
ಬೆಳಗಾವಿ,ಮೇ೨೮: ಮಕ್ಕಳ ಜ್ಞಾನಾರ್ಜನೆಯ ವೃದ್ಧಿಗೆ ಬೆಳಗಾವಿಗೆ ಒಂದು ಉತ್ತಮವಾದ ಕೋಚಿಂಗ್ ಅಗತ್ಯತೆ ಇತ್ತು. ಅದನ್ನು ಎಮಿನಂಟ್ ಕೋಚಿಂಗ್ ಕೇಂದ್ರದವರು ಪೂರ್ಣ ಮಾಡಿದ್ದಾರೆಂಬ ತೃಪ್ತಿ ಇದೆ. ಜತೆಗೆ ಇಲ್ಲಿ ಶಿಕ್ಷಣ ಪಡೆದಿರುವ ಮಕ್ಕಳು ಇನ್ನಷ್ಟು ಎತ್ತರಕೆ ಬೆಳೆಯಲಿ. ಅವರ ಭವಿಷ್ಯ ಉಜ್ವಲವಾಗಲಿ ಎಂದು ಮೇಯರ್ ಪ್ರೀತಿ ಕಾಮಕರ ಹೇಳಿದರು.
ನಗರದ ಖಾಸಗಿ ಮಾಲ್‌ನಲ್ಲಿ ಎಮಿನೆಂಟ್ ಕೋಚಿಂಗ್ ಕ್ಲಾಸಿಕ್ ವತಿಯಿಂದ ನಡೆದ ಬೇಸಿಗೆ ತರಬೇತಿ ವಿದ್ಯಾರ್ಥಿಗಳ ಬೀಳ್ಕೊಡುಗೆ, ವಿವಿಧ ಸ್ಪರ್ಧಾತ್ಮಕ ಶಾಲೆಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸನ್ಮಾನ, ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಉಪ ಮಹಾಪೌರ ಹನಮಂತ ಕೊಂಗಾಲಿ ಮಾತನಾಡಿ, ಇಲ್ಲಿ ಮಕ್ಕಳು ಉತ್ತಮ ಸಾಧನೆಯನ್ನು ನೋಡಿದರೆ ಇಲ್ಲಿನ ಶಿಕ್ಷಣ ವ್ಯವಸ್ಥೆ ಉತ್ಕöÈಷ್ಟಮಟ್ಟದ್ದಾಗಿದೆ ಎಂಬುವುದರಲ್ಲಿ ಎರಡು ಮಾತಿಲ್ಲ ಎಂದು ಹೇಳಿದರು.
ಬಿಜೆಪಿ ಮುಖಂಡ ಮುರಘೇಂದ್ರಗೌಡ ಪಾಟೀಲ, ನಿವೃತ್ತ ವಾಯುಸೇನೆ ಅಧಿಕಾರಿ, ನಿವೃತ್ತ ಜಿಲ್ಲಾ ಶಿಕ್ಷಣಾಧಿಕಾರಿ ಬಸವಲಿಂಗಪ್ಪ ಬಿ. ವಣ್ಣೂರ, ಲಿಟಲ್ ಸ್ಕಾಲರ್ಸ್ ಅಕಾಡೆಮಿಯ ಪ್ರಾಚಾರ್ಯರಾದ ಶೀಬಾ ಎಸ್. ನಾಗಲ್ಲಾ, ಕನ್ನಡಪ್ರಭ ಬ್ಯುರೋ ಮುಖ್ಯಸ್ಥ ಬ್ರಹ್ಮಾನಂದ ಹಡಗಲಿ ಮಾತನಾಡಿದರು.
ಎಮಿನೆಂಟ್ ಕೋಚಿಂಗ್ ಕೇಂದ್ರದ ಸಂಸ್ಥಾಪಕ ಮಂಜುನಾಥ ಜಿ. ಕೌಲಗಿ ಮಾತನಾಡಿ, ಮುಂದಿನ ದಿನಗಳಲ್ಲಿ ಶೈಕ್ಷಣಿಕ ರಂಗದಲ್ಲಿ ಮತ್ತಷ್ಟು ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತೇವೆ. ಜತೆಗೆ ನರ್ಸರಿಯಿಂದ ಹಿಡಿದು ಎಸ್‌ಎಸ್‌ಎಲ್‌ಸಿವರೆಗೆ ಶಾಲೆಯನ್ನು ತೆರೆದು, ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವ ಗುರಿ ಹೊಂದಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕ ನಾಗಪ್ಪ ಮೇಟಿ, ರಾಯಬಾಗ ಬಿಇಒ ಕಚೇರಿ ಸಮೂಹ ಸಂಪನ್ಮೂಲ ವ್ಯಕ್ತಿ ಸುಲೇಮಾನ ಎಂ. ಶೇಖ, ವಿಕಾಸ ಸಂಸ್ಥೆ ಸಂಸ್ಥಾಪಕ ಪ್ರಧಾನ ಕಾರ್ಯದರ್ಶ ಭಾಗ್ಯಲಕ್ಷಿ÷್ಮ ಎಂ. ಕೌಲಗಿ, ಆಡಳಿತಾಧಿಕಾರಿ ಸದಾನಂದ ಬಡ್ಡೂರ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಾಂತೇಶ ಒಕ್ಕುಂದ, ವಿಕಾಸ ಸಂಸ್ಥೆ ಗೌರವ ಅಧ್ಯಕ್ಷರು ಸೋಮಶೇಖರ ಸುಲಿಗಾವಿ, ವಿಕಾಸ ಸಂಸ್ಥೆ ಉಪಾಧ್ಯಕ್ಷರು ಗುರುಸಿದ್ದಪ್ಪ ಕೌಲಗಿ, ಸಂಸ್ಥೆಯ ಸಂಘಟನಾ ಕಾರ್ಯದರ್ಶಿ ಚನ್ನಬಸಪ್ಪ ಪಡಗಾನೂರ, ಸಂಸ್ಥೆಯ ನಿರ್ದೇಶಕ ಸೋಮಶೇಖರ ಪಡಗಾನೂರ ಇದ್ದರು.

























