
ಸುರಪುರ:ಮಾ.೧೪: ನಗರದ ರಂಗAಪೇಟೆಯಲ್ಲಿರುವ ಕೇಂಬ್ರಿಡ್ಜ್ ಇಂಟರ್ನ್ಯಾಷನಲ್ ಶಾಲೆಯ ಪ್ರಥಮ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಸುರಪುರದ ಅರಸು ಮನೆತನದ ರಾಜಾ ಲಕ್ಷ್ಮಿ ನಾರಾಯಣ ನಾಯಕ ಮಾತನಾಡಿ, ಚಿಕ್ಕ ಮಕ್ಕಳ ಜ್ಞಾಪಕ ಶಕ್ತಿಯ ಪ್ರದರ್ಶನವನ್ನು ಕಂಡರೆ ತುಂಬಾ ಖುಷಿಯಾಗುತ್ತದೆ. ಈ ಶಾಲೆಯ ಕಲಿಕಾ ವಿಧಾನವು ಉತ್ತಮವಾಗಿದ್ದು ಮಕ್ಕಳು ಇನ್ನೂ ಹೆಚ್ಚಿನ ಮಟ್ಟದ ಕಲಿಕೆಯಲ್ಲಿ ತೊಡಗಿ ಶಾಲೆಗೆ ಒಳ್ಳೆಯ ಹೆಸರನ್ನು ತರಲಿ ಎಂದು ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಗರನಾಡು ಪ್ರಯೋಗಾಲಯದ ಮಾಲೀಕ ಮಲ್ಲಯ್ಯ ಲಿಂಗದಹಳ್ಳಿ ಉತ್ತಮ ಕಲಾ ಪ್ರದರ್ಶನದ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಕ್ಕಳಿಗೆ ಗೌರವಿಸಿದರು. ಇದೇ ಸಂದರ್ಭದಲ್ಲಿ ಶಾಲೆಯ ಮುಖ್ಯಸ್ಥ ಮೌನೇಶ ನಾಲವಾರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಹಾಗೂ ಸುರಕ್ಷಾ ಮಹಿಳಾ ಸಹಕಾರ ಸಂಘದ ಅಧ್ಯಕ್ಷ ಸುನಂದ ಎಂ ನಾಲ್ವರ ಉಪಸ್ಥಿತರಿದ್ದರು. ಶಿಕ್ಷಕಿ ಉಮಾಶ್ರೀ ಮೇಟಿ ನಿರೂಪಿಸಿದರು,ಸ್ವಾತಿ ಹಿರೇಮಠ ಸ್ವಾಗತಿಸಿದರು ,ಬುಷ್ರಾ ಎಂ ಗೋಡಾ ವಂದಿಸಿದರು.ಅನೇಕ ಮುಖಂಡರು ಹಾಗೂ ನೂರಾರು ಜನ ಪೋಷಕರು ಭಾಗವಹಿಸಿದ್ದರು.
ಇಂಗ್ಲೀಷ್ ಮೀಡಿಯಂ ಕ್ವಿಜ್ ಕಾಂಪಿಟೇಶನ್‌ನಲ್ಲಿ ಶ್ರಾವಣಿ ಸುರೇಶ್ ಹಚ್ಚಡ್ ಪ್ರಥಮ, ಕರಣ್ ಎಸ್.ಗೋಗಿ ದ್ವಿತೀಯ, ಕೃತಿ ಎಸ್.ಗೋಗಿ,ವೇದಾಂತ್ ಶ್ರೀನಿವಾಸ ತೃತೀಯ ಬಹುಮಾನ. ಕನ್ನಡ ಮೀಡಿಯಂ ಕ್ವಿಜ್ ಕಾಂಪಿಟೇಶನ್‌ನಲ್ಲಿ ಶಶಿಧರ ಮಹೇಶ ಪ್ರಥಮ,ಸ್ನೇಹಾ ಅಯ್ಯಣ್ಣ ದ್ವಿತೀಯ, ಪೂಜಾ ಹನುಮಂತ ತೃತೀಯ ಬಹುಮಾನ.ಚಿತ್ರಕಲಾ ಸ್ಪರ್ಧೆಯಲ್ಲಿ ರುಮನ್ನಾ ಹಬೀಬ್ ಪ್ರಥಮ, ಶ್ರುತಿ ಶ್ರೀಶೈಲ ಸಜ್ಜನ್ ದ್ವೀತಿಯ, ಶ್ರೀನಿವಾಸ ಕೆ ತೃತೀಯ ಬಹುಮಾನ ಹಾಗೂ ಆದರ್ಶ ದಂಪತಿ ಸ್ಪರ್ಧೆ ವಿಜೇತರಾದ ಸುಮಂಗಲಾ ವೀರಭದ್ರಪ್ಪ ಕುಂಬಾರ ದಂಪತಿ ಈ ಎಲ್ಲರಿಗೂ ಬಹುಮಾನ ನೀಡಿ ಸನ್ಮಾನಿಸಿ ಗೌರವಿಸಲಾಯಿತು.






















