಲಕ ಸಾಮಾಜಿಕ ಸಮಾನತೆ ಹಾಗೂ ಕಾಯಕ ತತ್ವವನ್ನು ಚರ್ಚಿಸಲು ಪ್ರಯತ್ನಿಸಿದ ಕೀರ್ತಿ ಬಸವಣ್ಣವರಿಗೆ ಸಲ್ಲುತ್ತದೆ ಎಂದರು.


ಪ್ರೊ ಆಯ್ ಬಿ ಸಾತಿಹಾಳ, ಸಂತೋಷ ಹುಬ್ಬಳ್ಳಿ, ಪ್ರಸನ್ನ ಪಂಢರಿ, ನಾಗರತ್ನ ಕುರಡೇಕರ್, ಬಿ.ವಿ. ಏಣಗಿ, ಸವಿತಾ ಚಿಕ್ಕಣ್ಣವರ, ಗಣೇಶ ಧೋoಗಡಿ, ಗಂಗಾಧರ ಗೌಡರ , ಪ್ರತಿಭಾ ನಿಡಗುಂದಿ , ವೈ ಎನ್ ಗುಲಗಂಧಿ, ಪ್ರವೀಣ ದೊಡಮನಿ , ಜ್ಯೋತಿಭಾ ದೊಡಮನಿ , ಖಾದಿರಬಿ ನಧಾಪ , ವಸಂತ ಮುಂದಿನಮನಿ, ಮಂಜುನಾಥ ಜಾಡರ , ಮಲ್ಲಿಕಾರ್ಜುನ ಗಡಾದ, ಮಧು ಹುಣಸಗಿ ಮುಂತಾದವರು ಇದ್ದರು. ಸುಜಾತಾ ಬರದೂರ ಸ್ವಾಗತಿಸಿ, ನಿರೂಪಿಸಿದರು. ರವಿ ಬ್ಯಾಹಟ್ಟಿ ವಂದಿಸಿದರು