
ಜೇವರಗಿ,ಏ 15: ಶ್ರೀ ಮಹಾಲಕ್ಷ್ಮೀ ಮಹಿಳಾ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದ ವತಿಯಿಂದ ಗಂವಾರದಲ್ಲಿ ಐದು ದಿನಗಳ ಕಾಲ ನಡೆಯುವ ರಾಷ್ಟ್ರೀಯ ಸೇವಾ ಯೋಜನಾ ಶಿಬಿರದ ಕಾರ್ಯಕ್ರಮಕ್ಕೆ ತ್ರಿವಿಕ್ರಮಾನಂದ ಸರಸ್ವತಿ ಮಹಾಸ್ವಾಮಿಗಳ ಮಠದ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಐದನೇ ದಿನದ
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಭಾಗದ ಕಾಲೇಜಿನ ಉಪನ್ಯಾಸಕ ಸುರೇಶ ಕುಮಾರ್ ಹಿರೇಮಠ ವಹಿಸಿಕೊಂಡಿದ್ದರು.ಕಾರ್ಯಕ್ರಮವನ್ನು ಉದ್ಘಾಟಿಸಿ ,ಮಾತನಾಡಿದ ಅವರು ಸಾಧನೆಗೆ ಶ್ರಮವೇ ಮೂಲ ಎಂಬುದು ಅಕ್ಷರಶಃ ಸತ್ಯವಾದ ಮಾತು ಶ್ರಮ ಏವ ಜಯತೆ ಯಾವುದೇ ವಿಷಯವನ್ನು ಕರಗತ ಮಾಡಿಕೊಳ್ಳಲು ಅಭ್ಯಾಸ ಮಾಡಬೇಕು, ಜ್ಞಾನ ಇದ್ದವನು ಬಾಗುತ್ತಾನೆ, ಎಂದಿಗೂ ಬೀಗುವುದಿಲ್ಲ ಪ್ರಯತ್ನ ಮತ್ತು ಪರಿಶ್ರಮ ಪಟ್ಟಾಗ ಯಶಸ್ಸು ತಾನಾಗಿ ಒಲಿಯುತ್ತದೆ. ಎಂದರು.ಮುಖ್ಯ ಅತಿಥಿಗಳಾಗಿ ಜೇವರ್ಗಿಯ ಸರಕಾರಿ ಐಟಿಐ ಕಾಲೇಜಿನ ಪ್ರಭಾರಿ ಪ್ರಾಚಾರ್ಯ ಅಶೋಕ ಕಾಬಾ, ಉಪನ್ಯಾಸಕರುಗಳಾದ ಸುಧಾಕರ್ ಚಿಕ್ಕಮಠ, ಬಸನಗೌಡ ಪಾಟೀಲ್ ಪಾಲ್ಗೊಂಡರು.
ಕಾಲೇಜಿನ ಪ್ರಾಚಾರ್ಯ ಡಾ. ಧರ್ಮಣ್ಣ ಕೆ ಬಡಿಗೇರ್, ಅಧ್ಯಕ್ಷೆಯರಾದ ಮಂಜುಳಾ ಡಿ ಬಡಿಗೇರ್, ಉಪನ್ಯಾಸಕರಾದ ಶರಣು ಕುಮ್ಮನಸಿರಸಗಿ,ಸಿದ್ದಲಿಂಗ ಬಡಿಗೇರ್, ಶಾರದಾ ಬಿ ತಳವಾರ್, ಸಾವಿತ್ರಿ ಜಿ ಮನಗೂಳಿ ಉಪಸ್ಥಿತರಿದ್ದರು.ವಿದ್ಯಾರ್ಥಿನಿ ಪ್ರತಿನಿಧಿ ಶೃತಿ ಎಂ. ಐದನೇ ದಿನದ ಕಾರ್ಯಕ್ರಮವನ್ನು ಬಿ. ಕಾಂ ಎರಡನೇ ಸೆಮಿಸ್ಟರ್ ನ ವಿ ಕೃ ಗೋಕಾಕ್ ತಂಡದಿಂದ ಅಚ್ಚುಕಟ್ಟಾಗಿ ನೆರವೇರಿಸಿದರು ವಿದ್ಯಾರ್ಥಿ ಗಳಾದ ಭವಾನಿ ಶಕಾಪುರ್ ಮಹಾನಂದ ನಿರೂಪಿಸಿದರು, ಮಹಾದೇವಿ ಹಾಗೂ ಭೂಮಿಕಾ ಸ್ವಾಗತ,ಪ್ರಾರ್ಥನೆ ಗೀತೆ ಪ್ರಸ್ತುತಪಡಿಸಿದರು.






















