
ಸೇಡಂ.ನ,7: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದಾನೆ ಎಂಬ ಕಾರಣಕ್ಕೆ ಹೆಂಡತಿಯೊಬ್ಬಳು ತನ್ನ ಪ್ರಿಯಕರನೊಂದಿಗೆ ಸೇರಿ ಸ್ವಂತ ಗಂಡನನ್ನೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮಳಖೇಡ ಗ್ರಾಮದಲ್ಲಿ ನಡೆದಿದೆ. ರಾತ್ರಿ ವೇಳೆಯಲ್ಲಿ ಗಂಡನಿಗೆ ಚಹಾದಲ್ಲಿ ನಿದ್ದೆಗುಳಿಗೆ ಹಾಕಿ ಗಾಢ ನಿದ್ರೆಗೆ ಜಾರುವಂತೆ ಮಾಡಿದ ಪತ್ನಿ ಅಂಬಿಕಾ ನಂತರ ಪ್ರೇಮಿ ಮಾರುತಿಯೊಂದಿಗೆ ಅಕ್ರಮವಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿದಾಗ ಮಲಗಿದ್ದ ಗಂಡ ಸಿದ್ದರಾಮ ಪಾಟೀಲ ಮಧ್ಯರಾತ್ರಿ ಅನಿರೀಕ್ಷಿತವಾಗಿ ಎಚ್ಚರಗೊಂಡಿದ್ದೇ ಈ ಕ್ರೂರ ಕೃತ್ಯಕ್ಕೆ ಕಾರಣವಾಗಿದೆ ಎಂಬುದು ಮಳಖೇಡ ಪೆÇಲೀಸ್ ಠಾಣೆಯ ಪಿಎಸ್ ಐ ಶರಣಪ್ಪ ಜಾಕನಳ್ಳಿ ಅವರ ತನಿಖೆಯಿಂದ ತಿಳಿದುಬಂದಿದೆ.
ಮೃತ ಸಿದ್ರಾಮನ ಹೆಂಡತಿ ಅಂಬಿಕಾ 10ನೇ ತರಗತಿಯಲ್ಲಿ ಚಿತ್ತಾಪುರ ಪಟ್ಟಣದಲ್ಲಿ ವಿದ್ಯಾಭ್ಯಾಸ ಮಾಡುವಾಗ ಆಟೋ ಚಾಲಕರಾಗಿದ್ದ ಮಾರುತಿ ಸಾಬಣ್ಣ, ತಾಂಡೂರಕರ ಭೋವಿ ಈತನ ಪರಿಚಯವಾಗಿ ಮುಂದೆ ಅ ಪರಿಚಯವು ಪ್ರೀತಿಯಲ್ಲಿ ಶುರುವಾಯಿತು. ಅವರಿಬ್ಬರ ಪ್ರೀತಿಯು ಅಂಬಿಕಾಳ ಮನೆಯಲ್ಲಿ ಗೊತ್ತಾಗಿ ಅಂಬಿಕಾಳ ತಂದೆ ತಾಯಿಯವರು ಅಂಬಿಕಾಳಿಗೆ ಮತ್ತು ಮಾರುತಿಗೆ ಬೈದು ಬುದ್ಧಿವಾದ ಹೇಳಿದ್ದರಿಂದ ಅವರಿಬ್ಬರ ಸಂಪರ್ಕ ಅಲ್ಲಿಗೆ ಕಡೆದು ಹೋಗಿತ್ತು.ನಂತರ ಅಂಬಿಕಾಳ ತಂದೆ-ತಾಯಿಯವರು ಅಂಬಿಕಾಳನ್ನು ಮಳಖೇಡ ಗ್ರಾಮದ ಸಿದ್ದರಾಮ ಪಾಟೀಲ ಅವರಿಗೆ ಮದುವೆ ಮಾಡಿದಾಗ ಮದುವೆಯಾದ 3 ತಿಂಗಳಲ್ಲಿಯೇ ಅಂಬಿಕಾ ಮಾರುತಿ ಇತನಿಗೆ ಫೆÇನ್ ಮಾಡಿ ಮತ್ತೆ ಸಂಪರ್ಕ ಬೆಳಸಿಕೊಂಡು ಅವರಿಬ್ಬರೂ ಲೈಂಗಿಕ ಸಂಪರ್ಕ ಮಾಡಲು ಅತ್ತೆ ಮತ್ತು ಗಂಡ ಅಡಚಣೆ ಆಗಬಹುದು ಅಂತಾ ಮಾರುತಿಯು ತಂದು ಕೊಡುವ ನಿದ್ದೆ ಗುಳಿಗೆಗಳನ್ನು, ಅತ್ತೆಗೆ ಮತ್ತು ಗಂಡನಿಗೆ ಹಾಕುತ್ತಾ ಸುಮಾರು 5 ವರ್ಷಗಳಿಂದ ಅಂಬಿಕಾಳು ತನ್ನ ಮನೆಗೆ ಮಾರುತಿಯನ್ನು ಕರೆಯಿಸಿಕೊಳ್ಳುತ್ತಿದ್ದಳು. ನವೆಂಬರ್ 2 ರಂದು ಅಂಬಿಕಾಳ ಅತ್ತೆ ತನ್ನ ತಂಗಿಯ ಹತ್ತಿರ ಬೆಂಗಳೂರಿಗೆ ಹೋಗಲು ರೈಲು ಗಾಡಿಗೆ ಟಿಕೇಟ್ ಬುಕ್ ಮಾಡಿದ ವಿಷಯ ಗೊತ್ತಾದ ಅಂಬಿಕಾ ಅಂದು ಸಾಯಂಕಾಲ 7 ಗಂಟೆಯ ಸುಮಾರಿಗೆ ಮಾರುತಿಗೆ ಫೆÇನ್ ಮಾಡಿ ಈಗ ನನ್ನ ಅತ್ತೆ ಬೆಂಗಳೂರಿಗೆ ಹೋಗುತ್ತಿದ್ದು ನನ್ನ ಅತ್ತೆಗೆ ಸೇಡಂ ರೈಲ್ವೇ ಸ್ಟೇಷನಗೆ ಬಿಟ್ಟು ಬರಲು ನನ್ನ ಗಂಡ ನನ್ನ ಅತ್ತೆಯ ಸಂಗಡ ಸೇಡಂಕ್ಕೆ ಹೋಗುತ್ತಿದ್ದು ನೀನು ಬೇಗನೆ ನಿದ್ದೆ ಗುಳಿಗೆ ತೆಗೆದುಕೊಂಡು ಬಾ ಅಂತಾ ಹೇಳಿದ ತಕ್ಷಣ ಮಾರುತಿಯು 8.15 ಪಿ.ಎಮ್ ಸುಮಾರಿಗೆ ಅಂಬಿಕಾಳ ಮನೆಗೆ ಬಂದು ಇಬ್ಬರು ಲೈಂಗಿಕಸಂಪರ್ಕದಲ್ಲಿ ತೊಡಗಿಕೊಂಡಾಗ ರಾತ್ರಿ 9-30 ಗಂಟೆಯ ಸುಮಾರಿಗೆ ಅಂಬಿಕಾಳ ಗಂಡ ಮನೆಗೆಬಂದಾಗ ಮಾರುತಿಯನ್ನು ಹಿಂದಿನ ಬಾಗಿಲಿನಿಂದ ಹೊರಗೆ ಕಳುಹಿಸಿ ಗಂಡನಿಗೆ ಚಹಾ ಮಾಡಿ ಅದರಲ್ಲಿ ನಿದ್ದೆಗುಳಿಗೆಯನ್ನು ಹಾಕಿಕೊಟ್ಟಾಗ ಮೃತ ಸಿದ್ರಾಮ ಅಂದು ರಾತ್ರಿ 11-30 ಗಂಟೆಯ ಸುಮಾರಿಗೆ ಗಾಢ ನಿದ್ರೆಗೆ ಜಾರಿದಾಗ ಅಂಬಿಕಾಳು ಪುನಃ ಮಾರುತಿಗೆ ಫೋನ್ ಮಾಡಿ ಮನೆಗೆ ಕರೆಯಿಸಿಕೊಂಡು ಮತ್ತೆ ಅವರು ಲೈಂಗಿಕ ಸಂಪರ್ಕ ಮಾಡಿ ಮನೆಯಲ್ಲಿ ಮಲಗಿಕೊಂಡಾಗ ನ.3 ರಂದು ಬೆಳಗಿನ ಜಾವ 4 ಗಂಟೆಯ ಸುಮಾರಿಗೆ ಸಿದ್ರಾಮನಿಗೆ ಎಚ್ಚರವಾಗಿ ಅವರು ಮಲಗಿದ್ದ ಕೋಣೆಗೆ ಹೋಗಿ ನೋಡಿ ಜಗಳ ಮಾಡಿ ಮನೆಯ ಮುಖ್ಯ ಬಾಗಿಲು ತೆರೆಯಲು ಹೋದಾಗ ಮಾರುತಿಯು ಸಿದ್ರಾಮನ ಕುತ್ತಿಗೆ ಹಿಡಿದುಕೊಂಡು ಹಾಲ್ನಲ್ಲಿ ನೆಲಕ್ಕೆ ಕೆಡವಿ ಎದೆಯ ಮೇಲೆಕುಳಿತುಕೊಂಡು ತನ್ನ ಕೈ ಮುಷ್ಟಿ ಮಾಡಿ ಜೋರಾಗಿ ಎದೆಗೆ ಗುದ್ದುತ್ತಾ ಕುತ್ತಿಗೆ ಹಿಸುಕುತ್ತಾ ತನ್ನ ಮೊಣಕಾಲಿನಿಂದ ಸಿದ್ರಾಮನ ಗುಪ್ತಾಂಗಕ್ಕೆ, ಜೋರಾಗಿ ಒದ್ದು ಗುಪ್ತಾಂಗವನ್ನು ಹಿಸುಕಿ ಅಂಬಿಕಾಳು ತಂದು ತಂದು ಕೊಟ್ಟ ರುಬ್ಬುಗಲ್ಲಿನಿಂದ ತಲೆಯ ಎಡ ಮಲಕಿಗೆ ಹೊಡೆದು ಕೊಂದು ಮಂಚದ
ಮೇಲೆ ಹಾಕಿದ ಕೊಲೆ ಪ್ರಕರಣವನ್ನು ಸೇಡಂ ವೃತ್ತದ ಪೆÇಲೀಸರು ಭೇಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.
ಮುಚ್ಚಿ ಹಾಕುವ ಯತ್ನ
ಕೊಲೆಯನ್ನು ಮುಚ್ಚಿಹಾಕಲು ಸಹಜ ಸಾವಿನಂತೆ ಬಿಂಬಿಸಲು ಆರೋಪಿಗಳು ಯತ್ನಿಸಿದ್ದರು. ಆದರೆ, ಮೃತನ ದೇಹದ ಮೇಲಿನ ಗಾಯಗಳು ಹಾಗೂ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಅನುಮಾನಾಸ್ಪದ ಅಂಶಗಳು ಕಂಡುಬಂದ ಹಿನ್ನೆಲೆಯಲ್ಲಿ ಪೆÇಲೀಸರು ತನಿಖೆ ತೀವ್ರಗೊಳಿಸಿದರು. ಕೇವಲ ಕೆಲವೇ ಗಂಟೆಗಳಲ್ಲಿ ಪೆÇಲೀಸರು ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.ಪತಿಯ ನಂಬಿಕೆಯನ್ನು ದ್ರೋಹ ಬಗೆದು, ಕ್ಷುಲ್ಲಕ ಕಾಮದಾಹಕ್ಕೆ ಬಲಿಯಾಗಿ ಹೆಂಡತಿಯೇ ಗಂಡನ ಜೀವ ತೆಗೆದಿರುವ ಈ ಘಟನೆ ಸ್ಥಳೀಯವಾಗಿ ತೀವ್ರ ಆಕ್ರೋಶ ಹಾಗೂ ಆಘಾತ ಮೂಡಿಸಿದೆ.




















