Home ಜಿಲ್ಲೆ ಹೊನಲು ಬೆಳಕಿನ ಕಬ್ಬಡ್ಡಿ ಪಂದ್ಯಾವಳಿ ಮಹೇಶ್ ಯಾದವ್ ಚಾಲನೆ

ಹೊನಲು ಬೆಳಕಿನ ಕಬ್ಬಡ್ಡಿ ಪಂದ್ಯಾವಳಿ ಮಹೇಶ್ ಯಾದವ್ ಚಾಲನೆ

ಸುರಪುರ:ಮಾ.13: ತಾಲೂಕಿನ ಪೇಠ ಅಮ್ಮಾಪುರ ಗ್ರಾಮದಲ್ಲಿ ಶ್ರೀ ರಾಮಲಿಂಗೇಶ್ವರ ಮಂಟೂರ ಶಾಖಾ ಮಠದ 25ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಹೊನಲು ಬೆಳಕಿನ ಕಬ್ಬಡ್ಡಿ ಪಂದ್ಯಾವಳಿ ನಡೆಸಲಾಯಿತು.

ಪಂದ್ಯಾವಳಿಗೆ ಯುವ ಮುಖಂಡ ಮಹೇಶ್ ವಿ ಯಾದವ್ ಚಾಲನೆ ನೀಡಿ ಮಾತನಾಡಿ,ಪ್ರತಿಯೊಬ್ಬ ವ್ಯಕ್ತಿಗೂ ಕ್ರೀಡೆ ಎನ್ನುವುದು ಮುಖ್ಯವಾಗಿದೆ ಕ್ರೀಡೆಯಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿ ಯಾಗಲಿದೆ.ಎಲ್ಲ ಗ್ರಾಮಗಳ ಕ್ರೀಡಾಪಟುಗಳು ತುಂಬಾ ಹರ್ಷ ದಿಂದ ಭಾಗವಳಿಸಿರುವಿರಿ ಯಾವುದೇ ರೀತಿಯ ವಿವಾದಗಳಿಗೆ ಆಸ್ಪದ ನೀಡದೆ ಸೋಲು ಗೆಲುವು ಸಮಾನವಾಗಿ ಸ್ವೀಕರಿಸಿ ಕ್ರೀಡಾ ಪ್ರೇಮವನ್ನು ಎತ್ತಿ ಹಿಡಿಯುವಂತೆ ಮನವಿ ಮಾಡಿದರು.

ನಾಲ್ಕು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಂದ ಒಟ್ಟು 15 ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು.

ಕಾರ್ಯಕ್ರಮದ ಸಾನಿಧ್ಯವನ್ನು ವೇದಮೂರ್ತಿ ಅಮರಯ್ಯ ಸ್ವಾಮಿ ಜಾಲಿಬೆಂಚಿ ವಹಿಸಿದ್ದರು,ಅಧ್ಯಕ್ಷತೆಯನ್ನು ಶ್ರೀ ಪೂಜ್ಯ ರಾಮಲಿಂಗೇಶ್ವರ ಮಠದ ರಾಮ ಶರಣರು ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಶಿವಮಾನಯ್ಯ.ಎಲ್.ಡಿ ನಾಯಕ ದೇವರಗೋನಾಲ್, ಶ್ರವಣಕುಮಾರ ಡೊಣ್ಣಿಗೇರ, ಶರಣು ನಾಯಕ್ ಜೈ ಶ್ರೀ ರಾಮ್, ಸಿದ್ದು ಸಾಹುಕಾರ ಕಂಗಳ, ನಿಂಗಣ್ಣ ಕುಳಗೇರಿ ವಾಗಣಗೇರಿ, ಮಲ್ಲಣ್ಣ ಸಾಹುಕಾರ ಜಾಲಿಬೆಂಚಿ, ಹಣಮಂತ್ರಾಯ ತನಿಕೆದಾರ, ವೆಂಕಟೇಶ್ ಕಲಾಲ್, ತಿರುಪತಿ ಯಂಕಗೋಳ್, ಮಹೇಶ್ ಸರ್ವಿ, ಹನುಮೇಶ್ ಯಾದವ್, ವೆಂಕಟೇಶ್ ಜಾಲಹಳ್ಳಿ,ಸನ್ನಿ ಯಾದವ,ನಾಗಪ್ಪ ಹಡಪದ್,ಪ್ರಮೋದ ರೆಡ್ಡಿ, ಪ್ರಕಾಶ್ ಸಮೇದ,ವೆಂಕಟೇಶ ರಾವೂರ್ ಉಪಸ್ಥಿತರಿದ್ದರು .

ಮೌನೇಶ್ ಗುತ್ತೇದಾರ್, ಆಕಾಶ್ ಕಾಗಿ, ಸಿದ್ದಪ್ಪ ಸಾಲಿ, ಟಿ.ಎಚ್. ಪಾಟೀಲ್, ವಾಸುದೇವ ಯಾದವ್, ಗುರುರಾಜ, ಭೀಮರಾಯ ದೇವರಗೋನಾಲ,ದೇವು ಸುರಪುರ,ನಿಂಗಣ್ಣ ಅವರು ತೀರ್ಪುಗಾರರಾಗಿದ್ದರು. ವಿವೇಕಾನಂದ ಮತ್ತು ಪುನೀತ್ ರಾಜ್ ಕುಮಾರ ಯುವಶಕ್ತಿ(ಪವರ್ ಆಫ್ ಯೂತ್ ) ಯುವಕರ ಕಮಿಟಿ ಸದಸ್ಯರು ಭಾಗವಹಿಸಿದ್ದರು.

ಮಲ್ಲಿಕಾರ್ಜುನ ರೆಡ್ಡಿ ಅಮ್ಮಾಪುರ ಪ್ರಾಸ್ತಾವಿಕವಾಗಿ ಮಾತನಾಡಿದರು, ವೆಂಕಣ್ಣ ಯಾದವ ನಿರೂಪಿಸಿದರು.

ಪಂದ್ಯಾವಳಿಯಲ್ಲಿ ಭಾಋವಹಿಸಿದ್ದ ಪವರ್ ಆಫ್ ಯೂತ್ ಪೇಠ ಅಮ್ಮಾಪುರ ತಂಡ ಪ್ರಥಮ, ದೋಸ್ತಿ ಬಾಯ್ಸ್ ತಂಡ ಪೇಠ ಅಮ್ಮಾಪುರ ದ್ವಿತೀಯ ಹಾಗೂ ವಾಗಣಗೇರಿ ಬಾಯ್ಸ್ ತಂಡ ತೃತೀಯ ಬಹುಮಾನ ಪಡೆದವು. ದೋಸ್ತಿ ದರ್ಬಾರ್ ಪೇಠ ಅಮ್ಮಾಪುರ ತಂಡದ ಈಕ್ವಾಲ್ ಬೆಸ್ಟ್ ರೈಡರ್, ಯಮನಪ್ಪ ಪ್ಯಾಟಿ ಬೆಸ್ಟ್ ಕ್ಯಾಚರ್ ಹಾಗೂ ರಾಜು ಬೊಮ್ಮನಹಳ್ಳಿ ಬೆಸ್ಟ್ ಆಲ್ ರೌಂಡರ್ ಬಹುಮಾನ ಪಡೆದುಕೊಂಡರು.