
ಚನ್ನಮ್ಮನ ಕಿತ್ತೂರು-,ಮಾ.೨೯: ೩೫ ಲಕ್ಷ ರೂ. ವೆಚ್ಚದಲ್ಲಿ ತಾಲೂಕಿನ ಡೊಂಬರಕೊಪ್ಪ ಹಾಗೂ ಮಲ್ಲಾಪೂರ ಕೆಎ ಸಿಸಿ ರಸ್ತೆ ಕಾಮಗಾರಿಗೆ ಶಾಸಕ ಬಾಬಾಸಾಹೇಬ ಪಾಟೀಲ ಗುದ್ದಲಿ ಪೂಜೆ ನೆರೆವೇರಿಸಿದರು.
ನಂತರ ಅವರು ಮಾತನಾಡಿ ಸರ್ಕಾರಕ್ಕೇನು ಹಣದ ಕೊರತೆಯಿಲ್ಲ ಹಂತ-ಹAತವಾಗಿ ಗ್ರಾಮದ ಅಭಿವೃದ್ದಿ ಮಾಡಿಸುತ್ತೇನೆ. ಒಟ್ಟಾರೆಯಾಗಿ ಕ್ಷೇತ್ರವನ್ನು ಅಭಿವೃದ್ಧಿಪಡಿಸುವುದೇ ಗುರಿ. ಆದ್ದರಿಂದ ಜನರಿಗೆ ವಿವಿಧ ಸೌಕರ್ಯ ಒದಗಿಸುವ ಮೂಲಕ ಅನುಕೂಲ ಮಾಡಿಕೊಡಲಾಗುವುದು. ಈಗಾಗಲೇ ೯೦ ರಷ್ಟು ಸಿಸಿ ರಸ್ತೆ, ಒಳಚರಂಡಿ, ಸಿಡಿ ಸೇರಿದಂತೆ ಕಾಮಗಾರಿಗಳು ಮುಗಿದಿವೆ ಇನ್ನೆಡರು ವರ್ಷಗಳಲ್ಲಿ ಉಳಿದ ೧೦% ಕಾಮಗಾರಿಗಳನ್ನು ಪೂರ್ಣಗೊಳಿಸಿ ಸಮಸ್ಯೆ ಪರಿಹರಿಸಲಾಗುವುದೆಂದರು.
ಈ ವೇಳೆ ಮಾಜಿ.ಮ.ಸ.ಸ.ಕಾ. ನಿರ್ದೇಶಕ ಲಕ್ಷö್ಮಣ ಬುರ್ಲಿ ಮಡಿವಾಳಪ್ಪ ಗುಡಗಿ, ನವೀನ ಯಳ್ಳೂರ, ಅಶಪಾಕ ಹವಾಲ್ದಾರ, ಮಂಜುನಾಥ ಗಂಗಪ್ಪನವರ, ಗುತ್ತಿಗೆದಾರರುಗಳಾದ ವಿನಾಯಕ ಮರಡಿ, ಶಿವಯೋಗಿ ದೊಡಮನಿ, ಕೃಷ್ಣಾ ಬಾಳೇಕುಂದರಗಿ, ನಿಂಗಪ್ಪ ಮಾಟ್ಟೋಳ್ಳಿ, ಬಸಯ್ಯಾ ಹಿರೇಮಠ, ಗ್ರಾಮದ ಹಿರಿಯರು, ಸಾರ್ವಜನಿಕರಿದ್ದರು.






















