Home ಜಿಲ್ಲೆ ಉಪನೊಂದಣಿ ಕಛೇರಿ ಉದ್ಘಾಟನೆ

ಉಪನೊಂದಣಿ ಕಛೇರಿ ಉದ್ಘಾಟನೆ


ಚನ್ನಮ್ಮನ ಕಿತ್ತೂರು,ಮಾ.೧೦: ಈ ಹಿಂದೆ ಹಳೆ ತಹಶೀಲ್ದಾರ ಹತ್ತಿರ ಕಾರ್ಯನಿರ್ವಹಿಸುತ್ತಿದ್ದ ಉಪನೊಂದಣಿ ಕಛೇರಿಯನ್ನು ರಾಷ್ಟಿçÃಯ ಹೆದ್ದಾರಿ ೪ಕ್ಕೆ ಹೊಂದಿಕೊಡಿರುವ ಆಡಳಿತ ಸೌಧದಲ್ಲಿ ತೆರೆಯಲಾಯಿತು. ಇದರ ಉದ್ಘಾಟಕರಾಗಿ ಶಾಸಕ ಬಾಬಾಸಾಹೇಬ ಪಾಟೀಲ ಆಗಮಿಸಿ ದೀಪ ಬೆಳಗಿಸಿ ಉದ್ಘಾಟಿಸಿದರು.


ನಂತರ ಮಾತನಾಡಿ ಈ ಉಪನೊಂದಣಿ ಕಚೇರಿ ಸಾರ್ವಜನಿಕರ ಅನುಕೂಲಕ್ಕಾಗಿ ಸರ್ಕಾರ ತೆರೆದಿದ್ದು ಇದರ ಉಪಯೋಗ ಮಾಡಿಕೊಳ್ಳಿ ಸರ್ಕಾರದ ನಿಯಮ ಪ್ರಕಾರ ಪೀ ತುಂಬಿ ಯಾವುದೇ ಆಸ್ತಿ ಅಥವಾ ಇನ್ನಿತರ ಜಾಗೆಗಳನ್ನು ಖರೀದಿ ಮಾಡಿಕೊಳ್ಳಿ. ಈ ನಿಯಮ ಅನುಸಾರ ಹೊರತು ಪಡಿಸಿ ಅಧಿಕಾರಿಗಳು ಹಣ ತೆಗೆದುಕೊಳ್ಳುವಂತಿಲ್ಲ್ಲ ಹೆಚ್ಚಿಗೆ ಹಣ ತೆಗೆದುಕೊಂಡಿದ್ದೇನಾದರೂ ಕಂಡುಬAದರೆ ಸುಮ್ಮನಿರುವುದಿಲ್ಲ ಎಂದು ಹೇಳಿದರು.


ಈ ವೇಳೆ ತಹಶೀಲ್ದಾರ ಕಲ್ಲನಗೌಡ ಪಾಟೀಲ, ಜಿಲ್ಲಾನೊಂದಣಿ ಅಧಿಕಾರಿ ಮಹಾಂತೇಶ ಪಟ್ಟತಾರ, ಕಿತ್ತೂರು ಪ್ರಭಾರಿ ಉಪನೊಂದಣಿ ಅಧಿಕಾರಿ, ಪಿ.ಎಂ.ಅನಕಲ್, ಕಂದಾಯ ನಿರೀಕ್ಷಕ ಎಂ.ಎA. ನೀರಲಗಿ, ಮುಖಂಡ ಅಶಪಾಕ ಹವಾಲ್ದಾರ, ತಹಶೀಲ್ದಾರ ಹಾಗೂ ನೊಂದಣಿ ಸಿಬ್ಬಂದಿ, ಸಾರ್ವಜನಿಕರಿದ್ದರು.