ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವಾರ್ಡ್ ನಂಬರ್ ೬೮ ವಾರ್ಡ್ ೬೯ ರಲ್ಲಿ ಬರುವ ಎಲ್ಲಾ ಪೌರಕಾರ್ಮಿಕರಿಗೆ ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅನೂಪ್ ಬಿಜವಾಡ ಅವರು ನಗರದ ತಮ್ಮ ನಿವಾಸದಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ಸನ್ಮಾನಿಸಿ ಬಟ್ಟೆ ಹಆಗೂ ಸಿಹಿ ವಿತರಿಸಿ ದೀಪಾವಳಿ ಹಬ್ಬದ ಶುಭಾಶಯವನ್ನು ಕೋರಿದರು. ಈ ಸಂದರ್ಭದಲ್ಲಿ ಲಲಿತಾ ಬಿಜವಾಡ, ಗಂಗಾ ಬಿಜವಾಡ, ದೀಪಾಲಿ ಬಿಜವಾಡ, ಕಲಪ್ಪಾ ಮೊರಬದ, ಸಂಜು ರಾಯಚೂರು, ಕರಿಯಪ್ಪಾ ಗುಡಿಹಾಳ, ಮೊನೇಶ್ ಗೋಕಾಕ ಉಪಸ್ಥಿತರಿದ್ದರು.