Home ಜಿಲ್ಲೆ ಉಪನ್ಯಾಸ ಮಾಲಿಕೆ

ಉಪನ್ಯಾಸ ಮಾಲಿಕೆ

ಲಕ್ಷ್ಮೇಶ್ವರ,ಮಾ31: ಪಟ್ಟಣದ ಡಾ. ಮಲ್ಲಾಡ ಕಾಲೋನಿಯ ಎಲ್ ಆರ್ ಮಲಸಮುದ್ರ ಅವರ ಸ್ವಗ್ರಹದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಮಾಸದ ಮಾತು _32 ಸರಣಿಯ ವರ್ಧನ್ ಮಹಾವೀರರ ತತ್ವಗಳು ಇದರ ಮೇಲೆ ಉಪನ್ಯಾಸ ಮಾಲಿಕೆಯನ್ನು ಹಮ್ಮಿಕೊಳ್ಳಲಾಗಿತ್ತು.


ಉಪನ್ಯಾಸಕರಾಗಿ ಆಗಮಿಸಿದ್ದ ಕರ್ನಾಟಕ ವಿಶ್ವವಿದ್ಯಾನಿಲಯದ ಜೈನ ಪೀಠದ ಮುಖ್ಯಸ್ಥರು ಹಾಗೂ ಸಾಹಿತಿ ಡಾ. ಜನದತ್ತ ಹಡಗಲಿಯವರು ಯುದ್ಧ ಘರ್ಷಣೆ ಸಂಘರ್ಷ ರಕ್ತಪಾತಗಳಿಗೆ ಭಗವಾನ್ ಮಹಾವೀರರ ತತ್ವ ಸಿದ್ಧಾಂತಗಳೆ ಪರಿಹಾರ ಎಂದು ಹೇಳಿದರು.


ಅವರು ಸತ್ಯ ಶಾಂತಿ ಮತ್ತು ಅಹಿಂಸೆ ಪರಧರ್ಮವಾಗಬೇಕಿದೆ ಜೈನ ಧರ್ಮವು ಬಾಳ ಬಾಳ ಬಿಡು ಎಂಬ ಸಿದ್ಧಾಂತದಲ್ಲಿ ನಂಬಿಕೆ ಇಟ್ಟು ಎಲ್ಲ ಧರ್ಮದವರೊಂದಿಗೆ ಸಮನ್ವತೆಯಿಂದ ಬಾಳಿ ಬದುಕುತಿದೆ ಎಂದು ಹೇಳಿದವರು ನಾವೆಲ್ಲರೂ ಇಂದಿನ ಅಶಾಂತಿಯ ವಾತಾವರಣಕ್ಕೆ ಕೊನೆ ಹಾಡಬೇಕಾದರೆ ವರ್ಧಮಾನ ಮಹಾವೀರರ ತತ್ವ ಸಿದ್ಧಾಂತಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.


ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಚಿಂತಕ ಎಲ್ ಆರ್ ಮಲಸಮುದ್ರ ಅವರು ಯುದ್ಧವಿಲ್ಲದೆ ಜಗತ್ತು ಗೆದ್ದ ಮಹಾಪುರುಷ ಭಗವಾನ್ ವರ್ಧಮಾನ್ ಮಹಾವೀರರು ಅವರು ಬೋಧಿಸಿದ ತತ್ವ ಸಿದ್ಧಾಂತಗಳು ಎಂದೆಂದಿಗೂ ಅಜರಾಮರ ಎಂದು ಹೇಳಿದರು.


ಕಾರ್ಯಕ್ರಮದಲ್ಲಿ ಬಿಎಂ ಕುಂಬಾರ, ಎಬಿ ಪಾಟೀಲ್, ಅನಂತರಾಜ ಮಿಣಜಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಾಹಿತ್ಯ ಪರಿಷತ್ತಿನ ತಾಲೂಕ ಘಟಕದ ಅಧ್ಯಕ್ಷ ಈಶ್ವರ್ ಮೆಡ್ಲೇರಿ ಪ್ರಾಸ್ತಾವಿಕ ಮಾತನಾಡಿದರು.


ಕಾರ್ಯಕ್ರಮದಲ್ಲಿ ಏನ್ ಓ ಹಡಗಲಿ, ಎಎಂ ಮಠದ ಸೇರಿದಂತೆ ಪದಾಧಿಕಾರಿಗಳು, ಶ್ರಾವಕರು, ಶ್ರಾವಕಿಯರು, ಚಿಂತಕರು ಪಾಲ್ಗೊಂಡಿದ್ದರು. ಈರಣ್ಣ ಗಾಣಿಗೇರ, ಎಸ್ ಬಿ ಅಣ್ಣಿಗೇರಿ, ಈರಣ್ಣ ಅಕ್ಕೊರ ನಿರ್ವಹಿಸಿದರು.