Home ಜಿಲ್ಲೆ ಕಲಬುರಗಿ ಹೆಚ್ಚು ಕಾಲ ಬದುಕುವುದು ಮುಖ್ಯವಲ್ಲ, ಉತ್ತಮ ಆರೋಗ್ಯದೊಂದಿಗೆ ಹೆಚ್ಚು ಕಾಲ ಬದುಕುವುದು ಮುಖ್ಯ: ಪ್ರೊ. ಬಿಡವೆ

ಹೆಚ್ಚು ಕಾಲ ಬದುಕುವುದು ಮುಖ್ಯವಲ್ಲ, ಉತ್ತಮ ಆರೋಗ್ಯದೊಂದಿಗೆ ಹೆಚ್ಚು ಕಾಲ ಬದುಕುವುದು ಮುಖ್ಯ: ಪ್ರೊ. ಬಿಡವೆ

ಕಲಬುರಗಿ:ಜೂ.21: ಯೋಗವು, ಪ್ರಸ್ತುತ ಸರ್ಕಾರದ ಪ್ರಮುಖ ನೀತಿಯಾಗಿದೆ, 2047ರ ವೇಳೆಗೆ ನಾವು ಸ್ವಾತಂತ್ರ್ಯದ 100 ವರ್ಷಗಳನ್ನು ಪೂರ್ಣಗೊಳಿಸಲಿದ್ದೇವೆ ಮತ್ತು ನಾವು ಸಮೃದ್ಧ ಹಾಗೂ ಆರೋಗ್ಯಕರ ರಾಷ್ಟ್ರವಾಗುವತ್ತ ಧಾಪುಗಾಲಿಡಬೇಕಾಗಿದೆ. ಆರ್ಥಿಕತೆ ಹಾಗೂ ಮಿಲಿಟರಿ ಶಕ್ತಿಯು ರಾಷ್ಟ್ರದ ಭದ್ರತೆಯಾಗಿದೆ. ಹಣ ಮತ್ತು ಶಕ್ತಿ ಮಾತ್ರ ನಮ್ಮ ಸಾಮಥ್ರ್ಯವನ್ನು ತೋರಿಸುವುದಿಲ್ಲ, ಯಾವಾಗಲೂ ನಾವು ನಮ್ಮ ಆರೋಗ್ಯದಿಂದ ಬಲವಾಗಿರಬೇಕು. ಹೆಚ್ಚು ಕಾಲ ಬದುಕುವುದು ಮುಖ್ಯವಲ್ಲ ಉತ್ತಮ ಆರೋಗ್ಯದೊಂದಿಗೆ ಹೆಚ್ಚು ಕಾಲ ಬದುಕುವುದು ಮುಖ್ಯ ಎಂದು ಪೆÇ್ರ. ಬಿಡವೆ ಅಭಿಪ್ರಾಯ ಪಟ್ಟರು.
ಶರಣಬಸವ ವಿಶ್ವವಿದ್ಯಾಲಯದಲ್ಲಿ ರವಿವಾರದಂದು ಆಯೋಜಿಸಿದ 12ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪೆÇ್ರ. ಅನಿಲಕುಮಾರ ಬಿಡವೆ, ನಮ್ಮ ಆಧ್ಯಾತ್ಮಿಕ ಗುರುಗಳಾದ ಶರಣಬಸವೇಶ್ವರ ಸಂಸ್ಥಾನದ 8ನೇ ಮಹಾದಾಸೋಹ ಪೀಠಾಧಿಪತಿ ಲಿಂಗೈಕ್ಯ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿ ಕೂಡ ಉತ್ತಮ ಯೋಗ ಪಟುವಾಗಿದ್ದರು. ಅವರು ದಿನಾಲೂ ಸುಮಾರು 100 ಸೂರ್ಯ ನಮಸ್ಕಾರಗಳನ್ನು ಮಾಡುತ್ತಿದ್ದರು ಹಾಗೂ ಪೂಜ್ಯ ಅಪ್ಪಾಜಿ ತಮ್ಮ ದೈನಂದಿನ ಯೋಗದಿಂದ ದಣಿದಿದ್ದನ್ನು ನಾನು ಎಂದಿಗೂ ನೋಡಿಲ್ಲ ಎಂದು ನೆನಪಿಸಿಕೊಂಡರು. ನಮ್ಮ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಮಾತೋಶ್ರೀ ಪೂಜ್ಯ ಡಾ. ದಾಕ್ಷಾಯಿಣಿ ಅವ್ವಾಜಿಯವರು ಹಾಗೂ ನಮ್ಮ ಶರಣಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿಗಳಾದ ಪೂಜ್ಯ ದೊಡ್ಡಪ್ಪ ಅಪ್ಪಾಜಿಯವರು ಕೂಡ ಪ್ರತಿದಿನ ಯೋಗ ಮಾಡುವುದು ಅಭ್ಯಾಸ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.
ಕೋವಿಡ್ ಸಮಯದಲ್ಲಿ ಯೋಗವು ನಮ್ಮೆಲ್ಲರಿಗೂ ಸಹಾಯ ಬಹಳ ಮಾಡಿದೆ. ಪ್ರತಿದಿನ ಯೋಗ ಮಾಡುವುದರಿಂದ ನಾವು ಯಾವಾಗಲೂ ನಮ್ಮ ಕೆಲಸದಲ್ಲಿ ಸಕ್ರಿಯರಾಗಿರುತ್ತೇವೆ. ದಿನಾಲೂ ಯೋಗ ಮಾಡುವುದರಿಂದ ಶಿಕ್ಷಕರು ದಣಿವಿಲ್ಲದೇ ಹಲವಾರು ತರಗತಿಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಯೋಗವನ್ನು ಜೀವನದ ಒಂದು ಭಾಗವನ್ನಾಗಿ ಮಾಡಿಕೊಳ್ಳಿ. ಕೋವಿಡ್ ದಿನಗಳಲ್ಲಿ ಅತ್ಯಂತ ಶಕ್ತಿಶಾಲಿ ದೇಶಗಳು ಹೆಚ್ಚಿನ ಪ್ರಾಣಹಾನಿಗಳನ್ನು ಅನುಭವಿಸಿವೆ. ಯೋಗದಿಂದಾಗಿ ಭಾರತವು ಕಡಿಮೆ ನಷ್ಟವನ್ನು ಅನುಭವಿಸಿದೆ. ಎಂದು ಶರಣಬಸವ ವಿಶ್ವವಿದ್ಯಾಲಯದ ಉಪಕುಲಪತಿ ಪೆÇ್ರ. ಅನಿಲಕುಮಾರ ಬಿಡವೆ ಅಭಿಪ್ರಾಯ ಪಟ್ಟರು. ನೀವು ಜೀವಂತವಾಗಿರುವವರೆಗೆ ನಿಮ್ಮ ದೇಹವನ್ನು ಕಾಳಜಿ ವಹಿಸಿ ಮತ್ತು ಪ್ರೀತಿಸಿ, ಜೀವನವನ್ನು ಆನಂದಿಸಿ. ಯಾವಾಗಲೂ ಗುಣಮಟ್ಟದ ಜೀವನವನ್ನು ನಡೆಸಲು ಹಾಗೂ ಆರೋಗ್ಯಕರವಾಗಿರಲು ಯೋಗವು ಬಹುಮುಖ್ಯವಾಗಿದೆ ಎಂದು ಪೆÇ್ರ. ಬಿಡವೆ ಹೇಳಿದರು.
ಸ್ವಾಭಿಮಾನ ಭಾರತ ಸಂಸ್ಥೆಯ ಜಂಟಿ ಕಾರ್ಯದರ್ಶಿ ಶ್ರೀಮತಿ ಮಂಜುಳಾ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಯೋಗವನ್ನು ಜಗತ್ತಿಗೆ ಪರಿಚಯಿಸಿದವರು ಭಾರತೀಯರು. ಇಂದು ಸರಿಸುಮಾರು 180 ದೇಶಗಳು ಯೋಗಾಭ್ಯಾಸದಲ್ಲಿ ತೊಡಗಿವೆ ಎಂದರು.
ಕಾರ್ಯಕ್ರಮದಲ್ಲಿ ವಿವಿಯ ಎಂ.ಎಸ್.ಸಿ. ಯೋಗ ವಿಭಾಗದ ಪ್ರಾಧ್ಯಾಪಕರಿಂದ ಹಾಗೂ ವಿದ್ಯಾರ್ಥಿಗಳಿಂದ ವಿವಿಧ ಭಂಗಿಗಳ ಆಸನಗಳನ್ನು ಪ್ರದರ್ಶಿಸಲಾಯಿತು. ಯೋಗದ ಬಗೆಗಿನ ಪ್ರಯೋಜನಗಳನ್ನು ತಿಳಿಸುತ್ತಾ ಹಲವಾರು ಯೋಗಾಸನಗಳನ್ನು ಮಾಡಿಸಿದರು. ಯೋಗ ದಿನಾಚರಣೆಯಲ್ಲಿ ಶರಣಬಸವ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ. ಲಕ್ಷ್ಮಿ ಪಾಟೀಲ್ ಮಾಕಾ, ಕುಲಸಚಿವ (ಮೌಲ್ಯಮಾಪನ) ಡಾ. ಎಸ್. ಎಚ್. ಹೊನ್ನಳ್ಳಿ, ಡೀನ್ ಡಾ. ಶಿವಕುಮಾರ ಜವಳಿಗಿ, ಹಣಕಾಸು ಅಧಿಕಾರಿ ಡಾ. ಕಿರಣ ಮಾಕಾ ಸೇರಿದಂತೆ ವಿವಿಧ ವಿಭಾಗಗಳ ಡೀನರು, ಮುಖ್ಯಸ್ಥರು, ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು.