
ಕಲಬುರಗಿ.ಅ.29: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ಎಸ್ಸಿ/ಎಸ್ಟಿ ಘಟಕದ ವತಿಯಿಂದ ವಿಶ್ವವಿದ್ಯಾಲಯದ ಆಡಳಿತ ಕಟ್ಟಡದ ಸೆಮಿನಾರ್ ಸಭಾಂಗಣದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಯಿತು. ಭಾರತೀಯ ಸಾಹಿತ್ಯದ ಮಹಾಕಾವ್ಯಗಳಲ್ಲಿ ಒಂದಾದ ರಾಮಾಯಣದ ಕರ್ತೃ ಎಂದು ಗೌರವಿಸಲ್ಪಡುವ ಮಹರ್ಷಿ ವಾಲ್ಮೀಕಿಯವರ ಜೀವನ ಮತ್ತು ಸಾಹಿತ್ಯಿಕ ಕೊಡುಗೆಗಳನ್ನು ಈ ಸಂದರ್ಭದಲ್ಲಿ ಸ್ಮರಿಸಲಾಯಿತು.
ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಬುಡಕಟ್ಟು ಅಧ್ಯಯನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪೆÇ್ರ. ಚಲುವರಾಜು ಅವರು ಮಹರ್ಷಿ ವಾಲ್ಮೀಕಿಯವರ ಜೀವನ, ಸಾಹಿತ್ಯಿಕ ಕೊಡುಗೆಗಳು ಮತ್ತು ಅವರ ಮಹತ್ವದ ಕುರಿತು ವಿಶೇಷ ಉಪನ್ಯಾಸ ನೀಡಿದರು. ರಾಮಾಯಣದ ಪ್ರಮುಖ ಘಟನೆಗಳು ಮತ್ತು ಪಾತ್ರಗಳ ಕುರಿತು ಮಾತನಾಡಿದ ಅವರು, ಶ್ರೀರಾಮನ ವನವಾಸ, ರಾವಣನಿಂದ ಸೀತೆಯ ಅಪಹರಣ, ಸೀತೆಯ ಅನ್ವೇಷಣೆಯಲ್ಲಿ ಹನುಮಂತನ ಪಾತ್ರ ಹಾಗೂ ಲಂಕೆಯಲ್ಲಿ ನಡೆದ ಯುದ್ಧದ ಪ್ರಸಂಗಗಳನ್ನು ವಿವರಿಸಿದರು. ಕರ್ತವ್ಯ, ಧೈರ್ಯ, ಭಕ್ತಿ, ತ್ಯಾಗ ಮತ್ತು ಧರ್ಮದಂತಹ ಮಹಾಕಾವ್ಯದ ಶಾಶ್ವತ ಮೌಲ್ಯಗಳನ್ನು ಅವರು ಎತ್ತಿ ತೋರಿಸಿದರು. ಭಾರತೀಯ ಸಂಸ್ಕøತಿಯಲ್ಲಿ ವಾಲ್ಮೀಕಿಯವರ ಸಾಹಿತ್ಯಿಕ ಪರಂಪರೆ ಇಂದಿಗೂ ಪ್ರಸ್ತುತವಾಗಿದ್ದು, ಅವರ ಕಾಲಾತೀತ ಸಾಹಿತ್ಯಿಕ ಕೊಡುಗೆಗಳು ತಲೆಮಾರುಗಳಿಗೆ ಸ್ಫೂರ್ತಿ ನೀಡುತ್ತಿವೆ ಎಂದು ಅವರು ಹೇಳಿದರು. ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಕುರಿತು ಸಂಶೋಧನೆ ನಡೆಸಲು ಯುವಜನರು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಿಯುಕೆ ಕುಲಪತಿ ಪೆÇ್ರ. ಬಟ್ಟು ಸತ್ಯನಾರಾಯಣ ಅವರು ಮಾತನಾಡಿ, ಮಹರ್ಷಿ ವಾಲ್ಮೀಕಿಯವರನ್ನು ಭಾರತೀಯ ನಾಗರಿಕತೆಯ ಪ್ರಮುಖ ವ್ಯಕ್ತಿಯಾಗಿ ಬಣ್ಣಿಸಿದರು. ಸಮಕಾಲೀನ ಸಮಾಜದಲ್ಲಿಯೂ ಅವರ ಬೋಧನೆಗಳು ಪ್ರಸ್ತುತವಾಗಿವೆ ಎಂದು ತಿಳಿಸಿದರು. ಐತಿಹಾಸಿಕ ಮತ್ತು ಶಾಸ್ತ್ರೀಯ ಗ್ರಂಥಗಳಲ್ಲಿನ ಜ್ಞಾನವನ್ನು ಸಂರಕ್ಷಿಸಿ, ಮುಂದಿನ ಪೀಳಿಗೆಗೆ ತಲುಪಿಸಲು ಭಾಷಾ ವಿಭಾಗಗಳು ಇಂತಹ ಗ್ರಂಥಗಳ ಕುರಿತ ಸಂಶೋಧನೆಯನ್ನು ತೀವ್ರಗೊಳಿಸಬೇಕು ಎಂದು ಕರೆ ನೀಡಿದರು. ವಾಲ್ಮೀಕಿ ರಾಮಾಯಣವನ್ನು ತಲೆಮಾರುಗಳಿಂದ ಸಂರಕ್ಷಿಸಿ, ಮುಂದಿನ ಪೀಳಿಗೆಗೆ ತಲುಪಿಸುವಲ್ಲಿ ಮೌಖಿಕ ಪರಂಪರೆಗಳ ಮಹತ್ವವನ್ನೂ ಅವರು ವಿವರಿಸಿದರು.
ಕಾರ್ಯಕ್ರಮದ ಗೌರವ ಅತಿಥಿಗಳಾಗಿದ್ದ ಸಿಯುಕೆ ಕುಲಸಚಿವ ಪೆÇ್ರ. ಆರ್. ಆರ್. ಬಿರಾದಾರ ಅವರು, ರಾಮಾಯಣದ ಮೂಲಕ ಪ್ರತಿಪಾದಿಸಲಾದ ನೈತಿಕ ಮೌಲ್ಯಗಳು ಮತ್ತು ಜೀವನಪಾಠಗಳ ಕುರಿತು ಮಾತನಾಡಿದರು. ಸಂಬಂಧಗಳಲ್ಲಿ ನಿಷ್ಠೆಯ ಮಹತ್ವ ಹಾಗೂ ಜವಾಬ್ದಾರಿಗಳನ್ನು ಪ್ರಾಮಾಣಿಕತೆ ಮತ್ತು ಸಮರ್ಪಣಾ ಭಾವದಿಂದ ನಿರ್ವಹಿಸುವ ಅಗತ್ಯವನ್ನು ಒತ್ತಿಹೇಳಿದರು. ಮಹರ್ಷಿ ವಾಲ್ಮೀಕಿಯವರ ರಾಮಾಯಣದಲ್ಲಿ ಚಿತ್ರಿತವಾಗಿರುವ ಶ್ರೀರಾಮನ ವ್ಯಕ್ತಿತ್ವವು ಆದರ್ಶ ನಡವಳಿಕೆ, ನೈತಿಕ ಮೌಲ್ಯಗಳು ಮತ್ತು ಧರ್ಮನಿಷ್ಠೆಯ ಶಾಶ್ವತ ಮಾದರಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮ ಸಂಯೋಜಕರಾದ ಡಾ. ಶ್ಯಾಮಲಾ ಆರ್. ಅತಿಥಿಗಳನ್ನು ಪರಿಚಯಿಸಿದರು. ಡಾ. ರಾಘವೇಂದ್ರ ಬೋನಾಳ ಸ್ವಾಗತಿಸಿದರು. ಕಾರ್ಯಕ್ರಮದ ಸಹಸಂಯೋಜಕ ಡಾ. ಸಂಗಮೇಶ್ ಆರ್. ವಂದಿಸಿದರು. ಡಾ. ಸುಶ್ರುತ ಆರ್. ಕಾರ್ಯಕ್ರಮ ನಿರೂಪಿಸಿದರು.ಪೆÇ್ರ. ಭರತ್ ಕುಮಾರ್, ಪೆÇ್ರ. ಆರ್. ಎಸ್. ಹೆಗಡಿ, ಪೆÇ್ರ. ಬಸವರಾಜ ಎಂ. ಕುಬಕಡ್ಡಿ, ಪೆÇ್ರ. ಅಂಗಡಿ ಸೇರಿದಂತೆ ವಿವಿಧ ವಿಭಾಗಗಳ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಸಂಶೋಧನಾ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮವು ವಂದೇ ಮಾತರಂ ಗೀತೆಯೊಂದಿಗೆ ಪ್ರಾರಂಭವಾಗಿ, ರಾಷ್ಟ್ರಗೀತೆಯೊಂದಿಗೆ ಮುಕ್ತಾಯಗೊಂಡಿತು.






















