
ತುಮಕೂರು, ಸೆ. ೪- ಆಗ್ನೇಯ ಪದವೀಧರರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಶಿ ಹುಲಿಕುಂಟೇಮಠ್ ಅವರ ಪತ್ನಿ ಅಮೂಲ್ಯ ಜಿ. ಅವರು ಮಂಡಿಸಿದ ಇಂಗ್ಲೀಷ್ ಮಹಾ ಪ್ರಬಂಧಕ್ಕೆ ತುಮಕೂರು ವಿಶ್ವವಿದ್ಯಾಲಯ ಪಿ.ಹೆಚ್‌ಡಿ ಪದವಿ ನೀಡಿದೆ.
ಅಮೂಲ್ಯ ಜಿ ಅವರು ಡಾ.ಕಿರಣ್ ಎಸ್.ಎನ್. ಅವರ ಮಾರ್ಗದರ್ಶನದಲ್ಲಿ ’ಇಂಡಿಯಾಸ್ ಎಂಗೇಜ್‌ಮೆಂಟ್ ವಿತ್ ದಿ ಫಾಸ್ಟ್: ಅನ್‌ಎಕ್ಸ್‌ಪ್ಲೊರೇಶನ್ ಆಫ್ ಸೆಲೆಕ್ಟೆಡ್ ಫಿಕ್ಟಿನಲ್ ರೆಪ್ರೆಸೆಂಟೇಶನ್ಸ್ ಆಫ್ ದಿ ರಾಮಾಯಣ ಅಂಡ್ ಮಹಾ ಭಾರತ’ ಎಂಬ ಇಂಗ್ಲೀಷ್ ಮಹಾ ಪ್ರಬಂಧವನ್ನು ಸಿದ್ಧಪಡಿಸಿ ತುಮಕೂರು ವಿಶ್ವವಿದ್ಯಾಲಯದ ಇಂಗ್ಲೀಷ್ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಮೂಲಕ ಮಂಡಿಸಿದ್ದು, ವಿಶ್ವವಿದ್ಯಾಲಯ ಅಂಗೀಕರಿಸಿ ಪಿಹೆಚ್‌ಡಿ ಪದವಿ ನೀಡಿ ಗೌರವಿಸಿದೆ.






























