Home ಜಿಲ್ಲೆ ಉದ್ಘಾಟನಾ ಕಾರ್ಯಕ್ರಮ

ಉದ್ಘಾಟನಾ ಕಾರ್ಯಕ್ರಮ

ಲಕ್ಷೆ÷್ಮÃಶ್ವರ,ಜೂ೧೬: ತಾಲೂಕಿನ ಶಿಗ್ಲಿ ಗ್ರಾಮದ ಶಾಕಾಂಬರಿ ಸಮುದಾಯ ಭವನದಲ್ಲಿ ವೀರಾಣಿ ಕಿತ್ತೂರು ಚೆನ್ನಮ್ಮ ವಿವಿಧೋದ್ದೇಶಗಳ ಸಂಘದ ಆಶ್ರಯದಲ್ಲಿ ಪ್ರತಿಭಾ ಪುರಸ್ಕಾರ ಪಂಚಮಸಾಲಿ ಸಮಾಜದ ನೌಕರರ ಸಂಘ ಇದರ ಉದ್ಘಾಟನಾ ಕಾರ್ಯಕ್ರಮ ಜರುಗಿತು.


ಕಾರ್ಯಕ್ರಮದ ಸಾನಿಧ್ಯವಹಿಸಿ ಆಶೀರ್ವಚನ ನೀಡಿದ ಹೂವಿನ ಶಿಗ್ಲಿ ವಿರಕ್ತಮಠದ ಚನ್ನವೀರ ಮಹಾಸ್ವಾಮಿಗಳು ವೀರರಾಣಿ ಕಿತ್ತೂರು ಚೆನ್ನಮ್ಮ ವಿವಿಧೋದ್ದೇಶಗಳ ಸಂಘ ಪ್ರತಿಭಾ ಪುರಸ್ಕಾರ ನಿವೃತ್ತರಿಗೆ ಸನ್ಮಾನ ಮತ್ತು ತಾಲೂಕ ಪಂಚಮಸಾಲಿ ನೌಕರರ ಸಂಘದ ಸಂಘಟನೆ ಈ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಸಮಾಜಮುಖಿ ಕಾರ್ಯಕ್ರಮಗಳಿಗೆ ಒತ್ತು ನೀಡುತ್ತಿರುವುದು ಶ್ಲಾಘನೀಯ.


ಸಂಘ ಸಂಸ್ಥೆಗಳು ಕೇವಲ ತಮ್ಮದೇ ಆದ ಕಾರ್ಯ ಚಟುವಟಿಕೆಗಳ ಜೊತೆಗೆ ಎಲ್ಲಾ ಸಮಾಜದ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಶೈಕ್ಷಣಿಕ ಮುನ್ನಡೆಗೆ ಪ್ರೋತ್ಸಾಹ ನೀಡುತ್ತಿರುವುದು ಮತ್ತು ಸೇವೆಯಿಂದ ನಿವೃತ್ತರಾದವರಿಗೆ ಸನ್ಮಾನಿಸುವುದು ಒಂದು ಒಳ್ಳೆಯ ಕಾರ್ಯ.


ಇಂದು ಸನ್ಮಾನ ಗೋಂಡ ವಿದ್ಯಾರ್ಥಿಗಳು ಭವಿಷ್ಯತ್ತಿನಲ್ಲಿ ಉತ್ತಮ ನಾಗರಿಕರಾಗಿ ಉತ್ತಮ ಶಿಕ್ಷಣ ಪಡೆದು ಯಾವ ಸಮಾಜ ತಮ್ಮನ್ನು ಗೌರವಿಸಿದೆಯೋ ಆ ಸಮಾಜಕ್ಕೆ ಋಣ ತೀರಿಸಬೇಕು ಹೆತ್ತ ತಂದೆ ತಾಯಿಗಳ ವಿದ್ಯೆ ಕೊಟ್ಟ ಶಿಕ್ಷಕರ ಬಗ್ಗೆ ಸದಾ ಗೌರವವನ್ನು ಹೊಂದಬೇಕು ಎಂದು ಹೇಳಿದರು.


ಉದ್ಘಾಟನೆ ನೆರವೇರಿಸಿದ ಗದಗ ಜಿಲ್ಲಾ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಅಧ್ಯಕ್ಷ ಈರಣ್ಣ ಕರಿಬಿಷ್ಟಿಯವರು ಚೆನ್ನಮ್ಮ ರಾಣಿ ವಿವಿದೋದ್ದೇಶಗಳ ಸಂಘ ಇಂತಹ ರಚನಾತ್ಮಕ ಕಾರ್ಯ ಮಾಡೋ ಮೂಲಕ ಮತ್ತಷ್ಟು ತನ್ನ ಜವಾಬ್ದಾರಿಯನ್ನು ಹೆಚ್ಚಿಸಿಕೊಂಡಿದೆ ಸಮಾಜದಲ್ಲಿ ಸೇವೆ ಸಲ್ಲಿಸಿದವರಿಗೆ ಪ್ರತಿಭೆಗಳಿಗೆ ಗೌರವಿಸುವುದು ನಮ್ಮ ಆದ್ಯ ಕರ್ತವ್ಯ ಎಂದು ಹೇಳಿದರು.


ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಪೊಲೀಸ ಅಧಿಕಾರಿ ಶಂಕರ್ ರಾಗಿಯವರು ಮಾತನಾಡಿದರು.


ಕಾರ್ಯಕ್ರಮದಲ್ಲಿ ತಾಲೂಕ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಅಧ್ಯಕ್ಷ ಮಾಗಡಿ ಎಸ್ ಪಿ ಬಳಿಗಾರ ಸೋಮಣ್ಣ ಡಾಣಗಲ್ಲ ಬಸವರಾಜ್ ತುಳಿ ನಿಂಗಪ್ಪ ಹುನಗುಂದ ಶಿವಪ್ಪ ಕೆಸರಳ್ಳಿ ನೀಲಪ್ಪ ಹತ್ತಿ ಕಾಳ ಚನ್ನಬಸಪ್ಪ ಬಾಳಿಕಾಯಿ ಚನ್ನಬಸಪ್ಪ ರಾಗಿ ಫಕೀರೇಶ ಹುನುಗುಂದ ಎಸ್ ಕೆ ಹೆಬ್ಬಳ್ಳಿ ಆರ್ ಎನ್ ತೇಲ್ಕರ್ ಹನುಮಂತಪ್ಪ ತಳವಾರ ರಾಮಣ್ಣ ಲಮಾಣಿ ಬಾಲಚಂದ್ರ ಜನಿವಾರದ ನಿಜಗುಣಯ್ಯ ಮುಳುಗುಂದ ಮಠ ಮಹದೇವಪ್ಪ ಬೆಳವಗಿ ಬಸವರಾಜ ಕರ್ಜಗಿ ಸಿ ಆರ್ ಗೋಕಾವಿ ರಾಣಿ ಚೆನ್ನಮ್ಮ ವಿವಿಧೇಶ ಸಹಕಾರಿ ಸಂಘದ ಅಧ್ಯಕ್ಷರು ನಿರ್ದೇಶಕರು ಇದ್ದರು.