
ಚಿತ್ತಾಪುರ :ಜೂ.21:ಪಟ್ಟಣದ ರಾಷ್ಟ್ರಕೂಟರ ಕುಲದೇವತೆ ಎಂದೇ ಖ್ಯಾತಿ ಪಡೆದ ನಾಗಾವಿ ಯಲ್ಲಮ್ಮ ದೇವಸ್ಥಾನದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ರಾಜ್ಯದೆಲ್ಲೆಡೆ ಮಳೆ ಬರಲಿ ಎಂದು ವಿಶೇಷ ಪೂಜೆ ಸಲ್ಲಿಸಿ ಬೇಡಿಕೊಂಡರು.
ಇದೇ ವೆಳೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಅಧ್ಯಕ್ಷ ಶಾಮರಾಯ ಸಂಗಾವಿ ಅವರು ದೇವಸ್ಥಾನದ ಸುತ್ತ ದಿರ್ಘ ದಂಡ ನಮಸ್ಕಾರ ಹಾಕಿದರು.
ಈ ಸಂದರ್ಭದಲ್ಲಿ ಎಲ್ ರೆಡ್ಡಿ ಪಾಟೀಲ್, ಬಸವರಾಜ್ ಬಿರಾದಾರ್, ನಾಗರಾಜ್ ಹೂಗಾರ್, ಗುರಣ್ಣ ಸಾತನೂರ್, ಬಸವರಾಜ್ ಹೊಸ್ಸೂರ್, ನರಸಣ್ಣ ಮೂವಿ, ರಘುನಾಥ್ ರೆಡ್ಡಿ ಹೊಸಮನಿ, ವಿಶ್ವರಾಧ್ಯ ದೇಸಾಯಿ ಸೇರಿದಂತೆ ಅನೇಕ ಪದಾಧಿಕಾರಿಗಳು ಇದ್ದರು.


























