
ಬೀದರ, ಮಾ.13: ಜಿಲ್ಲೆಯಲ್ಲಿ ಗೃಹ ಬಳಕೆ ಅಡುಗೆ ಅನಿಲ ಸಿಲಿಂಡರ್‍ಗಳು ಸಾಕಷ್ಟು ಪ್ರಮಾಣದಲ್ಲಿ ಸದ್ಯ ದಾಸ್ತಾನು ಲಭ್ಯವಿರುವುದರಿಂದ ಗ್ರಾಹಕರ ಯಾರು ಗಾಬರಿಗೊಳ್ಳಬಾರದು ಹಾಗೂ ಹೆಚ್ಚುವರಿಯಾಗಿ ದಾಸ್ತಾನು ಮಾಡಿಕೊಳ್ಳಬಾರದೆಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿರುವ ವದಂತಿಗಳಿಗೆ ಸಾರ್ವಜನಿಕರು ಕಿವಿಗೂಡಬಾರದು. ಹೆಚ್ಚಿನ ಗ್ರಾಹಕರು ಮುಂಚಿತವಾಗಿ ಬುಕ್ಕಿಂಗ್ ಮಾಡುತ್ತಿರುವುದರಿಂದ ಐವಿಆರ್‍ಎಸ್/ಮಿಸಡ್ ಕಾಲ್ ಮಾಡುವ ವ್ಯವಸ್ಥೆಯಲ್ಲಿ ಹೆಚ್ಚಿನ ಸಂಚಾರ ದಟ್ಟನೆ ಉಂಟಾಗಿ ಸದರಿ ಸಿಸ್ಟಮ್‍ಗಳು ಕಾರ್ಯ ನಿರ್ವಹಿಸುತ್ತಿಲ್ಲವಾದ್ದರಿಂದ ಪರ್ಯಾಯವಾಗಿ Iಔಅಐ, ಊPಅಐ & ಃPಅಐ ಎಲ್‍ಪಿಜಿ ತೈಲ ಕಂಪನಿಗಳ ವಾಟ್ಸ್‍ಆಪ್ ನಂಬರ್ ಮುಖಾಂತರ ಸಹ ಬುಕ್ಕಿಂಗ್ ಮಾಡಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ದಿನಾಂಕ.11-03-2026ರಂದು ಜಿಲ್ಲೆಯ ಗ್ಯಾಸ್ ಏಜೆನ್ಸಿದಾರರ ಮತ್ತು ಹೋಟೆಲ್ ಉದ್ಯಮಿದಾರರ ಸಭೆಯನ್ನು ನಡೆಸಲಾಯಿತು. ಸಭೆಯಲ್ಲಿ ವಾಣಿಜ್ಯ ಸಿಲಿಂಡರ್‍ಗಳ ಲಭ್ಯತೆಯ ಬಗ್ಗೆ ಚರ್ಚಿಸಲಾಗಿ ಹೋಟೆಲ್‍ಗಳಲ್ಲಿ ಲಭ್ಯವಿರುವ ಸಿಲಿಂಡರ್‍ಗಳನ್ನು ಅಗತ್ಯತೆಯ ಪ್ರಮಾಣದಲ್ಲಿ ಬಳಸಲು ಮತ್ತು ಗ್ಯಾಸ್ ಏಜೆನ್ಸಿ ಬಳಿ ಸ್ಟಾಕ್ ಇರುವ ವಾಣಿಜ್ಯ ಸಿಲಿಂಡರ್‍ಗಳನ್ನು ಅವಶ್ಯಕತೆ ಅನುಗುಣವಾಗಿ ಹೋಟೆಲುಗಳಿಗೆ ಸರಬರಾಜು ಮಾಡಲು ಸೂಚಿಸಲಾಯಿತು. ಯಾರು ಅನಗತ್ಯವಾಗಿ ಹೆಚ್ಚಿನ ಸಿಲಿಂಡರನ್ನು ಸಂಗ್ರಹಣೆ ಮತ್ತು ಮಾಗಾರ್ಂತರ ಮಾಡಬಾರದೆಂದು ತಿಳಿಸಿ, ಅಂತಹ ಪ್ರಕರಣಗಳು ಕಂಡುಬಂದರೆ ಅಗತ್ಯ ವಸ್ತುಗಳ ಕಾಯ್ದೆ 1955 ರಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಸೂಚಿಸಲಾಯಿತು.
ಜಿಲ್ಲೆಯಲ್ಲಿ ಎಲ್.ಪಿ.ಜಿ ಸಿಲಿಂಡರ್‍ಗಳ ಕೊರತೆ ಇರುವುದಿಲ್ಲವಾದ್ದರಿಂದ ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ ಮತ್ತು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿರುವ ಸುಳ್ಳು ವದಂತಿಗಳಿಗೆ ಸಾರ್ವಜನಿಕರು ಕಿವಿಗೂಡಬಾರದೆಂದು ಅವರು ತಿಳಿಸಿದ್ದಾರೆ.




















