
ಹಾನಗಲ್,ಮೇ.೨೭: ತಾಲೂಕಿನಲ್ಲಿ ೧೧ ಹೊಸ ಕಂದಾಯ ಗ್ರಾಮ, ೧೪೦ ಉಪ ಗ್ರಾಮಗಳನ್ನು ರಚಿಸುವ ಮೂಲಕ ದಾಖಲೆ ರಹಿತವಾಗಿ ಸರಕಾರಿ ಮತ್ತು ಖಾಸಗಿ ಜಮೀನುಗಳಲ್ಲಿ ವಾಸಿಸುತ್ತಿದ್ದ ಕುಟುಂಬಗಳಿಗೆ ಮಾಲಿಕತ್ವ ನೀಡಲಾಗುತ್ತಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.
ತಾಲೂಕಿನ ಮಕರವಳ್ಳಿ ಗ್ರಾಮದಲ್ಲಿ ಕೃಷ್ಣ ಭೈರೇಗೌಡ ನಗರ ಮತ್ತು ಸಿದ್ದರಾಮೇಶ್ವರ ಕಾಲೋನಿ ನೂತನ ಉಪ ಗ್ರಾಮಗಳನ್ನು ಉದ್ಘಾಟಿಸಿದ ಅವರು ಮಾತನಾಡಿದರು. ತಹಶೀಲ್ದಾರ್ ರೇಣುಕಾ ಎಸ್., ಕರ್ನಾಟಕ ಹಾಲು ಉತ್ಪಾದಕ ಮಹಾಮಂಡಳದ ನಿರ್ದೇಶಕ ಚಂದ್ರಪ್ಪ ಜಾಲಗಾರ, ಕೆಪಿಸಿಸಿ ಸದಸ್ಯ ಟಾಕನಗೌಡ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜು ಗೊರಣ್ಣನವರ, ಬಸನಗೌಡ ಪಾಟೀಲ, ಹನುಮಂತಪ್ಪ ಮರಗಡಿ, ಈರಪ್ಪ ಬೈಲವಾಳ, ಫಯಾಜ್ ಲೋಹಾರ, ರಾಮಣ್ಣ ಬುಡ್ಡನವರ, ವಿರುಪಾಕ್ಷಪ್ಪ ದಾಳೇರ, ಮಂಜಪ್ಪ ಮಲಗುಂದ, ಕರಬಸನಗೌಡ ಪಾಟೀಲ, ಪ್ರಕಾಶ ಕೂಸನೂರ, ಶಾರುಖ್ ಗಡದ, ಎಸ್.ಎಂ.ಹಿರೇಮಠ, ಜಯಣ್ಣ ದ್ಯಾವಣ್ಣನವರ ಸೇರಿದಂತೆ ಇನ್ನೂ ಹಲವರು ಇದ್ದರು.

























