Home ಜಿಲ್ಲೆ ಕಲಬುರಗಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪರಿಸರ ಪ್ರೇಮದ ಜೀವನ ದೃಷ್ಟಿಯ ಕವಿ:ಮರಲಿಂಗ ಯಾದಗಿರಿ

ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪರಿಸರ ಪ್ರೇಮದ ಜೀವನ ದೃಷ್ಟಿಯ ಕವಿ:ಮರಲಿಂಗ ಯಾದಗಿರಿ

ಕಲಬುರಗಿ,ಅ.30-ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪರಿಸರ ಪ್ರೇಮದ ಜೀವನ ದೃಷ್ಟಿಯ ಕವಿ. ತಮ್ಮ ಬರಹದ ಮೂಲಕ ವೈಚಾರಿಕ ಕ್ರಾಂತಿಯನ್ನು ಬಿತ್ತಿರುವ ಕವಿ ಎಂದು ಉಪನ್ಯಾಸಕ ಮರಲಿಂಗ ಯಾದಗಿರಿ ಹೇಳಿದರು.
ಶಹಾಬಾದ ನಗರದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ, ರಾಷ್ಟ್ರಭಾಷ ಶಿಕ್ಷಣ ಸಂಸ್ಥೆಯ ಚ.ಅ. ಇಂಗನಶೆಟ್ಟಿ ವಿಜ್ಞಾನ ವಾಣಿಜ್ಯ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ “ನನ್ನ ನೆಚ್ಚಿನ ಪುಸ್ತಕ ಕಾರ್ಯಕ್ರಮದಲ್ಲಿ ತೇಜಸ್ವಿಯವರ ಕೃತಿಗಳ ಕುರಿತು ಮಾತನಾಡಿದ ಅವರು, ತೇಜಸ್ವಿ ಅವರು ರೈತ ಚಳುವಳಿ, ಸಮಾಜವಾದಿ ಚಳುವಳಿಗಳಲ್ಲಿ ಭಾಗವಹಿಸುವ ಮೂಲಕ ಸಮಾ ಸಮಾಜ ನಿರ್ಮಾಣಕ್ಕೆ ಶ್ರಮಿಸಿದರು. ಅವರಲ್ಲಿ ಅಪಾರವಾದ ಪರಿಸರ ಪ್ರಜ್ಞೆ ಇತ್ತು. ಪರಿಸರ ಪ್ರಜ್ಞೆ ಇಲ್ಲದ ಸಮಾಜ ಸರ್ವನಾಶದ ಕಡೆಗೆ ಹೋಗುತ್ತದೆ ಎಂಬ ಸಂದೇಶವನ್ನು ತೇಜಸ್ವಿಯವರು ನೀಡಿದ್ದಾರೆ ಎಂದರು.
ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯ ಬಿ.ಎಚ್ ನೀರಗುಡಿ ಅವರು ಮಾತನಾಡಿ, ಕನ್ನಡ ಪುಸ್ತಕ ಪ್ರಾಧಿಕಾರದ ಮನೆಗೊಂದು ಗ್ರಂಥಾಲಯ, ನನ್ನ ಮೆಚ್ಚಿನ ಪುಸ್ತಕ, ಅಂಗಳದಲ್ಲಿ ತಿಂಗಳ ಅತಿಥಿ ಮುಂತಾದ ಕಾರ್ಯಕ್ರಮಗಳ ಮೂಲಕ ಕನ್ನಡ ಪುಸ್ತಕ ಪ್ರೀತಿ ಬೆಳೆಸುವ ಕೆಲಸ ಮಾಡಲಾಗುತ್ತದೆ ಎಂದರು.
ಸಂಸ್ಥೆಯ ಕಾರ್ಯದರ್ಶಿ ದಿಲೀಪ್ ಎಲ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಮೃತ್ಯುಂಜಯ ಹಿರೇಮಠ ಆಗಮಿಸಿದ್ದರು. ಕಾಲೇಜಿನ ಪ್ರಚಾರ್ಯರಾದ ರಮೇಶ್ ವಾಲಿ ಅಧ್ಯಕ್ಷತೆಯನ್ನು ವಹಿಸಿದ್ದರು. ಎಲ್ಲ ವಿದ್ಯಾರ್ಥಿಗಳಿಗೆ ಪುಸ್ತಕಗಳ ವಿತರಣೆ ಮಾಡಲಾಯಿತು. ಪ್ರವೀಣ್ ರಾಜನ್ ನಿರೂಪಿಸಿದರು. ಶರಣಪ್ಪ ಗುಡ್ಲ ಸ್ವಾಗತಿಸಿದರು. ಉಪನ್ಯಾಸಕರಾದ ಜ್ಯೋತಿ ವಂದಿಸಿದರು.