Home ಜಿಲ್ಲೆ ಕಲಬುರಗಿ ಕಲ್ಯಾಣ ಜನರ ಜೀವ ಸಂಜೀವಿನಿ

ಕಲ್ಯಾಣ ಜನರ ಜೀವ ಸಂಜೀವಿನಿ

ಕಲಬುರಗಿ :ಮಾ.2:ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿರುವ ಬಡರೋಗಿಗಳಿಗೆ ಆರೋಗ್ಯ ದಾಸೋಹ ಮಾಡುತ್ತಿರುವುದು ಅತ್ಯಂತ ಶ್ರೇಷ್ಠ ಕಾರ್ಯವಾಗಿದೆ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿ ಹಾಗೂ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಮಾತೋಶ್ರೀ ಡಾ.ದಾಕ್ಷಾಯಿಣಿ ಎಸ್.ಅಪ್ಪ ಹೇಳಿದರು.
ಭಾನುವಾರ ನಗರದ ಎಂಆರ್‍ಎಂಸಿ ಕಾಲೇಜಿನ ಸ್ಯಾಕ್ ಬಿಲ್ಡಿಂಗ್‍ನಲ್ಲಿ ಆಯೋಜಿಸಿದ್ದ ಶ್ರೀಮತಿ ಪೂರ್ಣಿಮಾ ಪಿ.ಎಂ.ಬಿರಾದಾರ ಚಾರಿಟಬಲ್ ಡಯಾಲಿಸಿಸ್ ಸೆಂಟರ್‍ನ 5ನೇ ವಾರ್ಷಿಕೋತ್ಸವ ಮತ್ತು ವೈದ್ಯ ರತ್ನ' ಮತ್ತುಸೇವಾ ರತ್ನ’ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿ, ಸೇವೆಯೇ ದೇವರು ಎಂದು ನಂಬಿಕೊಂಡು ಶರಣು ಪಪ್ಪಾ ಮತ್ತು ತಂಡದವರು ಉಚಿತವಾಗಿ ಡಯಾಲಿಸಿಸ್ ಮಾಡುವ ಮತ್ತು ಸಮಾಜಮುಖಿ ಕೆಲಸಗಳನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದಾರೆ ಎಂದು ಶ್ಲಾಘಿಸಿದರು.
ಕಳೆದ ಐದು ವರ್ಷಗಳಲ್ಲಿ 20 ಸಾವಿರಕ್ಕೂ ಹೆಚ್ಚಿನ ಡಯಾಲಿಸಿಸ್‍ಗಳನ್ನು ಉಚಿತವಾಗಿ ಬಡರೋಗಿಗಳಿಗೆ ಮಾಡುವ ಮೂಲಕ ಈ ಕೇಂದ್ರ ಕಲ್ಯಾಣ ಕರ್ನಾಟಕದ ಜನರ ಅದರಲ್ಲೂ ರೋಗಿಗಳ ಪಾಲಿಗೆ ಜೀವಸಂಜೀವಿನಿಯಾಗಿ ಕೆಲಸ ಮಾಡುತ್ತಿದೆ. ಇಂತಹ ಕಾರ್ಯಕ್ಕೆ ಎಲ್ಲರು ಕೈಜೋಡಿಸುವ ಮೂಲಕ ಸೇವೆ ವಿಸ್ತಾರಗೊಳಿಸುವಂತಾಗಬೇಕು ಎಂದು ಅಭಿಪ್ರಾಯಿಸಿದರು.
ಮಾನವೀಯ ಸೇವೆಯೇ ದೇವರ ಸೇವೆ ಎನ್ನುವ ಮೂಲಕ ಸಮಾಜಮುಖಿ ಕೆಲಸಗಳಲ್ಲಿ ದೇವರನ್ನು ಕಾಣುವ ಕಾಯಕ ಮಾಡುತ್ತಿರುವುದು ಇತರಿಗೆ ಮಾದರಿಯಾಗಿದೆ. ಬದಲಾದ ಜೀವನಶೈಲಿಯಿಂದ ಹಲವು ರೋಗಗಳ ಜತೆಗೆ ಹೊಸ ಕಾಯಿಲೆ ಕಂಡುಬರುತ್ತಿವೆ. ಹೀಗಾಗಿ ಆರೋಗ್ಯದ ಬಗ್ಗೆ ಎಲ್ಲರು ಎಚ್ಚರಿಕೆ ವಹಿಸಬೇಕು ಎಂದು ಅವ್ವಾಜಿ ಕಿವಿಮಾತು ಹೇಳಿದರು.
ಕೇಂದ್ರದ ಐದು ವರ್ಷ ನಡೆದು ಬಂದ ಹಾದಿ ಕುರಿತ `ಸಾಕ್ಷ್ಯಚಿತ್ರ’ವನ್ನು ಮುಖ್ಯ ಅತಿಥಿಗಳಾಗಿದ್ದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಬಿಡುಗಡೆಗೊಳಿಸಿ, ಇದೊಂದು ಮಾದರಿಯ ಸೇವೆಯಾಗಿದೆ ಎಂದು ಶ್ಲಾಘಿಸಿದರು.
ಮಾದನ ಹಿಪ್ಪರಗಿಯ ಶ್ರೀ ಅಭಿನವ ಶಿವಲಿಂಗ ಸ್ವಾಮೀಜಿ ಮತ್ತು ಮಕ್ತಂಪುರ ಗದ್ದುಗೆ ಮಠದ ಶ್ರೀ ಚರಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆರ್ಶೀವಚನ ನೀಡಿದರು. ನಾಡೋಜ ಡಾ.ಪಿ.ಎಸ್.ಶಂಕರ ಅಧ್ಯಕ್ಷತೆ ವಹಿಸಿದ್ದರು.

ಶಾಸಕರಾದ ಡಾ.ಬಿ.ಜಿ.ಪಾಟೀಲ್, ಜಗದೇವ ಗುತ್ತೇದಾರ, ಎಚ್‍ಕೆಇ ಕಾರ್ಯದರ್ಶಿ ಉದಯಕುಮಾರ ಚಿಂಚೋಳಿ,ಶಿವಮೊಗ್ಗದ ಉದ್ಯಮಿ ಎಸ್.ರುದ್ರೆಗೌಡ, ಪುಣೆ ಲಾಯನ್ಸ್ ಕ್ಲಬ್ ಅಧ್ಯಕ್ಷ ಶ್ರೀರಾಮ ಮಾನೆ, ಸಾಂಬಾರು ಮಂಡಳಿ ಅಧ್ಯಕ್ಷ ನೀಲಕಂಠರಾವ ಮೂಲಗೆ, ಎಂ.ಡಿ.ಅಲ್ತಾï, ಟ್ರಸ್ಟ್ ಅಧ್ಯಕ್ಷ ಶರಣಬಸಪ್ಪ ಪಪ್ಪಾ, ಉಪಾಧ್ಯಕ್ಷ ಆನಂದ ದಂಡೋತಿ, ಟ್ರಸ್ಟಿಗಳಾದ ರಾಮಕೃಷ್ಣ ಬೋರಾಳಕರ್, ಶರಣಗೌಡ ಪಾಟೀಲ್ ಯರಗಲ್, ಶಿವರಾಜ ಖೂಬಾ, ಗುರು ಮಂಠಾಳ, ಸಿz್ದÉೀಶ್ವರ ಅನಂತಪುರ, ರಾಜು ನಾಗೂರ, ಡಾ.ಪ್ರಶಾಂತ ಇ.ಡಿ, ಪ್ರಶಾಂತ ಗುಡ್ಡಾ,ಅಮಿತ್ ಜೈನ್ ಪಾರಮರ್, ಘೇರವ ಚಂದ ಜೈನ್, ಮಲ್ಲಿಕಾರ್ಜುನ ನಾಗೂರ, ಡಾ.ಎಸ್.ಬಿ.ಕಾಮರಡ್ಡಿ, ಸಿದ್ದು ಐನಾಪುರ, ಶರಣು ಪಟ್ಟಣ, ರಾಜು ಲೆಂಗಟಿ,ಪ್ರಶಾಂತ ಮಾನಕರ್, ದಿನೇಶ ಪಾಟೀಲ್ ಮೊದಲಾದವರಿದ್ದರು.

ಉಮೇಶ ಶೆಟ್ಟಿಗೆ ಸೇವಾ ರತ್ನ ಪ್ರಶಸ್ತಿ

ಬಡರೋಗಿಗಳ ಕಷ್ಟಕ್ಕೆ ನೆರವಾಗುವ ಸಮಾಜ ಸೇವಕ ಉಮೇಶ ಶೆಟ್ಟಿಗೆ ಟ್ರಸ್ಟ್‍ನಿಂದ ಸೇವಾ ರತ್ನ' ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹಿರಿಯ ವೈದ್ಯರಾಗಿರುವ ಶಹಾಪುರದ ಡಾ.ಶ್ರೀಕಾಂತ ರುದ್ರಪ್ಪ ಸಿನ್ನೂರ, ಕಲಬುರಗಿಯ ಡಾ.ಎ.ವಿ.ದೇಶಮುಖ, ಡಾ.ಎಸ್.ಸಿ.ದೇಸಾಯಿ, ಡಾ.ಕೆ.ಬಸವರಾಜ, ಡಾ.ಕೆ.ವಿಜಯಮೋಹನ, ಡಾ.ಸಂಪತ್‍ಕುಮಾರ ಲೋಯಾ ಅವರಿಗೆವೈದ್ಯ ರತ್ನ’ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಅಲ್ಲದೆ ಡಾ.ಶಿವರಾಜ ಬಿರಾದಾರ ಹಕ್ಯಾಳ, ಉದ್ಯಮಿ ಸಂಜೀವ ಗುಪ್ತಾ,ಸಂಪತ್ ತಪಾಡಿಯಾ ಮೊದಲಾದವರನ್ನು ಸನ್ಮಾನಿಸಲಾಯಿತು.

ರೋಗಿಗಳಿಗೆ ಸೇವೆ ದೇವರ ಸೇವೆ
ಮಾನವೀಯ ಸೇವೆ ಮಾಡುತ್ತಿರುವ ಡಯಾಲಿಸಿಸ್ ಸೆಂಟರ್‍ನವರು, ರೋಗಿಗಳ ಸೇವೆಯನ್ನು ದೇವರ ಸೇವೆ ಎಂದುಕೊಂಡು ಮಾಡುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯರಾದ ಡಾ.ಬಿ.ಜಿ.ಪಾಟೀಲ್ ಶ್ಲಾಘಿಸಿದರು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಇಷ್ಟೆ ಅಲ್ಲದೆ ಅನೇಕ ಸಮಾಜಮುಖಿ ಕೆಲಸಗಳನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿರುವುದು ಗಮನಿಸಿz್ದÉೀನೆ. ಉಮೇಶ ಶೆಟ್ಟಿ ಅವರಿಗೆ ಸೇವಾ ರತ್ನ ಪಶಸ್ತಿ ನೀಡಿದ್ದು ಖುಷಿ ತರಿಸಿದೆ. ಅವರಂತ ಸಮಾಜ ಸೇವೆ ಮಾಡುವವರ ಜತೆಗೆ ಅಮೋಘ ಸೇವೆ ಸಲ್ಲಿಸಿರುವ ಹಿರಿಯ ವೈದ್ಯರಿಗೂ ಪ್ರಶಸ್ತಿ ನೀಡಿದ್ದು ಹೆಮ್ಮೆ ತರಿಸಿದೆ. ಇಂತಹ ಕೆಲಸಗಳು ಮುಂದುವರೆಯಲಿ. ನಿಮ್ಮೊಂದಿಗೆ ಸದಾ ಇರುತ್ತೇವೆ ಎಂದು ಡಾ.ಬಿ.ಜಿ.ಪಾಟೀಲ್‍ರು ಅಭಯ ನೀಡಿದರು.


ರೋಗಿಗಳ ತೊಂದರೆ ತಪ್ಪಿಸಲು ಸ್ನೇಹಿತರ ಸಹಕಾರದೊಂದಿಗೆ ಆರಂಭಿಸಿದ ಪೂರ್ಣಿಮಾ ಬಿರಾದಾರ ಚಾರಿಟೇಬಲ್ ಡಯಾಲಿಸಿಸ್ ಕೇಂದ್ರ ಕಳೆದ ಐದು ವರ್ಷಗಳಿಂದ ಬಡವರಿಗೆ ನೆರವು ನೀಡುವ ಮೂಲಕ ಉತ್ತಮ ಕೆಲಸ ಮಾಡುತ್ತಿದೆ. ಅನೇಕರು ಸಹಾಯ ಹಸ್ತ ನೀಡಿದ್ದಾರೆ. ಹೀಗೆ ಬಡವರ ಮತ್ತು ರೋಗಿಗಳ ಸೇವೆ ಮುಂದುವರೆಸಲಾಗುವುದು.
| ಶರಣಬಸಪ್ಪ ಪಪ್ಪಾ, ಅಧ್ಯಕ್ಷ
ಶ್ರೀಮತಿ ಪೂರ್ಣಿಮಾ ಪಿ.ಎಂ.ಬಿರಾದಾರ ಚಾರಿಟೇಬಲ್ ಡಯಾಲಿಸಿಸ್ ಸೆಂಟರ್