Home ಜಿಲ್ಲೆ ದಾನ ಧರ್ಮ ಮಾಡಿ ಬದುಕಿದರೆ ಮನುಕುಲ ಉಳಿಯುತ್ತದೆ:ಅಡವಿಲಿಂಗ ಶ್ರೀ

ದಾನ ಧರ್ಮ ಮಾಡಿ ಬದುಕಿದರೆ ಮನುಕುಲ ಉಳಿಯುತ್ತದೆ:ಅಡವಿಲಿಂಗ ಶ್ರೀ

ಸುರಪುರ:ಮಾ.13:ದಾನ ಧರ್ಮ ಸಂಸ್ಕøತಿ ಸಂಸ್ಕಾರ ಸತ್ಯ ಮತ್ತು ಕರುಣೆಯಿಂದ ಬದುಕಿದರೆ ಮನುಕುಲ ಉಳಿಯುತ್ತದೆ ಇಲ್ಲವಾದರೆ ನಾಶವಾಗುತ್ತದೆ ಎಂದು ವೀರಘಟ್ಟದ ಶ್ರೀ ಅಡಿವಿ ಲಿಂಗ ಮಹಾರಾಜ ತಿಳಿಸಿದರು

ನಗರದ ಸನ್‍ಶೈನ್ ಪೂರ್ವ ಪ್ರಾಥಮಿಕ ಹಾಗೂ ಯಶೋಧರ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕೋತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿ, ವಿದ್ಯಾ ದಾನ ಶ್ರೇಷ್ಠ ದಾನವಾಗಿದೆ ಗುರುವಿನ ಸ್ಥಾನ ದೊಡ್ಡದು ಮತ್ತು ಎಲ್ಲರೂ ಗೌರವಿಸುವಂತದ್ದು ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಅನುದಾನಿತ ಶಾಲಾ ಕಾಲೇಜುಗಳು ಹೋದಕ ಬೋಧಕೇತರ ಸಂಘದ ಅಧ್ಯಕ್ಷ ಸಾಹೇಬರೆಡ್ಡಿ ಇಟಗಿ ಮಾತನಾಡಿ, ಶಿಕ್ಷಣ ಸಂಸ್ಥೆಗಳ ಬೆಳವಣಿಗೆಗೆ ಪಾಲಕರ ಸಹಕಾರ ಮುಖ್ಯವಾಗುತ್ತದೆ ಮಗು ಉತ್ತಮ ಜ್ಞಾನ ಸಂಸ್ಕಾರ ಪಡೆಯುವಲ್ಲಿ ಶಿಕ್ಷಕರ ಪಾತ್ರ ಶ್ಲಾಘನೀಯವಾಗಿರುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಶಿವರಾಜ ನಾಯಕ ಜಹಾಗೀರದಾರ ಮಾತನಾಡಿ, ಶಿಕ್ಷಣ ಸಂಸ್ಥೆ ಬೆಳೆದು ಬಂದ ದಾರಿ, ದಾನಿಗಳ ಕೊಡುಗೆ ಮತ್ತು ಹೊಸ ತರಗತಿಗಳ ಆರಂಭದ ಕುರಿತು ವಿವರಿಸಿದರು ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಕಾರ್ಯಕ್ರಮದಲ್ಲಿ ಸುರಪುರ ಅರಸು ಮನೆತನದ ರಾಜಲಕ್ಷ್ಮಿ ನಾರಾಯಣ ನಾಯಕ ಭಾಗವಹಿಸಿ ಉದ್ಘಾಟನೆ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಮುಖ್ಯ ಗುರು ಜಿ ಸಂಪತ್‍ಕುಮಾರ ಗೂಡೂರ, ಮೈಲಾರಲಿಂಗೇಶ್ವರ ಎಂ ಎಸ್ ಡಬ್ಲ್ಯೂ ಮಹಾವಿದ್ಯಾಲಯದ ಪ್ರಾಂಶುಪಾಲ ಮಲ್ಲಿಕಾರ್ಜುನ ಕುಲಕರ್ಣಿ, ಶ್ರೀಮತಿ ರಾಣಿ ಜಾನಕಿ ದೇವಿ ಪ್ರೌಢಶಾಲೆಯ ಪ್ರಧಾನ ಗುರು ಹಣಮಂತರಾಯ ದೊರೆ, ಪ್ರಿಯದರ್ಶಿನಿ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲ ನಿಂಗಣ್ಣ ಹೆಗ್ಗಣದೊಡ್ಡಿ, ಉದ್ದಿಮೆದಾರ ಗ್ಯಾನ ಚಂದ ಜೈನ್, ಹಿರಿಯ ವಕೀಲ ದೇವೇಂದ್ರಪ್ಪ ಬೇವಿನಕಟ್ಟಿ ವೇದಿಕೆಯಲ್ಲಿದ್ದರು. ಶಿಕ್ಷಕ ರಜಾಕ ಭಾಗವಾನ ನಿರೂಪಿಸಿದರು, ಶಿಕ್ಷಕಿ ಸಹನಾ ಪಟವಾರಿ ಸ್ವಾಗತಿಸಿದರು, ಮುಖ್ಯಗುರು ಸಾಹೇಬಣ್ಣ ಕೊಣ್ಣೂರ ವಾರ್ಷಿಕ ವರದಿ ವಾಚಿಸಿದರು ಸಹ ಶಿಕ್ಷಕಿ ಶಿಲ್ಪ ವಂದಿಸಿದರು.