
ಚನ್ನಮ್ಮ ಕಿತ್ತೂರು,ಮಾ 9: ಸಮೀಪದ ಲಿಂಗನಮಠ ಗ್ರಾಪಂ ವ್ಯಾಪ್ತಿಯ ಹೊಸಲಿಂಗನಮಠ ಗ್ರಾಮದಲ್ಲಿ ಶ್ರೀ ಹುಲಿಗೆಮ್ಮ ದೇವಿಯ ನೂತನ ಶಿಲಾ ವಿಗ್ರಹ ಪ್ರತಿ?Á್ಠಪನೆಗೆ ಮೂರ್ತಿ ಟ್ರ್ಯಾಕ್ಟರ್ನಲ್ಲಿರಿಸಿ ಮರಿಮ್ಮಾದೇವಿ ದೇವಸ್ಥಾನದಿಂದ. ಪ್ರಾರಂಭಗೊಂಡ ಮೆರವಣಿಗೆ ಲಿಂಗನಮಠದ ಪ್ರಮುಖ ಬೀದಿಗಳಲ್ಲಿ ಹಾಗೂ ಪ್ರತಿ ಓಣಿಯಲ್ಲಿ ಸಂಚರಿಸಿತು. ವಾದ್ಯದೊಂದಿಗೆ, ಡೊಳ್ಳು ಕುಣಿತ, ಮಹಿಳೆಯರು ಕುಂಭಮೇಳದೊಂದಿಗೆ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ವಿವಿಧ ಸಂಘಟನೆಗಳು ಗ್ರಾಮಸ್ಥರು, ಮೆರವಣಿಗೆಯಲ್ಲಿ ಪಾಲ್ಗೊಂಡರು.
ಮೆರವಣಿಗೆಯಲ್ಲಿ ರತ್ನವ್ವ ಹುಲಗನ್ನವರ, ಲಿಂಗನಮಠ ಗ್ರಾಪಂ ಮಾಜಿ ಅಧ್ಯಕ್ಷ ಕಾಶೀಮ ಹಟ್ಟಿಹೋಳಿ, ಜಾತ್ರಾ ಕಮೀಟಿ ಸದಸ್ಯರು ಪಾಂಡುರಂಗ ಮೀಟಗಾರ, ಆನಂದ ಹುಲಗನ್ನವರ, ಬಸವರಾಜ ನಾಯಕ, ರಾಜೇಂದ್ರ ಮಾಟೊಳ್ಳಿ, ನಾಗರಾಜ ಅಂಬಡಗಟ್ಟಿ, ಈರನ್ನಾ ಮಾಟೊಳ್ಳಿ, ರಾಘವೇಂದ್ರ ಕುರುಬರ, ಬಸ್ಸು ಮಾಟೊಳ್ಳಿ, ಬಸವರಾಜ ಪಾಟೀಲ, ಸಂಜು ಪಾಲಕಾರ, ರಮೇಶ ಮಾಟೊಳ್ಳಿ, ಶಿವಾನಂದ ಖೋತ, ಬಸವರಾಜ ತಳವಾರ, ಸತೀಶ ಕರಾಳೆ, ಮಂಜು ಬುದಪ್ಪನವರ, ಶೋಭಾ ಬೆಳಗಾವಿ, ಪಾರ್ವತಿ ಮಾಟೊಳ್ಳಿ, ಅನ್ನಪೂರ್ಣ ಬಾಗೇವಾಡಿ, ಗಿರಿಜಾ ಪಾಟೀಲ, ಪ್ರೇಮಾ ಬಾಗೇವಾಡಿ ಇತರರು ಇದ್ದರು.






















