Home ಜಿಲ್ಲೆ ಕಲಬುರಗಿ ಎನ್‌ಎಸ್‌ಎಸ್ ಶಿಬಿರದಿಂದ ನಾಯಕತ್ವ ಗುಣ ಬೆಳವಣಿಗೆ

ಎನ್‌ಎಸ್‌ಎಸ್ ಶಿಬಿರದಿಂದ ನಾಯಕತ್ವ ಗುಣ ಬೆಳವಣಿಗೆ

ಕಲಬುರಗಿ :ಏ.೨೨: ಎನ್‌ಎಸ್‌ಎಸ್ ಶಿಬಿರದಿಂದ ವಿದ್ಯಾರ್ಥಿಗಳಲ್ಲಿ ಸಮಾಜ ಸೇವೆ, ನಾಯಕತ್ವ ಗುಣಗಳು, ಶಿಸ್ತು ಮತ್ತು ವ್ಯಕ್ವಿತ್ವ ವಿಕಸನವನ್ನು ಬೆಳೆಸಿಕೊಳ್ಳಲು ಸಾಧ್ಯ ಎಂದು ಶರಣಬಸವೇಶ್ವರ ಕಲಾ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಸುರೇಶಕುಮಾರ ನಂದಗಾAವ ಹೇಳಿದರು.
ಶರಣಬಸವೇಶ್ವರ ಕಲಾ ಪದವಿ ಮಹಾವಿದ್ಯಾಲಯ ಮತ್ತು ಗುಲಬರ್ಗಾ ವಿಶ್ವವಿದ್ಯಾಲಯ ಇವರ ಸಹಯೋಗದಲ್ಲಿ ಮಂಗಳವಾದಿAದ ಒಂದು ವಾರ ನಡೆಯುವ ೨೦೨೫-೨೬ನೇ ಶೈಕ್ಷಣಿಕ ಸಾಲಿನ ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು. ‘ನನಗಾಗಿ ಅಲ್ಲ ನಿಮಗಾಗಿ’ ಎಂಬುವದು ಶಿಬಿರದ ಮುಖ್ಯ ಧ್ಯೇಯವಾಗಿದೆ. ಈ ಯೋಜನೆ ಮಹಾತ್ಮ ಗಾಂಧಿಜಿಯವರ ಕನಸ್ಸಿನ ಕೂಸು. ಸ್ವಚ್ಛತೆ, ಆರೋಗ್ಯ ಜಾಗೃತಿ, ಪರಿಸರ ಸಂರಕ್ಷಣೆ ಬಗ್ಗೆ ತಿಳಿಯುವುದು. ಗ್ರಾಮೀಣ ಜೀವನವನ್ನು ಅರಿತುಕೊಳ್ಳುವಿರಿ. ಶಿಬಿರದಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಉಪಯೋಗ ಪಡೆಯಿರಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಶಿಬಿರವನ್ನು ಸಂಸ್ಥೆಯ ಕು.ಪರಮೇಶ್ವರಿ ಪ್ರಭುರಾಜ ಅಪ್ಪ ಉದ್ಘಾಟಿಸಿದರು. ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಶರಣಗೌಡ ಪಾಟೀಲ್, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಅನಿಲ್ ಭರಣಿ ಮಾತನಾಡಿದರು.
ಮಹಾವಿದ್ಯಾಲಯದ ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಡಾ.ವಿಜಯಲಕ್ಷಿö್ಮ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರೆ, ಕು. ಸುವರ್ಣ ನಿರೂಪಿಸಿದರು. ಪ್ರಾಧ್ಯಾಪಕ ಡಾ. ಲಕ್ಷ್ಮಿಪುತ್ರ ವಂದಿಸಿದರು. ಸಹ ಸಂಯೊಜಕರಾದ ಪ್ರೊ.ಅನಿತಾ ಗೊಬ್ಬುರ್, ಡಾ. ಮಿಲಿಂದಕುಮಾರ ಸುಳ್ಳದ್, ಪ್ರಾಧ್ಯಾಪಕರಾದ ಡಾ.ಆರತಿ, ಡಾ.ಪಿಂಕ್ಯಾಯಿನಿ ಮತ್ತು ಶಿಬಿರಾರ್ಥಿಗಳು ಇದ್ದರು.