Home ಜಿಲ್ಲೆ ಕಲಬುರಗಿ ವಿಶ್ವನಾಥ ತೋಟ್ನಳ್ಳಿಗೆ ಗೌರವ ಡಾಕ್ಟರೇಟ್

ವಿಶ್ವನಾಥ ತೋಟ್ನಳ್ಳಿಗೆ ಗೌರವ ಡಾಕ್ಟರೇಟ್

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಕಲೆ, ಸಾಹಿತ್ಯ, ಸಂಗೀತ, ಜಾನಪದ ಕಲಾವಿದರನ್ನು ಬೆಳೆಸಿದ ಕೀರ್ತಿ ವಿಶ್ವನಾಥ ತೋಟ್ನಳ್ಳಿಯವರಿಗೆ ಸಲ್ಲುತ್ತದೆ.ಕಲಬುರಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ತೋಟ್ನಳ್ಳಿಗ್ರಾಮದ ಶ್ರೀಮತಿ ಮಲ್ಲಮ್ಮ ಮತ್ತು ಚಂದ್ರಪ್ಪ ಅವರ ಮಗನಾಗಿ ಜನಿಸಿದ ಇವರು ಚಿತ್ರಕಲಾ ಪದವೀಧರರಾಗಿದ್ದರು.
ಇವರು ಕಲಬುರಗಿ ಜಿಲ್ಲೆಯಲ್ಲಿ ಹಲಿಗೆ ವಾದನ, ಪೆÇೀತರಾಜ ಕುಣಿತ, ಶಹನಾಯಿ ವಾದನ, ಜೋಗತಿ ನೃತ್ಯ ಹೀಗೆ ನಾನಾ ಕಲಾ ಪ್ರಕಾರಗಳಲ್ಲಿ ಸುಮಾರು 30 ವರ್ಷಗಳಿಂದ ಕಲಾ ಪ್ರದರ್ಶನವನ್ನು ಮಾಡಿ ರಾಜ್ಯದಾದ್ಯಂತ ಜಾನಪದ ಕಲಾ ಕ್ಷೇತ್ರದಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ.ಕನ್ನಡ ಮತ್ತು ಸಂಸ್ಕøತಿ ಇಲಾಖೆಯಲ್ಲಿ ಜಾನಪದ ಜಾತ್ರೆ, ಸಾಂಸ್ಕೃತಿಕ ಉತ್ಸವ, ಯುವ ಸೌರಭ,ಮತ್ತು ಗಣ್ಯ ವ್ಯಕ್ತಿಗಳ ಜಯಂತಿಗಳ ಮೆರವಣಿಗೆಯಲ್ಲಿ,ಕನ್ನಡ ರಾಜ್ಯೋತ್ಸವ, ಗಣರಾಜ್ಯೋತ್ಸವ ಕಲ್ಯಾಣ ಕರ್ನಾಟಕ ಉತ್ಸವ, ದಸರಾ ಉತ್ಸವ ಹೀಗೆ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಕಲಾ ಸೇವೆ ಸಲ್ಲಿಸಿದ್ದಾರೆ.ಇವರ ಸೇವೆಯನ್ನು ಪರಿಗಣಿಸಿ ಬೆಂಗಳೂರಿನ ಅಮೇರಿಕನ್ ವಿಸ್ಡಮ್ ಪೀಸ್ ವಿಶ್ವವಿದ್ಯಾಲಯ ವತಿಯಿಂದ ಇದೇ ತಿಂಗಳ ದಿನಾಂಕ 31 ರಂದು ಇವರನ್ನು ಜಾನಪದ ಕಲಾವಿದನೆಂದು ಗುರುತಿಸಿ “ಗೌರವ ಡಾಕ್ಟರೇಟ್” ನೀಡಿ ಸನ್ಮಾನಿಸುತ್ತಿದ್ದಾರೆ.ಈ ಒಂದು ಕೀರ್ತಿಗೆ ಕಲಬುರಗಿ ಜಿಲ್ಲೆಯ ಜಾನಪದ ಕಲಾಕ್ಷೇತ್ರಕ್ಕೆ ಕಲಾವಿದರಿಗೆ ಸಂದ ಗೌರವ ಮತ್ತು ಹೆಮ್ಮೆಯ ಸಂಗತಿಯಾಗಿದೆ ಎಂದು ಪರಮ ಪೂಜ್ಯ ಷ.ಬ್ರ.ಡಾ.ತ್ರಿಮೂರ್ತಿ ಶಿವಾಚಾರ್ಯರು,ಸಮಸ್ತ
ತೋಟ್ನಳ್ಳಿ ಹಾಗೂ ಕುಸನೂರ ಗ್ರಾಮಸ್ತರು ಸಂತಸ ವ್ಯಕ್ತಪಡಿಸಿದ್ದಾರೆ ಎಂದು ಸಮಗ್ರ ಅಭಿವೃದ್ಧಿ ಸಂಸ್ಥೆಯ ಕಾರ್ಯದರ್ಶಿ ನಾಗರಾಜ ಬಿರಾದಾರ ಅವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.