
ಸಂಜೆವಾಣಿ ವಾರ್ತೆ,
ವಿಜಯಪುರ, ಏ. ೬: ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ಎಂಜಿನಿಯರಿAಗ್ ವಿಭಾಗವು ಏಪ್ರಿಲ್ ೧ ರಿಂದ ೪ ರವರೆಗೆ ವಿಜಯಪುರದ ಬಿಎಲ್‌ಡಿಇ ಸಂಸ್ಥೆಯ ವಚನ ಪಿತಾಮಹ ಡಾ. ಪಿ. ಜಿ. ಹಳಕಟ್ಟಿ ಕಾಲೇಜ್ ಆಫ್ ಎಂಜಿನಿಯರಿAಗ್ ಮತ್ತು ತಂತ್ರಜ್ಞಾನದಲ್ಲಿ ಇಂಟರ್ನೆಟ್ ಆಫ್ ಥಿಂಗ್ಸ್ ಕುರಿತು ೩ ದಿನಗಳ ಪ್ರಾಯೋಗಿಕ ಶಿಕ್ಷಕರ ತರಬೇತಿ ಕಾರ್ಯಕ್ರಮವನ್ನು ನಡೆಯಿತು.
ಅಗಸ್ತ್ಯ ಇಂಟರ್‌ನ್ಯಾಷನಲ್ ಫೌಂಡೇಶನ್‌ನ ಶಿಕ್ಷಕರಿಗಾಗಿ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು. ಉತ್ತರ ಕರ್ನಾಟಕದ ವಿವಿಧ ಭಾಗಗಳಿಂದ ಸುಮಾರು ೩೦ ಶಿಕ್ಷಕರು ಈ ಕಾರ್ಯಕ್ರಮದ ಪ್ರಯೋಜನ ಪಡೆದರು. ಡಾ. ರಾಜಿಂದರ್‌ಕುಮಾರ್ ಮಠ, ವಿಜಯಕುಮಾರ್ ಸಜ್ಜನರ್, ನೀಲಮ್ಮ ಪಾಟೀಲ್ ಮತ್ತು ಮನೋಜ್‌ಕುಮಾರ್ ದೊಡ್ಡಮನಿ ಅವರು ಮೈಕ್ರೋಕಂಟ್ರೋಲರ್ ಬೋರ್ಡ್ಗಳು, ಸಂವೇದಕಗಳು ಮತ್ತು ಅವುಗಳ ಅನ್ವಯಿಕೆಗಳ ಕುರಿತು ಶಿಕ್ಷಕರಿಗೆ ತರಬೇತಿ ನೀಡಿದರು.
ಬಿಎಲ್‌ಡಿಇಎ ಎಂಜಿನಿಯರಿAಗ್ ಕಾಲೇಜಿನ ಪ್ರಾಂಶುಪಾಲ ಡಾ. ಮಂಜುನಾಥ ಪಿ, ಉಪ ಪ್ರಾಂಶುಪಾಲ ಡಾ. ಪ್ರದೀಪ್ ಮಲಾಜಿ, ಇಸಿ ವಿಭಾಗದ ಮುಖ್ಯಸ್ಥೆ ಡಾ. ಜಯಲಕ್ಷ್ಮಿ ಗೋನಾಲ್ ಮತ್ತು ಅಗಸ್ತ್ಯ ಫೌಂಡೇಶನ್‌ನ ಗೀತಾ ಬಿರಾದಾರ ಅವರು ಶಿಕ್ಷಕರು ಪ್ರದರ್ಶಿಸಿದ ಯೋಜನೆಗಳನ್ನು ಶ್ಲಾಘಿಸಿದರು.





















