Home ಜಿಲ್ಲೆ ಕಲಬುರಗಿ ಪಾಶ್ರ್ವವಾಯುವಿನ ಬಗ್ಗೆ ಮುಂಜಾಗ್ರತೆ ವಹಿಸುವುದು ಅಗತ್ಯ

ಪಾಶ್ರ್ವವಾಯುವಿನ ಬಗ್ಗೆ ಮುಂಜಾಗ್ರತೆ ವಹಿಸುವುದು ಅಗತ್ಯ

ಕಲಬುರಗಿ: ಭಾರತದಲ್ಲಿ ವಿವಿಧ ರೋಗಗಳಿಂದ ಸಂಭವಿಸುವ ಸಾವಿನ ಕಾರಣಗಳಲ್ಲಿ ಪಾಶ್ರ್ವವಾಯು ಎರಡನೇ ಸ್ಥಾನ ಪಡೆದಿದೆ. ಒಂದು ಕಾಲದಲ್ಲಿ
ವೃದ್ಧರಿಗೆ ಸೀಮಿತವಾಗಿದ್ದ ಪಾಶ್ರ್ವವಾಯು ಇಂದು ಯುವಕರಲ್ಲಿಯೂ
ಕಂಡುಬರುತ್ತಿರುವುದು ಕಳವಳಕಾರಿಯಾದ ಸಂಗತಿಯಾಗಿದ್ದು, ಇದರ ಬಗ್ಗೆ
ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ ಎಂದು ವೈದ್ಯಾಧಿಕಾರಿ ಡಾ.ಅನುಪಮಾ
ಎಸ್.ಕೇಶ್ವಾರ ಸಲಹೆ ನೀಡಿದರು.
ನಗರದ ಶೇಖರೋಜಾದಲ್ಲಿರುವ ಶಹಾಬಜಾರ ‘ನಗರ ಪ್ರಾಥಮಿಕ
ಆರೋಗ್ಯ ಕೇಂದ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ
ಸಹಯೋಗದೊಂದಿಗೆ ಏರ್ಪಡಿಸಿದ್ದ ‘ವಿಶ್ವ ಪಾಶ್ರ್ವವಾಯು ದಿನಾಚರಣೆ’ಯಲ್ಲಿ ಜನ
ಜಾಗೃತಿಯ ಕರ ಪತ್ರಗಳನ್ನು ವಿತರಿಸಿ ನಂತರ ಅವರು
ಮಾತನಾಡುತ್ತಿದ್ದರು.
ಮಿದುಳು, ಸ್ನಾಯುಗಳನ್ನು ಸಂಪರ್ಕಿಸುವ ಸಂವಹನ ಜಾಲಕ್ಕೆ ತೊಂದರೆ ಅಥವಾ ಅಡ್ಡಿಯಾದಾಗ ಪಾಶ್ರ್ವವಾಯು ಉಂಟಾಗುತ್ತದೆ. ಇದಕ್ಕೆ ಬಿಪಿ,
ಸಕ್ಕರೆ ಕಾಯಿಲೆ, ಹೃದಯ ಸಂಬಂಧಿ ಕಾಯಿಲೆ, ದೈಹಿಕ ನಿಷ್ಕ್ರಿಯತೆ, ಬೊಜ್ಜು,
ಅನುವಂಶಿಯತೆ, ಅಧಿಕ ಕೊಲೆಷ್ಟ್ರಾಲ್ ಕಾರಣಗಳಾಗಿವೆ. ಕೈ, ಕಾಲು ದೌರ್ಬಲ್ಯ, ಕೈ
ಎತ್ತುವಾಗ ತೊಂದರೆ ಹಾಗೂ ದುರ್ಬಲವೆನಿಸುವುದು, ತೀಕ್ಷ ನರನೋವು
ಕಾಣಿಸುವುದು, ಅಸಷ್ಟ ಮಾತು, ದೃಷ್ಟಿ ಸಮಸ್ಯೆ, ತಲೆನೋವು, ಮಲ
ವಿಸರ್ಜನೆಯಲ್ಲಿ ತೊಂದರೆ ಮುಂತಾದವುಗಳು ಪಾಶ್ರ್ವವಾಯುವಿನ
ಲಕ್ಷಣಗಳಾಗಿವೆ. ಎಣ್ಣೆಯಲ್ಲಿ ಕರಿದ, ಹುರಿದ ಪದಾರ್ಥಗಳ ಸೇವನೆ ಮಾಡಬಾರದು.
ಧೂಮಪಾನ, ಮದ್ಯಪಾನದಿಂದ ದೂರವಿರಬೇಕು. ತರಕಾರಿ, ಸಿರಿ ಧಾನ್ಯಗಳು,
ಗಜ್ಜರಿ, ಸೌತೆಕಾಯಿ, ಈರುಳ್ಳಿ, ಟೊಮಾಟೊ, ಮೆಂತೆಸೊಪ್ಪು, ಸಮತೋಲಿತ
ಆಹಾರವನ್ನು ಸೇವಿಸಬೇಕು. ಬಿಪಿ, ಶುಗರ್, ಕೊಲೆಷ್ಟ್ರಾಲ್ ನಿರ್ವಹಣೆ, ವ್ಯಾಯಾಮ ಮಾಡಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಸಮಾಜ ಸೇವಕ ಎಚ್.ಬಿ.ಪಾಟೀಲ, ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ಜಗನಾಥ ಗುತ್ತೇದಾರ, ಗಂಗಾಜ್ಯೋತಿ ಗಂಜಿ, ಮಂಗಲಾ ಚಂದಾಪುರೆ, ಶ್ರೀದೇವಿ, ರೇಶ್ಮಾ ನಕ್ಕುಂದಿ, ನಾಗೇಶ್ವರಿ ಮುಗಳಿವಾಡಿ, ಅರ್ಚನಾ ಸಿಂಗೆ, ನಾಗಮ್ಮ ಚಿಂಚೋಳಿ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.