
ಚಿಂಚೋಳಿ: ತಾಲೂಕಿನ ಪೋಲಕಪಳ್ಳಿ ಹತ್ತಿರ ಇರುವ ತಾಲ್ಲೂಕಾ ಕ್ರೀಡಾಂಗಣ ಮೈದಾನದಲ್ಲಿ ೮೦ನೇ ಸ್ವಾತಂತ್ರ‍್ಯ ದಿನಾಚರಣೆ ಅಂಗವಾಗಿ ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ, ಅವರು ರಾಷ್ಟ್ರಪೀತ ಮಹಾತ್ಮ ಗಾಂಧೀಜಿ ಹಾಗೂ ಡಾ. ಬಿ. ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿದರು ನಂತರ ರಾಷ್ಟ್ರ ಧ್ವಜಾರೋಹಣ ಮಾಡಿದರು ಕಾರ್ಯಕ್ರಮ ಉದ್ದೇಶಿಸಿ ಚಿಂಚೋಳಿ ಶಾಸಕರಾದ ಡಾ. ಅವಿನಾಶ್ ಜಾಧವ, ಅವರು ಮಾತನಾಡಿ ಭಾರತ ದೇಶ ಸ್ವತಂತ್ರಕ್ಕಾಗಿ ಅನೇಕ ಸ್ವತಂತ್ರ ಹೋರಾಟಗಾರರು ತಮ್ಮ ಪ್ರಾಣವನ್ನು ಕೊಟ್ಟು ಸ್ವಾತಂತ್ರ‍್ಯವನ್ನು ತಂದು ಕೊಟ್ಟಿದ್ದಾರೆ ಅವರ ಪ್ರಾಣ ತ್ಯಾಗ ಮತ್ತು ಬಲೆಗಳನ್ನು ನಮಗೆ ಇಂದು ಭಾರತ ದೇಶಕ್ಕೆ ಸ್ವಾತಂತ್ರ‍್ಯವನ್ನು ಸಿಕ್ಕಿದೆ ಆದರೆ ಅಂದು ಪ್ರಾಣ ನೀಡಿದ ಸ್ವತಂತ್ರ ಹೋರಾಟಗಾರರಿಗೆ ನಾವೆಂದು ಮರಿಬಾರದು ಹಾಗೂ ನಮ್ಮ ದೇಶದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ೧೨ ವರ್ಷಗಳಿಂದ ಒಳ್ಳೆ ಕೆಲಸವನ್ನು ಮಾಡುತ್ತಿದ್ದಾರೆ ಮತ್ತು ತಾಲೂಕಿನ ಅನೇಕ ರೈತರಿಗೆ ಇನ್ನು ಇನ್ಸೂರೆನ್ಸ್ ಹಣ ಜಮಾ ಆಗಿಲ್ಲ ನನ್ನ ಗಮನಕ್ಕೆ ಬಂದಿದೆ ನಾನು ಅಧಿವೇಶನದಲ್ಲಿ ಇದರ ಬಗ್ಗೆ ಧ್ವನಿ ಎತ್ತಿ ಚಿಂಚೋಳಿ ತಾಲೂಕಿನ ಎಲ್ಲಾ ರೈತರಿಗೆ ಇನ್ಸೂರೆನ್ಸ್ ಕಂಪನಿ ರೈತರಿಗೆ ಹಣ ಬರುವಂತೆ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು
ಕಾರ್ಯಕ್ರಮದಲ್ಲಿ ಡಿಎಸ್‌ಪಿಗಳಾದ ಸಂಗಮನಾಥ ಹಿರೇಮಠ, ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸಂತೋಷ್ ಚೌವ್ಹಾಣ, ಗ್ರೇಟ್ ತಹಸಿಲ್ದಾರ್ ವೆಂಕಟೇಶ್ ದುಗ್ಗನ್, ಪುರಸಭೆ ಅಧಿಕಾರಿಗಳಾದ ಕಾಶಿನಾಥ್ ಧನ್ನಿ, ಸಿಪಿಐ ಕಪಿಲ ದೇವ್, ಕೃಷಿ ಇಲಾಖೆ ಅಧಿಕಾರಿಗಳಾದ ವೀರಶೆಟ್ಟಿ ರಾಠೋಡ್, ತಾಲೂಕ ಆರೋಗ್ಯ ಇಲಾಖೆ ಅಧಿಕಾರಿಗಳಾದ ಡಾ. ಲತೀಫ್, ಬಿಇಒ ಧೂಳಪ್ಪ ಮಳೆನೂರ, ನಾಗಶೆಟ್ಟಿ ಭದ್ರಶೆಟ್ಟಿ, ಅಶೋಕ ಹೂವಿನಬಾವಿ, ಅಶೋಕ ಕುಲಕರಣಿ, ಆರಿಫ್, ದೇವಿಂದ್ರಪ್ಪ ಹೋಳ್ಕರ, ಮಲ್ಲಿಕಾರ್ಜುನ್ ಪಾಲಾಮೂರ್, ಸುರೇಶ ದೇಶಪಾಂಡೆ, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಗೌತಮ್ ಪಾಟೀಲ, ರಾಜಕೀಯ ಮುಖಂಡರಾದ ಗೋಪಾಲ ರಾವ ಕಟ್ಟಿಮನಿ, ಕೆಎಂ ಬಾರಿ, ಶಾಮರಾವ ಕೊರವಿ, ರಾಜು ಪವಾರ್, ಅಶೋಕ್ ಚವ್ಹಾಣ್, ಪ್ರೇಮಸಿಂಗ್ ಜಾಧವ್, ಸತೀಶ್ ರೆಡ್ಡಿ, ಬಸವರಾಜ ವಾಡಿ, ಶ್ರೀಮಂತ ಕಟ್ಟಿಮನಿ, ಶಂಕರಜಿ ಹಿಪ್ಪರಗಿ, ಅಮರ ಲೋಡ್ಡನೂರು, ಮತ್ತು ಅನೇಕ ತಾಲ್ಲೂಕು ಮಟ್ಟದ ವಿವಿಧ ಅಧಿಕಾರಿಗಳು ಮತ್ತು ಹಾಗೂ ಶಾಲೆ ಮಕ್ಕಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು


































