Home ಜಿಲ್ಲೆ ಮಹಾವೀರ ಜಯಂತಿ ಆಚರಣೆ

ಮಹಾವೀರ ಜಯಂತಿ ಆಚರಣೆ

ನವಲಗುಂದ,ಮಾ31 : ಪಟ್ಟಣದಲ್ಲಿರುವ ಭಗವಾನ್ ಶ್ರೀ ಆದಿನಾಥ ದಿಗಂಬರ ಜೈನ ಮಂದಿರದಲ್ಲಿ ಹಾಗೂ ತಾಲ್ಲೂಕು ಆಡಳಿತದಿಂದ ತಹಶೀಲ್ದಾರ ಕಚೇರಿಯಲ್ಲಿ ಭಗವಾನ್ 1008 ಮಹಾವೀರ್ ತೀರ್ಥಂಕರರ ಜನ್ಮದಿನ ಆಚರಿಸಲಾಯಿತು.

ಜೈನ ಮಂದಿರದಲ್ಲಿ ಶಾಸಕ ಎನ್ ಎಚ್ ಕೋನರಡ್ಡಿ ಭಾಗವಹಿಸಿ ಮಾತನಾಡಿ `ಎರಡೂವರೆ ಸಾವಿರ ವರ್ಷಗಳ ಇತಿಹಾಸವಿರುವ ಜೈನ ಧರ್ಮದ ವಿಚಾರಗಳು ಸಮಾಜಕ್ಕೆ ಮುಟ್ಟುವಂತಾಗಬೇಕು. ಜೈನ ಧರ್ಮದಲ್ಲಿ ಮಹಾವೀರ, ಭರತ ಸೇರಿದಂತೆ ನೂರಾರು ಮಹಾಪುರುಷರು ಹುಟ್ಟಿ ಸಮಾಜಕ್ಕೆ ಉತ್ತಮ ವಿಚಾರಗಳನ್ನು ಸಾರಿದ್ದಾರೆ. ಅವು ಕೃತಿ, ಗ್ರಂಥ, ಓಲೆಗರಿಗಳಿಗೆ ಸೀಮಿತವಾಗದೆ ಪುಸ್ತಕ ರೂಪದಲ್ಲಿ ಬಂದು ಮಕ್ಕಳು ಓದುವಂತಾಗಬೇಕು ಎಂದರು

ಜೈನ್ ಸಮಾಜದ ತಾಲ್ಲೂಕು ಅಧ್ಯಕ್ಷ ವಿದ್ಯಾಧರ ಪಾಟೀಲ ಮಾತನಾಡಿ ಶಾಂತಿಯ ಸಂದೇಶ ಸಾರಿದ ಭಗವಾನ್ ಮಹಾವೀರರ ಆದರ್ಶ, ತತ್ವಗಳು ಸರ್ವಕಾಲಕ್ಕೂ ಪ್ರಸ್ತುತ ಎಂದರು. ಇದಕ್ಕೂ ಮೊದಲು ಪಟ್ಟಣದಲ್ಲಿ ಮಹಾವೀರರ ಮೂರ್ತಿಯ ಭವ್ಯ ಮೆರವಣಿಗೆ ನಡೆಯಿತು.

ತಹಶೀಲ್ದಾರ ಸುಧೀರ ಸಾಹುಕಾರ, ತಾ ಪಂ ಇಒ ಪಿ ಆರ್ ಬಡೇಖಾನಾವರ, ಮುಖ್ಯಾಧಿಕಾರಿ ಎಸ್ ಪಿ ಪೂಜಾರ, ಸಮಾಜದ ಹಿರಿಯರಾದ ವಿಜಯನಗೌಡ ಪಾಟೀಲ, ಮರಿಗೌಡರು ಪಾಟೀಲ, ಮನೋಹರ ಪಾಟೀಲ, ಅಶೋಕ ಪಾಟೀಲ, ಸೋಮನಗೌಡ್ರು ಪಾಟೀಲ, ಶಾಂತಿನಾಥ್ ಪಾಟೀಲ, ಸುಕುಮಾರ ಪಾಟೀಲ, ಸಂತೋಷ ಪಾಟೀಲ, ಗಿರೀಶ ಪಾಟೀಲ, ಬಿಪಿನ್ ಪಾಟೀಲ, ರವಿ ಪಾಟೀಲ, ಜಿನ್ನಪ್ಪ ಹನಸಿ, ಹನುಮಂತಗೌಡ ಪಾಟೀಲ, ಶಾಮನಗೌಡ ಪಾಟೀಲ, ಭರಮಪ್ಪ ಹನಸಿ, ಸೋಮು ಪಾಟೀಲ, ಲತಾ ಪಾಟೀಲ, ಇಂದ್ರವ ಹನಸಿ , ಸುಶೀಲಾ ಹನಸಿ, ಶಂಕ್ರವ್ವ ಹನಸಿ, ಕೌಶಲ್ಯ ರಂಗೋಲಿ, ತ್ರಿಶಲಾ ಪಾಟೀಲ , ಸುರೇಖಾ ಪಾಟೀಲ , ಭಾರತಿ ಪಾಟೀಲ , ಪದ್ಮಾವತಿ ಪಾಟೀಲ, ಲತಾ ಪಾಟೀಲ, ಇಂದ್ರವ ಹನ್ಸಿ, ಸುಶೀಲಾ ಹನಸಿ, ಶಂಕ್ರವ್ವ ಹನಸಿ, ಕೌಶಲ್ಯ ರಂಗೋಲಿ ಹಾಗೂ ಸಮಸ್ತ ಶ್ರಾವಕ ಶ್ರಾವಕಿಯರು ಇದ್ದರು.