Home ಜಿಲ್ಲೆ ಕಲಬುರಗಿ ಕಲಬುರಗಿಯಲ್ಲಿ ಹೊಸ ಪ್ರಾದೇಶಿಕ ಅಂಚೆ ಕಚೇರಿ ಮಂಜೂರಾತಿಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ಅವರಿಗೆ ಅಂಚೆ...

ಕಲಬುರಗಿಯಲ್ಲಿ ಹೊಸ ಪ್ರಾದೇಶಿಕ ಅಂಚೆ ಕಚೇರಿ ಮಂಜೂರಾತಿಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ಅವರಿಗೆ ಅಂಚೆ ಸಿಬ್ಬಂದಿ ಸನ್ಮಾನ

ಕಲಬುರಗಿ,ಅ.31-ಕಲ್ಯಾಣ ಕರ್ನಾಟಕ ಭಾಗದ ಅಂಚೆ ಇಲಾಖೆಯ ಸಿಬ್ಬಂದಿಗಳ ಹಾಗೂ ಸಾರ್ವಜನಿಕರ ಬಹುದಿನಗಳ ಬೇಡಿಕೆಯಾಗಿದ್ದ ಕಲಬುರಗಿ ಪ್ರಾದೇಶಿಕ ಅಂಚೆ ಕಚೇರಿಯನ್ನು ಮಂಜೂರಿ ಮಾಡಿಸಿದ ಹಿನ್ನೆಲೆಯಲ್ಲಿ, ಜಿಲ್ಲಾ ಅಂಚೆ ಇಲಾಖೆಯ ಅಧಿಕಾರಿಗಳು ಹಾಗೂ ಭಾರತೀಯ ಅಂಚೆ ಸಿಬ್ಬಂದಿಗಳ ಅಸೋಷಿಯೇಷನ್ ಮುಖಂಡರು ಕೇಂದ್ರದ ಮಾಜಿ ಸಚಿವರಾದ ಭಗವಂತ ಖೂಬಾ ಅವರನ್ನು ಅವರ ಗೃಹ
ಕಚೇರಿಯಲ್ಲಿ ಭೇಟಿಯಾಗಿ ಸನ್ಮಾನಿಸಿ ಧನ್ಯವಾದಗಳನ್ನು ಅರ್ಪಿಸಿದರು.
ಕಳೆದ 12 ದಿನಗಳ ಹಿಂದೆಯಷ್ಟೇ (17-10-2026) ಅಂಚೆ ಇಲಾಖೆ ಅಸೋಷಿಯೆಷನ್ ಪದಾಧಿಕಾರಿಗಳು ಭಗವಂತ ಖೂಬಾ ಅವರನ್ನು ಭೇಟಿಯಾಗಿ, ಪ್ರತಿಯೊಂದು ಅಧಿಕೃತ ಕೆಲಸಗಳಿಗೂ ಧಾರವಾಡದ ಪ್ರಾದೇಶಿಕ ಕಚೇರಿಗೆ ಹೋಗಬೇಕಾದ ಅನಿವಾರ್ಯತೆ ಹಾಗೂ ಅದರಿಂದ ಕಲ್ಯಾಣ ಕರ್ನಾಟಕ ಭಾಗದ ಜನರಿಗಾಗುತ್ತಿರುವ ಅನಾನುಕೂಲಗಳ ಕುರಿತು ಅಳಲು ತೋಡಿಕೊಂಡಿದ್ದರು.
ಅಂಚೆ ಸಿಬ್ಬಂದಿಯ ಮನವಿಗೆ ತಕ್ಷಣ ಸ್ಪಂದಿಸಿದ ಖೂಬಾ ಅವರು, ಕೇಂದ್ರ ದೂರಸಂವಹನ ಸಚಿವರಾದ ಜ್ಯೋತಿರಾದಿತ್ಯ ಸಿಂಧೀಯಾ, ಭಾರತೀಯ ಅಂಚೆ ಇಲಾಖೆ ಕಾರ್ಯದರ್ಶಿಗಳು ಹಾಗೂ ಮುಖ್ಯ ಪೆÇೀಸ್ಟ್ ಮಾಸ್ಟರ್ ಜನರಲ್ (ಬೆಂಗಳೂರು) ಅವರಿಗೆ ಪತ್ರ ಬರೆದು, ಕಲಬುರಗಿಯಲ್ಲಿಯೇ ಪ್ರಾದೇಶಿಕ ಕಚೇರಿ ಪ್ರಾರಂಭಿಸುವಂತೆ ನೇರವಾಗಿ ಒತ್ತಾಯಿಸಿದ್ದರು. ಖೂಬಾ ಅವರ ಪ್ರಯತ್ನದ ಫಲವಾಗಿ, ಪತ್ರ ಬರೆದ ಕೇವಲ 12 ದಿನಗಳ ಒಳಗಾಗಿ ಕೇಂದ್ರ ಸರ್ಕಾರವು ಕಲಬುರಗಿಯಲ್ಲಿ ಪ್ರಾದೇಶಿಕ ಕಚೇರಿ ಆರಂಭಿಸಲು ಹಸಿರು ನಿಶಾನೆ ನೀಡಿದೆ. ಗೃಹ ಕಚೇರಿಯಲ್ಲಿ ನಡೆದ ಸೌಹಾರ್ದಯುತ ಚರ್ಚೆಯ ವೇಳೆ, 2014ರಲ್ಲಿ ಮೊದಲ ಬಾರಿ ಸಂಸದರಾಗಿ ಆಯ್ಕೆಯಾದಾಗ ದೇಶದ ಅಂಚೆ ನೌಕರರ ಸಂಬಳ ಹೆಚ್ಚಳಕ್ಕೆ ಸಂಸತ್ತಿನಲ್ಲಿ ಪ್ರಥಮವಾಗಿ ಧ್ವನಿ ಎತ್ತಿದ್ದ ಖೂಬಾ ಅವರ ಐತಿಹಾಸಿಕ ನಡೆಯನ್ನು ಸಿಬ್ಬಂದಿಗಳು ಕೃತಜ್ಞತೆಯಿಂದ ಸ್ಮರಿಸಿದರು.
ಸಿಬ್ಬಂದಿಗಳ ಗೌರವ ಸ್ವೀಕರಿಸಿ ಮಾತನಾಡಿದ ಮಾಜಿ ಸಚಿವ ಭಗವಂತ ಖೂಬಾ ಅವರು, &quoಣ;2014 ಕ್ಕಿಂತ ಮುಂಚೆ ಅಂಚೆ ಇಲಾಖೆಯನ್ನು ಮುಚ್ಚುವ ಉದ್ದೇಶವನ್ನು ಅಂದಿನ ಸರ್ಕಾರ ಹೊಂದಿತ್ತು. ಆದರೆ
ಮೋದಿ ಸರ್ಕಾರ ಬಂದ ನಂತರ ಇಲಾಖೆಗೆ ಸಂಪೂರ್ಣ ಹೊಸ ರೂಪ ನೀಡಲಾಗಿದ್ದು, ಇಂದು ಪ್ರತಿದಿನ ನೂರಾರು ಪಾಸ್‍ಪೆÇೀರ್ಟ್, ಆಧಾರ್ ಕಾರ್ಡ್ ಸೇವೆಗಳು, ಪೆÇೀಸ್ಟ್ ಪೇಮೆಂಟ್ ಬ್ಯಾಂಕ್ ಹಾಗೂ ವೃದ್ಧಾಪ್ಯ
ವೇತನದಂತಹ, ಸುಕನ್ಯಾ ಸಮೃದ್ದಿ ಯೋಜನೆಯಂತಹ ಜನಪರ ಸೇವೆಗಳನ್ನು ಯಶಸ್ವಿಯಾಗಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಶೈಕ್ಷಣಿಕ ಮತ್ತು ಔದ್ಯೋಗಿಕ ಕ್ರಾಂತಿ ಮಾಡುವ ಉದ್ದೇಶದಿಂದ ಕಳೆದ 10 ವರ್ಷಗಳಲ್ಲಿ ರೈಲ್ವೆ, ಹೈವೆ, ಏರ್‍ಪೆÇೀರ್ಟ್, ಸೈನಿಕ ಶಾಲೆ, ಸಿಪೇಟ್ (ಅIPಇಖಿ) ಕಾಲೇಜು, ಸೋಲಾರ್ ಯೋಜನೆ ಹಾಗೂ ಪಾಸ್‍ಪೆÇೀರ್ಟ್ ಸೇವಾ ಕೇಂದ್ರಗಳನ್ನು ತರಲಾಗಿದೆ ಎಂದು ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ತಿಳಿಸಿದರು. ಈ 5 ವರ್ಷಗಳಲ್ಲಿ ಜಿಲ್ಲೆಯ ಔದ್ಯೋಗಿಕರಣಕ್ಕೆ ಯೋಜನೆ ಹೊಂದಿದ್ದು, ಸದ್ಯ ಅದು ತಾತ್ಕಾಲಿಕವಾಗಿ ಮುಂದಕ್ಕೆ ಹೋಗಿದೆ. ಮುಂದಿನ ದಿನಗಳಲ್ಲಿ ಜನತೆಯ ಆಶೀರ್ವಾದದಿಂದ ಅದನ್ನು ಪೂರ್ಣಗೊಳಿಸುವುದಾಗಿ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಅಂಚೆ ಇಲಾಖೆಯ ಪೆÇೀಸ್ಟ್ ಮಾಸ್ಟರ್ ರಾಜೇಂದ್ರ ವಗ್ಗೆ, ಉಪ ಅಂಚೆ ಅಧಿಕಾರಿ ಕಾಶಿನಾಥ ವರ್ಮಾ, ಸಹಾಯಕ ಪ್ರವೀಣ, ಮೇಲ್ವಿಚಾರಕ ಪ್ರಶಾಂತ ಘಾಳೆ, ಪ್ರದೀಪ ನಾಯಕವಾಡೆ,
ರಾಜೇಂದ್ರ, ವೆಂಕಟೇಶ, ಮಹೇಶ, ರಾಧಾಕೃಷ್ಣನ್ ಹಾಗೂ ಬಾಲಕೃಷ್ಣನ್ ಸೇರಿದಂತೆ ಅಸೋಷಿಯೇಷನ್ ಮುಖಂಡರು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.