Home ಜಿಲ್ಲೆ ಕಲಬುರಗಿ ಜೆಸ್ಕಾಂ ಎಇಇ ಅಮೃತರಾವ್ ಯಲಾಲ್ ಮನೆ, ಕಚೇರಿ ಮೇಲೆ ಲೋಕಾಯುಕ್ತರ ದಾಳಿ

ಜೆಸ್ಕಾಂ ಎಇಇ ಅಮೃತರಾವ್ ಯಲಾಲ್ ಮನೆ, ಕಚೇರಿ ಮೇಲೆ ಲೋಕಾಯುಕ್ತರ ದಾಳಿ

ಕಲಬುರ್ಗಿ, ಜು.8- ಜಿಲ್ಲೆಯಲ್ಲಿ ಲೋಕಾಯುಕ್ತ ಪೆÇಲೀಸರು ದಾಳಿ ನಡೆಸಿದ್ದಾರೆ. ಜೆಸ್ಕಾ ಎಇಇ ಅಮೃತರಾವ್ ಯಲಾಲ್ ಮನೆ ಕಚೇರಿ ಸೇರಿ 7 ಕಡೆ ದಾಳಿ ನಡೆಸಲಾಗಿದೆ.
ನಗರದ ಜಾಗೃತಿ ಕಾಲೋನಿಯಲ್ಲಿ ಮನೆ, ಬಸವ ಅಪಾಟ್ಮೆರ್ಂಟ್ ನಲ್ಲಿರುವ ಫ್ಲಾಟ್, ಕಲಬುರಗಿಯ ಕೊತ್ತಂಬರಿ ಲೇಔಟ್ ನಲ್ಲಿರುವ ಜೆಸ್ಕಾಂ ಕಚೇರಿ ಮೇಲೆ ದಾಳಿ ನಡೆಸಲಾಗಿದೆ. ಚಿಂಚೋಳಿ ತಾಲೂಕಿನ ಸುಲೇಪೇಟ ಗ್ರಾಮದಲ್ಲಿರುವ ಮನೆಯ ಮೇಲೆಯೂ ದಾಳಿ ನಡೆದಿದೆ. ಜಾಗೃತಿ ಕಾಲೋನಿಯಲ್ಲಿರುವ ಪ್ಲಾಟಿನಂ ಸ್ಟುಡಿಯೋ ಹೊಂದಿರುವ ಅಮೃತರಾವ್ ನಂದೂರು ಕೈಗಾರಿಕಾ ಪ್ರದೇಶದಲ್ಲಿ ಆಸ್ತಿ ಹೊಂದಿದ್ದಾರೆ. 20ಕ್ಕೂ ಹೆಚ್ಚು ಎಕರೆ ಜಮೀನು ಹೊಂದಿರುವ ಅಮೃತ ರಾವ್ ಅವರಿಗೆ ಸಂಬಂಧಿಸಿದ 7 ಸ್ಥಳಗಳಲ್ಲಿ ಲೋಕಾಯುಕ್ತ ಎಸ್ಪಿ ಸಿದ್ದರಾಜು ನೇತೃತ್ವದಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ.