
ಕಲಬುರಗಿ,ಮೇ.2: ಉತ್ತರ ಕ್ಷೇತ್ರದ ಶಾಸಕಿ ಕನೀಜ್ ಫಾತಿಮಾ ಅವರು ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸೋನಿಯಾ ಗಾಂಧಿ ಕಾಲೋನಿಯ ಹೊಸ ತರಗತಿ ಕೊಠಡಿಗಳ ನಿರ್ಮಾಣ ಮತ್ತು ಮರುಮಾದರಿ ಕಾಮಗಾರಿಯನ್ನು ಉದ್ಘಾಟಿಸಿದರು.
ಕೆಕೆಆರ್‍ಡಿಬಿ ಯೋಜನೆಯಡಿ 140.96 ಲಕ್ಷ ರೂ.ಗಳ ಯೋಜನಾ ಕಾಮಗಾರಿಗೆ ಮಂಜೂರಾತಿ ನೀಡಲಾಯಿತು. ಸೋನಿಯಾ ಗಾಂಧಿ ಕಾಲೋನಿಯ ನಿವಾಸಿಗಳು ಶಾಸಕಿ ಕನೀಜ್ ಫಾತಿಮಾ ಅವರಿಗೆ ಶಾಲಾ ಅಭಿವೃದ್ಧಿಗಾಗಿ ನೆರವು ನೀಡಿದರು. ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ಫರಾಜ್ ಉಲ್ ಇಸ್ಲಾಂ, ವಾರ್ಡ್ ಸಂಖ್ಯೆ 14 ರ ಕಾಪೆರ್Çರೇಟರ್ ಅಲಿ ಖಾನ್, ಜೈದ್ ಉಲ್ ಇಸ್ಲಾಂ ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.






















