Home ಜಿಲ್ಲೆ ಕಲಬುರಗಿ ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಬಲಿ

ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಬಲಿ

ವಾಡಿ : ಅತ್ತೆ, ಮಾವನ ವರದಕ್ಷಿಣೆ ಕಿರುಕುಳ ಮತ್ತು ಗಂಡನ ದೈಹಿಕ ಹಾಗೂ ಮಾನಸಿಕ ಹಿಂಸೆಗೆ ಬೇಸತ್ತು ಗೃಹಿಣಿಯೊಬ್ಬಳು ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಚಿತ್ತಾಪುರ ಪಟ್ಟಣದಲ್ಲಿ ಜರುಗಿದೆ.

ರಮೀಜಾ ಅಬ್ದುಲ್ ಹುಸೇನ್ (24), ಮೃತ ದುದೈವಿ ಮಹಿಳೆ. ಚಿತ್ತಾಪುರ ತಾಲೂಕಿನ ಸಾತನೂರ ಗ್ರಾಮದ ಇಸ್ಮಾಯಿಲ್ ಮಹೇಬೂಬ್ ನಾಯ್ಕೋಡಿ ಅವರ ಪುತ್ರಿ ರಮೀಜಾ ಹಾಗೂ ಚಿತ್ತಾಪುರ ಪಟ್ಟಣದ ಸಂತೋಷ್ ನಗರ ಬಡಾವಣೆ ನಿವಾಸಿ ಅಬ್ದುಲ್ ಯಾಸಿನ್ ಶೇಖ್ ಅವರ ವಿವಾಹವು 5ವರ್ಷಗಳ ಹಿಂದೆ ಜರುಗಿತ್ತು.
ಮದುವೆಯಾದ ಬಳಿಕ ವರದಕ್ಷಿಣೆ, ಹಣ ಮತ್ತು ಒಡವೆ ತರುವಂತೆ ಒತ್ತಡ ಹಾಕುತ್ತಿದ್ದರು ಎನ್ನಲಾಗಿದೆ. ಗಂಡನ ಮನೆಯವರ ನಿರಂತರ ಕಿರುಕುಳಕ್ಕೆ ಬೇಸತ್ತ ರಮೀಜಾ, ಜು. 2ರಂದು ಕೀಟನಾಶಕ ಸೇವಿಸಿ ಸಾವಿಗೆ ಶರಣಾಗಿದ್ದಾಳೆ. ತಂದೆ ಇಸ್ಮಾಯಿಲ್ ಮೆಹಬೂಬ್ ನಾಯ್ಕೋಡಿ ಅವರು
ನೀಡಿದ ದೂರಿನನ್ವಯ ಪತಿ ಅಬ್ದುಲ್ ಯಾಸಿನ್ ಶೇಖ್, ಅತ್ತೆ ಸಾವೇರಾ, ಅಜೀಜ್ ಯಾಸಿನ್, ಮಾವ ಅಬ್ದುಲ್ ಗಫೂರ್ ವಿರುದ್ಧ ಚಿತ್ತಾಪುರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಚಿತ್ತಾಪುರ ಠಾಣೆಯ ಪಿಎಸ್‍ಐ ಮಂಜುನಾಥ್ ರೆಡ್ಡಿ ತಿಳಿಸಿದ್ದಾರೆ. ಈ ಕುರಿತು ಚಿತ್ತಾಪುರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.