
ಚನ್ನಮ್ಮನ ಕಿತ್ತೂರ, ಮಾ20: ಸಮೀಪದ ಇಟಗಿ ಗ್ರಾಮದ ಶ್ರೀ ಕಲ್ಮೇಶ್ವರ ಜಾತ್ರಾಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ಕಳಸಾರೋಹಣ, ಅಭಿಷೇಕ ಹಾಗೂ ಮಹಾ ಪ್ರಸಾದ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಬಸವಂತಪ್ಪ ಕರಮಳನವರ, ಶ್ರೀಕಾಂತ ಹಿರೇಮಠ, ಈಶ್ವರ ಶೀಲಿ, ಸಂತೋಷ ಬಳಗಪ್ಪನವರ, ಮಹಾಂತೇಶ ಲಂಗೋಟಿ, ಭರತೇಶ ಗಾಳಿ, ಬಸವರಾಜ ಬಡಿಗೇರ, ಬಸವರಾಜ ಸುಣಗಾರ ಹಾಗೂ ಗ್ರಾಮಸ್ಥರು ಇದ್ದರು.






















